ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಗ್ಲಿಯಾನಾ ಎಂಜಿ ರೋಡನ್ನು ಆಟದ ಮೈದಾನ ಮಾಡ್ತಾರಂತೆ

By Staff
|
Google Oneindia Kannada News

ಬೆಂಗಳೂರು: ಮಹಾನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಗರದಲ್ಲಿ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಕಾರ್ಪೊರೇಟ್‌ ವಲಯದ ನೆರವು ಬೇಕು ಎಂದು ಅಮೆರಿಕನ್‌ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಸಾಂಗ್ಲಿಯಾನಾ ಹೇಳಿದ್ದಾರೆ.

ಸಾರ್ವಜನಿಕರ ಕ್ಷೇಮಕ್ಕಾಗಿಯೇ ಎಂಜಿ ರೋಡಿನಲ್ಲಿ ಸೈಕಲ್‌ ಸಂಚಾರ ನಿಷೇಧಿಸಿ, ಆಟೋಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕುಂಬಳೆ ಸರ್ಕಲ್‌ನಿಂದ ಬ್ರಿಗೇಡ್‌ ರೋಡ್‌ ವೃತ್ತದ ವರೆಗೆ ಮಾತ್ರ ಸೈಕಲ್‌ ಸಂಚಾರವನ್ನು ನಿಷೇಧಿಸಲಾಗಿದೆ. ಇತರ ಪ್ರದೇಶಗಳಲ್ಲಿ ಪ್ರತ್ಯೇಕ ಸೈಕಲ್‌ ಲೇನ್‌ ನಿರ್ಮಿಸಲಾಗುವುದು ಎಂದರು.

ಪ್ರತಿ ತಿಂಗಳ ಮೊದಲ ಭಾನುವಾರ ಎಂಜಿ ರಸ್ತೆಯಲ್ಲಿ ಮಕ್ಕಳಿಗಾಗಿ ಫನ್‌ ಜಾಯಿಂಟ್‌ ನಿರ್ಮಿಸುವ ಯೋಜನೆಗೂ ಕಾರ್ಪೊರೇಟ್‌ ವಲಯ ಸಹಕರಿಸಬೇಕು. ಈ ದಿನಗಳಲ್ಲಿ ಮಕ್ಕಳಿಗೆ ಒಂದೆರಡು ಗಂಟೆಗಳ ಕಾಲ ರಸ್ತೆಯಲ್ಲಿ ರೋಲರ್‌ ಸ್ಕೇಟಿಂಗ್‌ ಸೈಕ್ಲಿಂಗ್‌ನಂತಹ ಆಟಗಳನ್ನು ಆಡುವ ಅವಕಾಶ ಕಲ್ಪಿಸಬಹುದು.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಎಲ್ಲ ವಾಹನ ಸಂಚಾರವನ್ನು ನಿಲ್ಲಿಸಬೇಕಾಗುತ್ತದೆ. ಮಕ್ಕಳ ಆಟೋಟವನ್ನು ನೋಡಲು ಹೆತ್ತವರೂ ಕೂಡ ಆಗಮಿಸಬಹುದಂತೆ. ಅಂದರೆ ಎಂಜಿ ರೋಡು ತಾತ್ಕಾಲಿಕ ಆಟದ ಮೈದಾನವಾಗುತ್ತದೆ. ಮಕ್ಕಳಿಗೆ, ವೀಕ್ಷಕರಿಗೆ ಟೀ, ಪಾನೀಯ, ಐಸ್‌ಕ್ರೀಂ, ಲಘು ತಿಂಡಿಗಳನ್ನು ಈ ಸಂದರ್ಭದಲ್ಲಿ ಸರಬರಾಜು ಮಾಡುವಂತೆ ಇಲ್ಲಿನ ರೆಸ್ಟೋರೆಂಟ್‌ಗಳ ಬಳಿಯೂ ಸಾಂಗ್ಲಿಯಾನಾ ಮನವಿ ಮಾಡಿಕೊಂಡಿದ್ದಾರೆ.

ಅವರ ಕೊನೆಯ ಮನವಿ ಬಹುರಾಷ್ಟ್ರೀಯ ಕಂಪೆನಿಗಳ ಬಳಿ. ‘ ಟ್ರಾಫಿಕ್‌ ಸಿಗ್ನಲ್‌, ಟ್ರಾಫಿಕ್‌ ಅಂಬ್ರೆಲ್ಲಾಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತೀರಾ ಪ್ಲೀಸ್‌’.

3 ಬಾರಿ ಫೋನ್‌ ರಿಂಗುಣಿಸುವ ಮುನ್ನ...

ನೀವು ಪೊಲೀಸ್‌ ಕಂಟ್ರೋಲ್‌ ರೂಂಗೆ ಫೋನಾಯಿಸಿ ಸುಸ್ತಾಗಿದ್ದೀರಾ...ಇನ್ನುಮೇಲೆ ಹಾಗಾಗುವುದಿಲ್ಲ. ಪೊಲೀಸ್‌ ಕಮಿಷನರ್‌ ಎಚ್‌. ಟಿ. ಸಾಂಗ್ಲಿಯಾನಾ ನಿಮ್ಮ ಫೋನ್‌ ಮೂರು ಬಾರಿ ರಿಂಗುಣಿಸುವ ಮೊದಲೇ ಪೊಲೀಸರು ನಿಮ್ಮನ್ನು ಸೌಜನ್ಯದಿಂದ ಮಾತಾಡಿಸುತ್ತಾರೆ ಎಂದು ಭರವಸೆ ನೀಡಿದ್ದಾರೆ.

ಇದು ಪೊಲೀಸ್‌ ಸ್ಟೇಷನ್‌ಗೂ ಅನ್ವಯಿಸುತ್ತದಂತೆ. ಸಮಸ್ಯೆಯಾಂದಿಗೆ ಠಾಣೆಗೆ ಹೋದರೆ ಗಂಟೆ ಗಟ್ಟಲೆ ಮಾತಾಡಿಸುವವರಿಗಾಗಿ ಕಾಯಬೇಕಾಗಿಲ್ಲ. ನಿಮ್ಮ ಸಮಸ್ಯೆಯನ್ನು ಪೊಲೀಸರು ತಕ್ಷಣವೇ ಆಲಿಸುತ್ತಾರೆ. ನಗುನಗುತ್ತಾ ಸಾರ್ವಜನಿಕರನ್ನು ಠಾಣೆಯಲ್ಲಿ ಇದಿರುಗೊಳ್ಳಬೇಕು ಅಂತಲೂ ಸಾಂಗ್ಲಿಯಾನಾ ಆಜ್ಞೆ ಮಾಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X