Get Updates
Get notified of breaking news, exclusive insights, and must-see stories!

ಜಿಗಣಿಯ ಯೋಗಕೇಂದ್ರದಲ್ಲಿ ಅಂತರರಾಷ್ಟ್ರೀಯ ಯೋಗ ಸಮ್ಮೇಳನ

ಬೆಂಗಳೂರು : ಸ್ವಾಮಿ ವಿವೇಕಾನಂದ ಸಂಸ್ಥಾನ ನವೆಂಬರ್‌ 17ರಿಂದ ಐದು ದಿನಗಳ 12ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

ಯೋಗದ ಅಳವಡಿಕೆ ಮತ್ತು ಅಧ್ಯಯನ ಮಿತಿಗಳು ಎಂಬ ವಿಷಯವನ್ನು ಆಧಾರವಾಗಿರಿಸಿಕೊಂಡು ನಡೆಯುವ ಈ ಸಮ್ಮೇಳನವು ಜಿಗಣಿಯ ಯೋಗ ಕೇಂದ್ರದ ಪ್ರಶಾಂತಿ ಕುಟೀರದಲ್ಲಿ ನಡೆಯಲಿದೆ ಎಂದು ಸಂಸ್ಥಾನದ ಯೋಗ ಥೆರಪಿಯ ಮುಖ್ಯಸ್ಥೆ ಡಾ. ಆರ್‌. ನಾಗರತ್ನಮ್ಮ ತಿಳಿಸಿದ್ದಾರೆ.

ಸುಮಾರು 750 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಯೋಗಕ್ಕೆ ಸಂಬಂಧಿಸಿದಂತೆ ಸಮ್ಮೇಳನ ಪೂರ್ವ ಕಾರ್ಯಾಗಾರವನ್ನು ನವೆಂಬರ್‌ 8ರಿಂದ 16ರವರೆಗೆ ನಡೆಸಲಾಗುವುದು. ಇದರಲ್ಲಿ ಆಧುನಿಕ ವಿಜ್ಞಾನ, ಯೋಗ ಮತ್ತು ಉಪನಿಷತ್ತುಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದು ನಾಗರತ್ನಮ್ಮ ಹೇಳಿರು.

ಆಧುನಿಕ ಭೌತ ಶಾಸ್ತ್ರ ದ ಆಯಾಮಗಳ ಅಧ್ಯಯನವನ್ನು ಜನರಿಗೆ ಪರಿಚಯಿಸುವುದು ಈ ಪೂರ್ವ ಕಾರ್ಯಾಗಾರದ ಉದ್ದೇಶ. ಪ್ರೊ. ಎನ್‌. ವಿ. ಸಿ. ಸ್ವಾಮಿ ಮತ್ತು ಡಾ. ಎಚ್‌. ಆರ್‌. ನಾಗೇಂದ್ರ ಗೋಷ್ಠಿಗಳನ್ನು ನಿರ್ವಹಿಸುವರು. ಸಮ್ಮೇಳನಾನಂತರ ನವೆಂಬರ್‌ 22ರಿಂದ 30ರವರೆಗೆ ಯೋಗ ಥೆರಪಿಯ ಅನಾರೋಗ್ಯದಿಂದ ಬಳಲುತ್ತಿರುವವರಿಗಾಗಿ ಏಳು ದಿನಗಳ ಇನ್ನೊಂದು ಕಾರ್ಯಾಗಾರವಿರುತ್ತದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+