ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೆಡಿಕಲ್, ಡೆಂಟಲ್ ಸೀಟು ಭರ್ತಿಗೆ ನ.9ರಿಂದ ಆಯ್ಕೆ ಪ್ರಕ್ರಿಯೆ
ಬೆಂಗಳೂರು: ಮೆಡಿಕಲ್ ಮತ್ತು ಡೆಂಟಲ್ ಸೀಟುಗಳಿಗಾಗಿ ಎರಡನೆಯ ವಿಶೇಷ ಆಯ್ಕೆ ಪ್ರಕ್ರಿಯೆ ಕರ್ನಾಟಕ ವಿದ್ಯಾರ್ಥಿಗಳ ಕೋಟಾದಡಿಯಲ್ಲಿ ನವೆಂಬರ್ 9 ಮತ್ತು 10ರಂದು ನಡೆಯಲಿದೆ.
ಬೆಂಗಳೂರಿನ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ 50, ಗುಲ್ಬರ್ಗಾದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ 35 ಮತ್ತು ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಆರು ಸೀಟುಗಳು ಭರ್ತಿಯಾಗಬೇಕಾಗಿದೆ ಎಂದು ಸಿಇಟಿ ಘಟಕದ ಪ್ರಕಟಣೆ ತಿಳಿಸಿದೆ.
ಕನ್ನಡೇತರರಿಗಾಗಿ, ಎಂಆರ್ ಕಾಲೇಜಿನಲ್ಲಿ ಏಳು, ಕೆವಿಜಿ ಕಾಲೇಜಿನಲ್ಲಿ ನಾಲ್ಕು ಸೀಟುಗಳಿವೆ. ಇವುಗಳ ಆಯ್ಕೆ ಪ್ರಕ್ರಿಯೆಯು ಪೇಮೆಂಟ್ ಸೀಟುಗಳ ಆಯ್ಕೆ ಪ್ರಕ್ರಿಯೆಯ ಜೊತೆಯಲ್ಲಿಯೇ ಅಂದರೆ ನವೆಂಬರ್ 12ರಂದು ನಡೆಯಲಿದೆ.
ಇಂಜಿನಿಯರಿಂಗ್ ವಿಭಾಗದ ಎರಡನೇ ವಿಶೇಷ ಆಯ್ಕೆ ಪ್ರಕ್ರಿಯೆಯು ನವೆಂಬರ್ 13ರಿಂದ 17ರವರೆಗೆ ನಡೆಯುವುದು. ಕೆಆರ್ಇಸಿಯಲ್ಲಿ 22 ಹೆಚ್ಚುವರಿ ಫ್ರೀ ಸೀಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭರ್ತಿಯಾಗಲಿದೆ.
(ಇನ್ಫೋ ವಾರ್ತೆ)
Comments
Story first published: Friday, November 9, 2001, 5:30 [IST]