Get Updates
Get notified of breaking news, exclusive insights, and must-see stories!

ರಂಜಾನಿನಲ್ಲೂ ಬಾಂಬ್‌ಎಸೆತ ಮುಂದುವರಿಯಲಿದೆ-ಟೋನಿ ಬ್ಲೇರ್‌

ಡೌನಿಂಗ್‌ ಸ್ಟ್ರೀಟ್‌ : ಇಲ್ಲ, ಯುದ್ಧ ಯಾವುದೇ ಕಾರಣಕ್ಕೂ ನಿಲ್ಲದು; ಒಸಾಮ ಅಥವಾ ಆತನ ಹೆಣ ಸಿಗುವವರೆಗೆ. ರಂಜಾನ್‌ ದಿನಗಳಲ್ಲೂ ಕಾದಾಟ ಮುಂದುವರೆಯಲಿದೆ- ಬ್ರಿಟನ್‌ ಪ್ರಧಾನ ಮಂತ್ರಿ ಟೋನಿ ಬ್ಲೇರ್‌ ಕಡ್ಡಿ ತುಂಡುಮಾಡಿದಂತೆ ಹೇಳಿದರು. ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರ ಪಕ್ಕದಲ್ಲೇ ಕೂತಿದ್ದರು.

ಶುಕ್ರವಾರದ ಜಂಟಿ ಸುದ್ದಿಗೋಷ್ಠಿ ಇದು. ಟೋನಿ ಮಾತು ಮುಂದುವರೆಯಿತು- ಮುಸ್ಲಿಮರ ಮನದ ಭಾವನೆಗಳು ನಮಗೆ ಅರ್ಥವಾಗುತ್ತದೆ. ರಂಜಾನ್‌ ಅನ್ನುವ ಕಾರಣಕ್ಕೆ ತಾಲಿಬಾನ್‌ ಸುಮ್ಮಗಾಗುವುದೆ? ಅದೂ ಯುದ್ಧ ಮಾಡುತ್ತದೆ. ನಾವೂ ಬಾಂಬ್‌ ಬಿಸುಡುತ್ತೇವೆ. ತಾಲಿಬಾನಿನಂತೆ ನಮಗೂ ನಮ್ಮದೇ ಆದ ಗುರಿಯಿದೆ. ಮಿಲಿಟರಿ ದಾಳಿ ದೀರ್ಘಾವಧಿಯಾಗಲಿ ಅನ್ನುವುದು ನನ್ನ ಬಯಕೆ ಎಂದರು.

ನವೆಂಬರ್‌ 17ರಿಂದ ರಂಜಾನ್‌ ಶುರು. ಅಷ್ಟು ಹೊತ್ತಿಗೆ ಯುದ್ಧ ಮುಗಿದು, ಶಾಂತಿ ನೆಲೆಸಲಿ ಎಂಬುದೇ ನನ್ನ ಆಶಯ ಎಂದರು ಮುಷರ್ರಫ್‌.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+