ಬೆಂಗಳೂರು ಮೇಯರ್ ಆಯ್ಕೆಗೆ ವುಡ್‌ಲ್ಯಾಂಡ್ಸ್‌ನಲ್ಲಿ ಮಂತ್ರಾಲೋಚನೆ
ಬೆಂಗಳೂರು : ಮೊನ್ನೆ ಯಾರೋ ಟೂವ್ಹೀಲರ್‌ಹೋಕರು ಗೊಣಗುತ್ತಿದ್ದರು- ‘ರಸ್ತೆಗಳೇ ಹೊಂಡಗಳಾಗಿರುವಾಗ ಹಂಪ್ಯಾತಕೋ ಶಿವನೇ’. ಹಂಪು ಮಾಡುವುದೂ ಒಂದು ಕಲೆ. ರಸ್ತೆ ಮೇಲೆ ಕತ್ತಿಯಿಟ್ಟಂತೆ ಇರಕೂಡದು. ಒಂಟೆ ಮೈಲಿನ ಡುಬ್ಬದಂತೆಯೂ ಅಲ್ಲ. ಗಾಡಿಯ ವೇಗ ಕಡಿಮೆ ಮಾಡಲು ಅದು ರಸ್ತೆಯ ಮೇಲಿನ ಸಪಾಟು ದಿಣ್ಣೆಯಾಗಿರಬೇಕು ಅಷ್ಟೆ. ಈ ಮಾತು ಯಾಕೆಂದರೆ, ಬೆಂಗಳೂರಿನ ಪ್ರತಿಶತ 90 ರಸ್ತೆ ಡುಬ್ಬಗಳು ಅಕ್ರಮ ಅಥವಾ ಅವ್ಯವಸ್ಥಿತ ಎಂಬುದು ಇದೀಗ ಪಾಲಿಕೆಯ ಚರ್ಚೆಯ ವಸ್ತು !
ಹೊಸದಾಗಿ ಚುನಾಯಿತರಾದ ಕಾರ್ಪೊರೇಟ್‌ಗಳ ಕೂಟ. ಸದ್ಯದಲ್ಲೇ ಅದಕ್ಕೊಂದು ಹೊಸ ಮೇಯರ್. ವುಡ್‌ಲ್ಯಾಂಡ್ಸ್‌ನಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಚುನಾಯಿತ ಕಾರ್ಪೊರೇಟರ್‌ಗಳು ಮಂಗಳವಾರ ಸಭೆ ಸೇರಿ, ಮುಂದೇನು, ಯಾರು ಮೇಯರಾಗಬೇಕು ಎಂಬಿತ್ಯಾದಿ ಮಾತುಕತೆ ನಡೆಸಿರುವಾಗಲೇ ಈ ಅಕ್ರಮ ಡುಬ್ಬಗಳ ವಿಚಾರಧಾರೆ ಕಾರ್ಪೊರೇಷನ್ನಿನಲ್ಲಿ ಕೇಳಿಬರುತ್ತಿದೆ. ವುಡ್‌ಲ್ಯಾಂಡ್ಸಿನಲ್ಲಿ ಈ ವಿಷಯ ಕೇಳಿ ಬರಲಿಲ್ಲ. ಸರಬರನೆ ಗದ್ದುಗೆ ಏರುವ ವೇಗಿಗಳಿಗೆ ಹಂಪ್ ತಡೆ ಬೇಕಿಲ್ಲ. ‘ಮಹಾ ಸ್ವಾಮಿಗಳೇ, ನಮ್ಮ ವಾಹನಗಳಿಗೂ ಹಾಗೇ. ಎಲ್ಲಾ ಕಡೆ ಹಂಪ್ ತಡೆ ಬೇಡ ಎನ್ನುತ್ತಾರೆ’ ಗಾಡಿಹೋಕರು.
ಕಾರ್ಪೊರೇಟರ್ ಎಂ.ಗೋಪಾಲ ರೆಡ್ಡಿ ಹೇಳುತ್ತಾರೆ- ಶಿಫಾರಸ್ಸು, ಅಧಿಕಾರವುಳ್ಳ ಕೆಲವರು ತಮ್ಮ ಮಕ್ಕಳು ರೋಡ್ ಕ್ರಾಸ್ ಮಾಡಲು ತೊಂದರೆ ಆಗದಿರಲಿ ಅಂತ ತಮಗೆ ಬೇಕಾದೆಡೆಯೆಲ್ಲಾ ಹಂಪ್ ಹಾಕಿಸಿಕೊಂಡಿದ್ದಾರೆ.
ಮೇಯರ್ ಗದ್ದುಗೆಯ ಕೊನೆ ದಿನಗಳಲ್ಲಿರುವ ಪ್ರೇಮಾ ಕಾರ್ಯಪ್ಪ ಅವರಿಗೆ ತಮ್ಮ ಮಾರುತಿ ಸೇವಾ ನಗರದ ವಾರ್ಡ್‌ನಲ್ಲೂ ಅಕ್ರಮ, ಅಸಮರ್ಪಕ ಹಂಪ್‌ಗಳು ಕಣ್ಣಿಗೆ ಬಿದ್ದಿವೆ. ಅವುಗಳನ್ನೆಲ್ಲಾ ಕೆತ್ತಿಸುವ ಕೆಲಸಕ್ಕೂ ಚಾಲನೆ ಕೊಟ್ಟಾಗಿದೆ. ಅಲಸೂರಿನಲ್ಲಂತೂ ಡುಬ್ಬಗಳು ವಾಹನಗಳ ಮಗುಚಿ ಹಾಕುತ್ತಿವೆ. ಅಲ್ಲಿ ಡುಬ್ಬ ಸಪಾಟು ಕೆಲಸ ಜೋರಾಗಿದೆ.
ಮುಂದಿನ ಮೇಯರ್ ಯಾರು?
ಅಂದಹಾಗೆ, ಕೆ.ಚಂದ್ರಶೇಖರ್ ಹಾಗೂ ಪಿ.ಆರ್.ರಮೇಶ್ ಮೇಯರ್ ಗಾದಿಗೆ ಕೇಳಿಬರುತ್ತಿರುವ ಹೆಸರುಗಳು. ಇಬ್ಬರೂ ಸತತ ಮೂರು ಬಾರಿ ಕಾರ್ಪೊರೇಟರ್‌ಗಳು. ಆದರೆ, ಪದ್ಮನಾಭನಗರ ವಾರ್ಡ್‌ನಲ್ಲಿ 10 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಚಂದ್ರಶೇಖರ್ ಫೇವರೇಟ್. ಯಾರೇ ಬರಲಿ, ಕತ್ತಿಯಂಥಾ ಡುಬ್ಬಗಳನ್ನು ಇಲ್ಲವಾಗಿಸಲಿ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications