ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ನೂತನ ವರ್ಗಾವಣಾ ನೀತಿ

By Staff
|
Google Oneindia Kannada News

ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹೊಸ ವರ್ಗಾವಣೆ ನೀತಿಯನ್ನು ಸರ್ಕಾರ ಸೋಮವಾರ ಅಳವಡಿಸಿದೆ ಎಂದು ವಾರ್ತಾ ಸಚಿವ ಎಂ.ಶಿವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋಮವಾರ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ- ಪಂಚಾಯತ್‌ ರಾಜ್‌ ಸಚಿವ ಎಂ.ವೈ. ಘೋರ್ಪಡೆ ನೇತೃತ್ವದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿದ ನೂತನ ವರ್ಗಾವಣಾ ನೀತಿಯನ್ನು ಸಂಪುಟ ಸಭೆ ಒಪ್ಪಿಕೊಂಡಿದೆ ಎಂದರು.

ಪ್ರತಿ ಇಲಾಖೆಯಲ್ಲಿನ ಒಟ್ಟು ಸಿಬ್ಬಂದಿಯಲ್ಲಿ ಪ್ರತಿಶತ 5 ಮೀರದಂತೆ ವರ್ಗಾವಣೆ ಮಾಡಲು ಅಧಿಕಾರವುಳ್ಳ ಕೇಡರ್‌ ಮೇನೇಜ್‌ಮೆಂಟ್‌ಗಳನ್ನು ಹೊಸ ನೀತಿಯ ಅನ್ವಯ ಸರ್ಕಾರ ನೇಮಿಸಲಿದೆ. ಜಿಲ್ಲಾಧಿಕಾರಿಗಳು ಕೇಡರ್‌ ಮೇನೇಜ್‌ಮೆಂಟ್‌ನ ಮುಖ್ಯಸ್ಥರಾಗಿದ್ದು, ಅವರು ಸಿ ಮತ್ತು ಡಿ ವರ್ಗಗಳ ಸಿಬ್ಬಂದಿಯ ಅಂತರ ಜಿಲ್ಲೆಯ ವರ್ಗಾವಣೆಯನ್ನು ನಿರ್ಣಯಿಸುವರು. ಎ ಮತ್ತು ಬಿ ವರ್ಗದ ಅಧಿಕಾರಿಗಳ ವರ್ಗಾವಣೆ ಸಂಬಂಧ ಆಯಾ ಇಲಾಖೆಯ ಸಚಿವರ ನೇತೃತ್ವದ ಸಮಿತಿ ನಿರ್ಣಯ ಕೈಗೊಳ್ಳುವುದು.

ನೂತನ ವರ್ಗಾವಣೆ ನೀತಿಯು ಪಾರದರ್ಶಕವಾಗಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಎಂದು ಶಿವಣ್ಣ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X