Get Updates
Get notified of breaking news, exclusive insights, and must-see stories!

ಪ್ರಶಸ್ತಿ ಸಾಲಿಗೆ ಇನ್ನೊಂದು ಫಲಕ: ‘ವಿಶ್ವೇಶ ಪುರಸ್ಕಾರ’ ಸ್ಥಾಪನೆ

ಉಡುಪಿ : ಲೆಕ್ಕ ಕೈಗೆ ಸಿಗದಷ್ಟು ಪ್ರಶಸ್ತಿಗಳು ದಿನಕ್ಕೊಬ್ಬರಿಗೆಂಬಂತೆ ಸಂದು ಹೋಗುತ್ತಿರುವಾಗಲೇ ಉಡುಪಿಯಲ್ಲಿ ಇನ್ನೊಂದು ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದು ಯಕ್ಷಗಾನಕ್ಕೆ ಸಂಬಂಧಿಸಿದ್ದು. ಕ್ರೆಡಿಟ್‌ ಹೊತ್ತುಕೊಂಡವರು ಪೇಜಾವರ ಸ್ವಾಮೀಜಿ. ಪ್ರಶಸ್ತಿಯ ಎತ್ತರ ನಿರ್ಧರಿಸಬೇಕಿದ್ದರೆ ಮುಂದೆ ಯಾರ ಬಗಲಿಗೆಲ್ಲ ಇದು ಜೋತು ಬೀಳುತ್ತದೆ ಅಂತ ನೋಡಬೇಕು.

ಕರಾವಳಿಯಲ್ಲಿ ಯಕ್ಷಗಾನ ಉಳಿಸುವ ಸದ್ದು ಜೋರಾಗಿ ಕೇಳಿಬರುತ್ತಿದೆ. ಆದರೆ ಆ ಮಾತಾಡುತ್ತಿರುವವರಲ್ಲಿ ಕೂದಲು ಬೆಳ್ಳಗಾಗಿರುವವರೇ ಹೆಚ್ಚು. ಆದ್ದರಿಂದ ಸದ್ಯಕ್ಕೆ ಕಾಲೇಜು ಹುಡುಗ ಹುಡುಗಿಯರನ್ನು ರಂಗಸ್ಥಳದ ಮೇಲೆ ನಿಲ್ಲಿಸಬೇಕಾದ ಜರೂರತ್ತಿರುವುದು ಅಂಗೈ ನೆಲ್ಲಿ. ಅದಕ್ಕೆಂದೇ ಹೊಸ ಪ್ರಶಸ್ತಿ ಯಕ್ಷಗಾನವನ್ನು ಉಳಿಸಿ ಬೆಳೆಸುವುದರಲ್ಲಿ ವ್ಯಸ್ತರಾದವರನ್ನು ಹುಡುಕುತ್ತಿದೆ. ಒಳ್ಳೆಯ ಉದ್ದೇಶವೇ. ಈ ಹುಡುಕಾಟಕ್ಕೆ ಕಾಸು ವೇಗವರ್ಧಕವಾಗದಿದ್ದರೆ ಯಕ್ಷಗಾನಕ್ಕೂ ಒಳ್ಳೇದು. ಸಮಾಜದ ಆರೋಗ್ಯಕ್ಕೂ ಒಳ್ಳೆಯದಲ್ವೇ?

ಪ್ರಶಸ್ತಿಯನ್ನು ಪೇಜಾವರ ಮಠದ ಪರ್ಯಾಯ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ತಮ್ಮ ಪರ್ಯಾಯ ಅವಧಿಯಲ್ಲಿ ಯಕ್ಷಗಾನ, ಸಂಗೀತ ಕಲೆಗೆ ಪ್ರೋತ್ರಾಹ ನೀಡಿ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ ಎಂದು ನಂಬಿದ ಯಕ್ಷಗಾನ ಕಲಾರಂಗ ಸಂಸ್ಥೆಯಿಂದ ಪ್ರಶಸ್ತಿಯ ಪ್ರಸವವಾಗಿದೆ.

ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಥಮ ವಿಶ್ವೇಶ ತೀರ್ಥ ಪ್ರಶಸ್ತಿಯನ್ನು ಉಡುಪಿ ಮಹಾತ್ಮಾ ಗಾಂಧಿ ಮೆಮೋರಿಯಲ್‌ (ಎಂಜಿಎಂ) ಕಾಲೇಜಿನ ಯಕ್ಷಗಾನ ಕಲಾ ಕೇಂದ್ರಕ್ಕೆ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ 11ರ ಭಾನುವಾರ ಸಂಜೆ ಐದು ಗಂಟೆಗೆ ಉಡುಪಿಯಲ್ಲಿ ನಡೆಯುತ್ತದೆ.

ಶಾಸಕ ಯುಆರ್‌ ಸಭಾಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಯಕ್ಷ ಕಲಾವಿದರ ಪರವಾಗಿ ಕೆರೆಮನೆ ಶಂಭು ಹೆಗಡೆ ಮತ್ತು ಕೆ.ಎಚ್‌. ದಾಸಪ್ಪ ರೈ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸುವರು. ಮತ್ತೆ ಸ್ವಾಮೀಜಿಗಳಿಗೆ ಕೃಷ್ಣಸಂಧಾನ ಪ್ರಸಂಗ ಯಕ್ಷಗಾನದ ಅರ್ಪಣೆಯಿದೆ.
ಎಂಜಿಎಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರ ಕಳೆದ 30 ವರ್ಷಗಳಿಂದ ಯಕ್ಷಗಾನ ಕಲಾಶಾಲೆಯಾಗಿ ನೂರಾರು ಯಕ್ಷಗಾನ ಕಲಾವಿದರನ್ನು ರೂಪಿಸಿದೆ. ಸಂಪ್ರದಾಯಬದ್ಧ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಪ್ರಶಸ್ತಿಯ ಮೊತ್ತವನ್ನು 25 ಸಾವಿರ ರೂಪಾಯಿಗೇರಿಸುವ ಯೋಚನೆಯೂ ಇದೆ ಎಂದು ಕಲಾರಂಗದ ಅಧ್ಯಕ್ಷ ಜಗಜ್ಜೀವನ ದಾಸ್‌ ಶೆಟ್ಟಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+