ಮೈಕ್ರೋಸಾಫ್ಟ್ ತಯಾರಿಸಿದ ವಿಂಡೋಸ್ ಎಕ್ಸ್‌ಪಿಯಲ್ಲಿ ತಪ್ಪು ಕನ್ನಡ!
ಬೆಂಗಳೂರು: ಐಟಿ ಮೇಳದ ಮೊದಲ ದಿನ ಬಿಡುಗಡೆಯಾಗಿರುವ ಮೈಕ್ರೋಸಾಫ್ಟ್ ಕಂಪೆನಿಯ ಕನ್ನಡ ವಿಂಡೋಸ್ ಎಕ್ಸ್‌ಪಿಯಲ್ಲಿ ಕನ್ನಡವನ್ನು ತಪ್ಪುತಪ್ಪಾಗಿ ಅಳವಡಿಸಲಾಗಿದೆ ಎಂದು ಗಣಕ ಪರಿಷತ್ತಿನ ಕಾರ್ಯದರ್ಶಿ ಚಿ. ವಿ. ಶ್ರೀನಾಥ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ಸಹಯೋಗದಲ್ಲಿ ನಿರ್ದಿಷ್ಟ ಕನ್ನಡ ಕೀಬೋರ್ಡನ್ನು ತಯಾರಿಸಿ ಕಳೆದ ವರ್ಷವೇ ಮೈಕ್ರೋಸಾಫ್ಟ್ ಕಂಪೆನಿಗೆ ಒದಗಿಸಲಾಗಿದೆ. ಆದರೆ ಕಂಪೆನಿಯು ರೆಮಿಂಗ್ಟನ್, ಇನ್‌ಸ್ಕಿೃಪ್ಟ್ ಮುಂತಾದ ಕೀಬೋರ್ಡ್‌ಗಳನ್ನು ಅಳವಡಿಸಿ ಬರವಣಿಗೆ ಕ್ಲಿಷ್ಟವಾಗುವಂತೆ ಮಾಡಿದೆ ಎಂದು ಶ್ರೀನಾಥ್ ಶಾಸ್ತ್ರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಉದಾಹರಣೆಗೆ ಊ ಕಾರದ ಗುಣಿತಾಕ್ಷರಗಳು ಮತ್ತು ಆ ಕಾರದ ಗುಣಿತಾಕ್ಷರಗಳ ನಡುವೆ ಗೊಂದಲವಿದೆ. ‘ಮೂರ್ತಿ’ ಎಂಬ ಪದ ಟೈಪ್ ಮಾಡಿದರೆ ಅದನ್ನು ‘ಮಾರ್ತಿ ’ ಎಂದು ಓದಬೇಕಾಗುತ್ತದೆ. ಅಲ್ಲದೆ ಅನಗತ್ಯ ಕಡೆ ಅಕ್ಷರಗಳಿಗೆ ಕೊಂಬುಗಳನ್ನು ಕೊಡಲಾಗಿದೆ. ಸಾಫ್ಟವೇರ್ ಅಭಿವೃದ್ಧಿ ಪಡಿಸುವ ಕಾರ್ಯ ನಡೆದುದು ಅಮೆರಿಕಾದಲ್ಲಿ. ಅಲ್ಲಿ ಕನ್ನಡ ಬಲ್ಲ ಸಿಬ್ಬಂದಿ ಇಲ್ಲದೇ ಇದ್ದುದರಿಂದ ಹೀಗಾಗಿರಬಹುದು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟರು.
ಈ ತಪ್ಪುಗಳನ್ನು ಸರಿಪಡಿಸುವವರೆಗೂ ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿಯನ್ನು ಖರೀದಿಸಬಾರದು ಎಂದು ಗಣಕ ಪರಿಷತ್ ಸರಕಾರಕ್ಕೆ ಸಲಹೆ ಮಾಡಿದ್ದು ಸರಕಾರ ಅದನ್ನು ಒಪ್ಪಿಕೊಂಡಿದೆ. ಈ ಎಲ್ಲ ಗೊಂದಲಗಳನ್ನು ನಿವಾರಿಸಲು ಒಂದು ವರ್ಷ ಹಿಂದೆಯೇ ಸರಕಾರ ಅಧಿಕೃತ ಎಂದು ಘೋಷಿಸಿರುವ ಕೀಬೋರ್ಡ್‌ನ್ನು ಅಳವಡಿಸುವುದು ಉತ್ತಮ ಎಂದು ಶಾಸ್ತ್ರಿ ಸರಕಾರಕ್ಕೆ ಸಲಹೆ ಮಾಡಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications