ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ ಪರಿಸ್ಥಿತಿ :ಬನವಾಸಿ ಕದಂಬೋತ್ಸವ,ಕರಾವಳಿ ಉತ್ಸವಗಳು ಸರಳ

By Staff
|
Google Oneindia Kannada News

ಕಾರವಾರ: ವಾರ್ಷಿಕ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಬನವಾಸಿಯ ಕದಂಬೋತ್ಸವ ಹಾಗೂ ಕಾರವಾರದ ಕರಾವಳಿ ಉತ್ಸವಗಳನ್ನು ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಡಿಸೆಂಬರ್‌ 22 ಅಥವಾ 23ರಂದು ಬನವಾಸಿಯಲ್ಲಿ ಕದಂಬೋತ್ಸವ ಹಾಗೂ ಜನವರಿ ತಿಂಗಳಲ್ಲಿ ಕರಾವಳಿ ಉತ್ಸವವನ್ನು ಸರಳವಾಗಿ ಆಚರಿಸಲು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದ ಸಭೆಯಲ್ಲಿ ಭಾನುವಾರ ನಿರ್ಧರಿಸಲಾಯಿತು. ಇದೇ ರೀತಿ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಇತರ ಸಾಂಸ್ಕೃತಿಕ ಉತ್ಸವಗಳನ್ನು ಎರಡು ದಿನಕ್ಕೆ ಬದಲಾಗಿ ಒಂದೇ ದಿನದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಕರಾವಳಿ ಉತ್ಸವಗಳು ಕಳೆದ ಎರಡು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ರದ್ದಾಗುತ್ತಲೇ ಇವೆ. ಈ ಬಾರಿ ಒಂದು ವಾರಕ್ಕೆ ಬದಲಾಗಿ ಎರಡೇ ದಿನಗಳ ಕರಾವಳಿ ಉತ್ಸವವನ್ನು ಆಚರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಯನ್ನೇ ದೃಷ್ಠಿಯಲ್ಲಿಟ್ಟುಕೊಂಡು ಉತ್ಸವವನ್ನು ಆಯೋಜಿಸಬೇಕು ಎಂದು ದೇಶಪಾಂಡೆ ಸಭೆಯಲ್ಲಿ ಸಲಹೆ ಮಾಡಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X