ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸದ ಕೃಷ್ಣ ವರ್ಚಸ್ಸು !

By Staff
|
Google Oneindia Kannada News

ಬೆಂಗಳೂರು :ಮುಂದದಿನ ದಶಕದಲಲಿ ಕಂಪ್ಯ್ಯೂಟರಉದ್ದದ್ದಿಮೆು ಮರುಹುಟ್ಟ್ಟು- ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತೆ ಗೆದ್ದಿದ್ದಾರೆ, ಈ ಮೂಲಕ ಅವರ ಚರಿಷ್ಮಾ ಇನ್ನೂ ಚಾಲ್ತಿಯಲ್ಲಿರುವುದು ಸ್ಪಷ್ಟವಾಗಿದೆ. ಸೋನಿಯಾ ಮೇಡಂ ಅವರಿಗೆ ಗೆಲುವಿನ ಸುದ್ದಿಯನ್ನು ಕೃಷ್ಣ ಎಗ್ಗಿಲ್ಲದೆ ಕಳುಹಿಸಬಹುದು.

ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಬಿಜೆಪಿಯ ಭದ್ರನೆಲೆ ಕರಾವಳಿಯಲ್ಲೂ ಕಾಂಗ್ರೆಸ್‌ನದೇ ಅಲೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವುದು ಖಚಿತವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರತಿಶತ 62 ರಷ್ಟು ಮುನ್ನಡೆ ಸಾಧಿಸಿದೆ. ಉಭಯ ಜನತಾದಳಗಳು ಹಾಗೂ ಭಾರತೀಯ ಜನತಾಪಕ್ಷ ಮತದಾರರ ತಿರಸ್ಕಾರಕ್ಕೆ ತುತ್ತಾಗಿವೆ.

ಒಟ್ಟು 100 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 96 ವಾರ್ಡ್‌ಗಳ ಮತ ಎಣಿಕೆ ನಡೆದಿದೆ. ಪ್ರಕಟಿತ 70 ಸ್ಥಾನಗಳ ಫಲಿತಾಂಶದ ಪೈಕಿ- ಕಾಂಗ್ರೆಸ್‌ 44 ವಾರ್ಡ್‌ಗಳಲ್ಲಿ ಜಯ ಪಡೆದಿದೆ. ಬಿಜೆಪಿ 12 ವಾರ್ಡ್‌, ಜಾತ್ಯತೀತ ಜನತಾದಳ 7, ಸಂಯುಕ್ತ ದಳ 4 ಹಾಗೂ 3 ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಜಯಗಳಿಸಿದವರಲ್ಲಿ ಪಾಲಿಕೆಯ ಮಾಡಿ ಉಪ ಮೇಯರ್‌ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಜಾತ್ಯತೀತ ದಳದ ಬಿ.ಆರ್‌.ನಂಜುಂಡಪ್ಪ , ಬಿಜೆಪಿಯ ಎಸ್‌.ಕೆ. ನಟರಾಜ್‌, ಕಳ್ಳಭಟ್ಟಿ ರಾಣಿ ಜಾತ್ಯತೀತ ದಳದ ಮಾರಿಮುತ್ತು ಸೇರಿದ್ದಾರೆ.

ನಾಲ್ಕು ವಾರ್ಡ್‌ಗಳಲ್ಲಿ ಮಂಗಳವಾರ ಮರು ಮತದಾನ

ಭಾನುವಾರದ ಚುನಾವಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ವರದಿಯಾದ ಗಾಯತ್ರಿನಗರ, ಗಾಂಧಿನಗರ, ಕೆಂಪಾಪುರ ಅಗ್ರಹಾರ, ಅರಮನೆ ನಗರ ವಾರ್ಡ್‌ಗಳಲ್ಲಿ ಮಂಗಳವಾರ ಮರು ಚುನಾವಣೆ ನಡೆಯಲಿದ್ದು , ಬುಧವಾರ ಮತ ಎಣಿಕೆ ನಡೆಯಲಿದೆ.

ವಿಜಯೋತ್ಸವ, ಹಬ್ಬದ ವಾತಾವರಣ ಹಾಗೂ ನಿಷೇಧಾಜ್ಞೆ

ಗೆದ್ದ ಅಭ್ಯರ್ಥಿಗಳ ಪಾಲಿಗೆ ಎರಡು ದಿನ ಮುನ್ನವೇ ದೀಪಾವಳಿಯ ಸಂಭ್ರಮ. ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ತಮ್ಮ ನಾಯಕನಿಗೆ ಹಾರ ಹಾಕುವ ಮೂಲಕ ಸಂಭ್ರಮ ಆಚರಿಸಿದರೆ, ಸೋತವರು ನಾಪತ್ತೆ . ಈ ನಡುವೆ, ಭಾರತೀಯ ದಂಡ ಸಂಹಿತೆ 144 ಕಲಮಿನ ಅನ್ವಯ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯರಾತ್ರಿವರೆಗೆ ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ನಿಷೇಧಾಜ್ಞೆ ಹೇರಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ನಡೆಸುವುದನ್ನು ಪ್ರತಿಬಂಧಿಸಲಾಗಿದೆ.

ಕರಾವಳಿ, ಹಾವೇರಿಯಲ್ಲಿ ಮೈಲುಗೈ ಸಾಧಿಸಿದ ಕಾಂಗ್ರೆಸ್‌

ಪುತ್ತೂರು ಪುರಸಭೆ ಕಾಂಗ್ರೆಸ್‌ ಪಾಲಾಗಿದ್ದರೆ, ಮೂಡಬಿದರೆ ಪುರಸಭೆಯಲ್ಲೂ ಕಾಂಗ್ರೆಸ್‌ ಬಹುಮತ ಸಾಧಿಸಿದೆ. ಉಳಿದಂತೆ ಸುಳ್ಯ, ಉಳ್ಳಾಲ ಪಟ್ಟ ಪಂಚಾಯಿತಿಗಳಲ್ಲೂ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು , ಅಧಿಕಾರ ಹೊಂದುವುದು ಖಚಿತವಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯಿತಿಯಲ್ಲಿ ಜಾತ್ಯತೀತ ಜನತಾಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಂಟ್ವಾಳದಲ್ಲಿ ಪಕ್ಷಗಳು ಮುಗ್ಗರಿಸಿ ಪಕ್ಷೇತರರು ನಿರ್ಣಾಯಕರಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ಕಾಂಗ್ರೆಸ್‌ ಪಾಲಾಗಿದೆ. ಕಾರ್ಕಳ ಪುರಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿದ್ದರೆ, ಹಿರೇಕೆರೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಸಾಧಿಸಿದೆ. ಹಾವೇರಿಯಲ್ಲೂ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X