ಕುದುರೆಮುಖದ ಕಚ್ಚಾ ಕಬ್ಬಿಣ ಸ್ಥಾವರ ಶನಿವಾರ ರಾಷ್ಟ್ರಕ್ಕರ್ಪಣೆ
ಬೆಂಗಳೂರು : ಮಂಗಳೂರಿನಲ್ಲಿನ ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಸಂಸ್ಥೆ (kisco)ಯ 2.3 ಲಕ್ಷ ಟನ್ ಸಾಮರ್ಥ್ಯದ ಕಚ್ಚಾ ಕಬ್ಬಿಣ (ಪಿಗ್ ಐರನ್) ಸ್ಥಾವರವನ್ನು ನವಂಬರ್ 10 ರಂದು ಕೇಂದ್ರ ಉಕ್ಕು ಖಾತೆ ಸಚಿವ ಕಿಶೋರ್ ತ್ರಿಪಾಠಿ ರಾಷ್ಟ್ರಕ್ಕೆ ಸಮರ್ಪಿಸುವರು.
ಕಿಸ್ಕೋ ಮತ್ತು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ , ಮೆಟಲ್ ಸ್ಕಾೃಪ್ ಟ್ರೇಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಂಡ್ ಮೆಟಲರ್ಜಿಕಲ್ ಅಂಡ್ ಇಂಜಿನಿಯರಿಂಗ್ ಕನ್ಸಲ್ಟಂಟ್ (ಇಂಡಿಯಾ) ಲಿ., ಉಕ್ಕು ಸಚಿವಾಲಯದ ಸಾರ್ವಜನಿಕ ವಲಯಗಳೊಂದಿಗೆ ಸ್ಥಾಪಿತವಾಗಿರುವ ಈ ಯೋಜನೆಯು- ಸಲ್ಫರ್, ಫಾಸ್ಪರಸ್, ಕಚ್ಚಾ ಕಬ್ಬಿಣಗಳನ್ನು ಉತ್ಪಾದಿಸಲಿದೆ ಎಂದು ಕಿಸ್ಕೋ ಪ್ರಕಟಣೆ ತಿಳಿಸಿದೆ.
300 ಕೋಟಿ ರುಪಾಯಿ ವೆಚ್ಚದ ಪಿಗ್ ಐರನ್ ಪ್ಲಾಂಟ್ 350 ಸಿಯು.ಎಂ. ಕುದಿ ಕುಲುಮೆಯನ್ನು ಹೊಂದಿದೆ. kiocl ಹಾಗೂ ಇನ್ನಿತರೆ ಸಂಸ್ಥೆಗಳು, ಹಣಕಾಸು ಸಂಸ್ಥೆಗಳಿಂದ ಪ್ಲಾಂಟ್ ನಿರ್ಮಾಣಕ್ಕೆ ಹಣ ಪಡೆಯಲಾಗಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಜವಳಿ ಖಾತೆ ಸಚಿವ ವಿ.ಧನಂಜಯ ಕುಮಾರ್ ಕಂಪನಿಯ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸುವರು. ರಾಜ್ಯದ ಭಾರೀ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ಅವರು ಡಕ್ಟೈಲ್ ಐರನ್ ಸ್ಪನ್ ಪೈಪ್ ಪ್ಲಾಂಟ್‌ಗೆ ಅಡಿಗಲ್ಲು ಹಾಕುವರು. ಬಂದರು ಮತ್ತು ಮೀನುಗಾರಿಕೆ ಸಚಿವ ರಮಾನಾಥ ರೈ ಅವರು ಕಿಸ್ಕೋದ ಕಟ್ಟಡವನ್ನು ಉದ್ಘಾಟಿಸುವರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications