ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ನೆನಪುಗಳೇ ಹಾಗೆ, ಸಚಿವರೂ ಹೊರತಲ್ಲ!

By Super
|
Google Oneindia Kannada News

Motamma
ಬೆಂಗಳೂರು, ನ. 9 : ಬಾಲ್ಯದ ನೆನಪುಗಳೇ ಹಾಗೆ. ಎಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಕ್ಷಣಕಾಲ ಶೈಶವಾವಸ್ಥೆಗೆ ಎಳೆದೊಯ್ಯುತ್ತದೆ. ಶುಕ್ರವಾರ ಬೆಂಗಳೂರು ಕಬ್ಬನ್‌ಪಾರ್ಕ್‌ನ ಬಾಲಭವನದಲ್ಲಿ ಆದದ್ದೂ ಅದೇ. ಮಕ್ಕಳ ದಿನಾಚರಣೆ ಅಂಗವಾಗಿ ಒಂದು ವಾರ ಮೊದಲೇ ಇಲ್ಲಿ ಆರಂಭವಾಯ್ತು ಮಕ್ಕಳ ದಿನಾಚರಣೆ 2001 ಸಪ್ತಾಹ.

ಬಾಲಭವನದಲ್ಲಿ ಎಂದಿನಂತೆ ಚಿಣ್ಣರ ಮೇಳ. ಮಕ್ಕಳಲ್ಲಿ ಆನಂದ, ಸಂತೋಷ, ಉತ್ಸಾಹ. ಮಕ್ಕಳ ಈ ಉತ್ಸಾಹ ಕಂಡ ರಾಜ್ಯದ ಸಚಿವೆಯರಿಬ್ಬರು, ಮಕ್ಕಳೊಂದಿಗೆ ಮಕ್ಕಳಾಗಿ ಕುಣಿದು ಕುಪ್ಪಳಿಸಿದರು, ಬಾಲ್ಯದ ನೆನಪನ್ನು ಮೆಲುಕುಹಾಕುತ್ತಾ ಕೋಲು ಕೋಲಣ್ಣ ಕೋಲೆ, ಕೋಲು ಕೋಲೆ ಚಿಕ್ಕೋಲು ಕೋಲಣ್ಣ ಕೋಲೆ ಎಂದು ಕೋಲಾಟವಾಡಿದರು, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ರಾಜ್ಯಾದ್ಯಂತದಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಚಿಣ್ಣರಿಗೆ ಅಮಿತುತ್ಸಾಹ ತುಂಬಿದರು.

ಜವಾಹರ ಬಾಲಭವನದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ ವಸತಿ ಸಹಿತ ಮಕ್ಕಳ ಉತ್ಸವ ಉದ್ಘಾಟಿಸಲು ಆಗಮಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಸುವ್ವಿ ಸುವ್ವಾಲೆ ಬಾಲೆ ಎಂದು ಹಾಡುತ್ತಾ ಕೋಲಾಟವಾಡುತ್ತಾ ಹೆಜ್ಜೆ ಹಾಕುತ್ತಿದ್ದ ಮಕ್ಕಳೊಂದಿಗೆ ಸೇರಿ ತಾವೂ ಕೋಲಾಟವಾಡಿದಾಗ, ಪ್ರಾಯೋಜಕರು, ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟು ನಿಂತರು.

ಇದಕ್ಕೂ ಮುನ್ನ ಸಚಿವೆಯರಿಬ್ಬರೂ ಸಪ್ತಾಹದ ಅಂಗವಾಗಿ ನಡೆಯಲಿರುವ ವಿವಿಧ ಸ್ಪರ್ಧೆಗಳಿಗಾಗಿ ನಿರ್ಮಿಸಲಾಗಿರುವ ಕುಂಬಾರನ ಕುಟೀರ, ಕಾಗದ ಶಿಲ್ಪಿ, ಮಯೂರ ಗೊಂಬೆ, ಬದುಕೇ ಬಣ್ಣ, ಗಾನಕೋಗಿಲೆ, ಚಿಣ್ಣರ ಲೋಕ ಮೊದಲಾದ ಕುಟೀರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಸೋಮನಕುಣಿತದ ಮುಖವಾಡವನ್ನೂ ಮುಖದ ಮುಂದಿಟ್ಟುಕೊಂಡು ನರ್ತಿಸಿ, ತಾವೂ ಸಂತೋಷ ಪಟ್ಟು, ಮಕ್ಕಳನ್ನೂ ಸಂತೋಷ ಪಡಿಸಿದರು. ಮಕ್ಕಳ ನೃತ್ಯವನ್ನು ಕಣ್ಣಾರೆ ಕಂಡು, ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಶೋಭಾ ನಂಬೀಶನ್‌ ಹಾಜರಿದ್ದರು.

English summary
Ten years back : Childhood memories are ever lasting. Even a senior citizen becomes a child and enjoys the childhood memories. Ministers too are not exception to it. Congress leader Motamma mingled with children and danced along with them like a child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X