Get Updates
Get notified of breaking news, exclusive insights, and must-see stories!

ಯುದ್ಧ : ಕಾಲು ಕಳಕೊಂಡ ಯೋಧರಿಗೆ ಉಚಿತ ಜೈಪುರ ಕಾಲು

ಜೈಪುರ: ಅಫ್ಘಾನಿಸ್ತಾನದ ಯುದ್ಧದಲ್ಲಿ ಕಾಲು ಕಳೆದುಕೊಂಡಿರುವ ಸಾವಿರಾರು ಯೋಧರಿಗೆ ಕೃತಕ ಕಾಲುಗಳನ್ನು ಒದಗಿಸಲು ಜೈಪುರದ ಸ್ವಯಂ ಸೇವಾ ಸಂಸ್ಥೆಯಾಂದು ಮುಂದೆ ಬಂದಿದೆ.

ಯುದ್ಧದಲ್ಲಿ ಕಾಲು ಕಳೆದುಕೊಂಡು ಅಂಗವಿಕಲರಾಗುವುದು ಹೊಸ ಮಾತೇನಲ್ಲ. ಈ ದುರಂತವನ್ನು ಗಮನಿಸಿ ಜೈಪುರದ ಭಗವಾನ್‌ ಮಹಾವೀರ್‌ ವಿಕಲಾಂಗ ಸಹಾಯತಾ ಸಮಿತಿಯ ಸ್ವಯಂ ಸೇವಕರು ನತದೃಷ್ಟ ಯೋಧರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಪ್ರತಿದಿನ ಕನಿಷ್ಠ 40 ಮಂದಿಗೆ ಕೃತಕ ಕಾಲುಗಳನ್ನು ಉಚಿತವಾಗಿ ನೀಡುವ ಈ ಸಂಸ್ಥೆಯ ಕಾಲುಗಳನ್ನು ಜೈಪುರ ಕಾಲುಗಳೆಂದೇ ಕರೆಯುತ್ತಾರೆ.

1996 ಮತ್ತು 97ರಲ್ಲಿ ಅಫ್ಘಾನಿನಲ್ಲಿ ಕಾಲು ಕಳೆದುಕೊಂಡಿದ್ದ ಸೈನಿಕರಿಗೂ ಈ ಸಂಸ್ಥೆಯ ಕಾರ್ಯಕರ್ತರು ಸಹಾಯ ಮಾಡಿದ್ದರು. ಪ್ರಸ್ತುತ ಅಫ್ಘಾನ್‌ ಸೈನಿಕರಿಗಾಗಿ ಜೈಪುರ ಕಾಲುಗಳು ರೆಡಿಯಾಗಿವೆ. ಆದರೆ ಇದಕ್ಕೆ ಪೂರಕವಾದ ಸಾಗಾಟ ಮತ್ತು ಅಳವಡಿಕೆ ಪ್ರಕ್ರಿಯೆಗಳಿಗೆ ಸರಕಾರದ ನೆರವು ಬೇಕಾಗಿದೆ.

1,500 ಕೃತಕ ಕಾಲುಗಳ ನೆರವನ್ನು ಅಫ್ಘಾನಿಗೆ ರವಾನಿಸುವುದಾಗಿ ಜಸ್ವಂತ್‌ ಸಿಂಗ್‌ ಪ್ರಕಟಿಸಿದ್ದರು. ಆದರೆ ನಾವು ಕೃತಕ ಕಾಲುಗಳನ್ನು ತಯಾರಿಸಿಟ್ಟಿದ್ದೇವೆ. ಸರಕಾರ ನಮ್ಮನ್ನು ಈವರೆಗೆ ಸಂಪರ್ಕಿಸಿಲ್ಲ. ಈ ಕುರಿತು ಸರಕಾರಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ವಿಕಲಾಂಗ ಸಮಿತಿಯ ಆಡಳಿತಾಧಿಕಾರಿ ಮಹವೀರ್‌ ಸಿಂಗ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+