Get Updates
Get notified of breaking news, exclusive insights, and must-see stories!

ಮಹಿಳಾ ಕ್ರಿಕೆಟ್‌:ಭಾರತ ತಂಡಕ್ಕೆ ದಟ್ಸ್‌ಕ್ರಿಕೆಟ್‌.ಕಾಂನ ಮಾಬೆನ್‌?

ಬೆಂಗಳೂರು: 2002 ನೇ ಇಸವಿ ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧದ ಪಂದ್ಯಗಳಿಗೆ Thatscricket.com ನ ಮಮತಾ ಮಾಬೆನ್‌ ಭಾರತದ ಸಂಭವನೀಯರ ಪಟ್ಟಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ರಾಣಿ ಝಾನ್ಸಿ ಅಂತರ ವಲಯ ಚಾಂಪಿಯನ್‌ಷಿಪ್‌ ಪಂದ್ಯಗಳಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸತತ ಉತ್ತಮ ಪ್ರದರ್ಶನ ನೀಡಿರುವ ಮಮತಾ ಮಾಬೆನ್‌ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಕರ್ನಾಟಕ ಹಾಗೂ ದಕ್ಷಿಣ ವಲಯ ತಂಡಗಳನ್ನು ಮಾಬೆನ್‌ ಪ್ರತಿನಿಧಿಸಿದ್ದಾರೆ. ರೈಲ್ವೇಸ್‌ ವಿರುದ್ಧ 54, ಕೇಂದ್ರ ವಲಯದ ವಿರುದ್ಧ ಅಜೇಯ 53, ಉತ್ತರ ವಲಯದ ವಿರುದ್ಧ ಅಜೇಯ 83, ಪಶ್ಚಿಮ ವಲಯದ ವಿರುದ್ಧ 41 ರನ್‌ಗಳನ್ನು ಹೊಡೆದಿದ್ದ ಮಾಬೆನ್‌, 6 ವಿಕೆಟ್‌ಗಳನ್ನೂ ಪಡೆದು ಅಂತರ ವಲಯ ಮೀಟ್‌ನ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು.

ಭಾರತದ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಇಂಗ್ಲೆಂಡ್‌ ವನಿತೆಯರು 5 ಒಂದು ದಿನದ ಪಂದ್ಯ ಹಾಗೂ 1 ಟೆಸ್ಟ್‌ ಆಡಲಿದ್ದಾರೆ. ಜನವರಿ 11 ರಿಂದ ಅಂತರರಾಷ್ಟ್ರೀಯ ಪಂದ್ಯಗಳು ಪ್ರಾರಂಭವಾಗಲಿದ್ದು , ಜನವರಿ 23 ರಿಂದ 26 ರವರೆಗೆ ನಾಲ್ಕು ದಿನಗಳ ಟೆಸ್ಟ್‌ ಪಂದ್ಯ ಮುಂಬಯಿಯಲ್ಲಿ ನಡೆಯಲಿದೆ. ಚೆನ್ನೈ, ಹೈದರಾಬಾದ್‌(2 ಪಂದ್ಯ), ಬೆಂಗಳೂರು ಹಾಗೂ ಪುಣೆಯಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯಲಿವೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ಸಂಭವನೀಯರ ಪಟ್ಟಿ :
ಮೈಥಲಿ ರಾಜ್‌, ರೂಪಾಂಜಲಿ ಶಾಸ್ತ್ರಿ , ದೀಪಾ ಕುಲಕರ್ಣಿ, ನೀತು ಡೇವಿಡ್‌, ಹೇಮಲತಾ ಕಾಲ, ಸುನಿತ ಸಿಂಗ್‌, ಸುಲಕ್ಷಣಾ ಪಂಡಿತ್‌, ಅಂಜು ಜೈನ್‌, ಅಂಜುಂ ಚೋಪ್ರಾ, ಜುಲನ್‌ ಗೋಸ್ವಾಮಿ, ಉಷಾ, ಮಮತಾ ಮಾಬೆನ್‌, ನೂಷೀನ್‌ ಅಲ್‌-ಖದೀರ್‌, ಕರುಣ ಜೈನ್‌, ಸುವರ್ಣಲಕ್ಷ್ಮಿ , ಗುಲ್ಷನ್‌, ಜಯಾ ಶರ್ಮ, ಬಿಂದೇಶ್ವರಿ, ಸೀಮಾ ಬೌಮಿಕ್‌, ಮೋನಿಕಾ ಹಾಗೂ ಅಪರ್ಣ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+