ಏಷ್ಯನ್ ಪೆಸಿಫಿಕ್ ತೆಂಗು ಉದ್ಯಮಿಗಳ ವಾರ್ಷಿಕ ಸಮಾವೇಶ ಆರಂಭ
ಬೆಂಗಳೂರು : ನಾಲ್ಕು ದಿನಗಳ ಏಷ್ಯನ್ ಪೆಸಿಫಿಕ್ ತೆಂಗು ಉದ್ಯಮಿಗಳ ಸಂಘದ (ಎಪಿಸಿಸಿ) ವಾರ್ಷಿಕ ಸಮಾವೇಶವು ಸೋಮವಾರ ಆರಂಭವಾಗಿದ್ದು , 14 ರಾಷ್ಟ್ರಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ಬೆಲೆ ಕುಸಿತ, ನಿರ್ವಹಣೆಯಂತಹ ಸಾಕಷ್ಟು ಸಮಸ್ಯೆಗಳನ್ನು ತೆಂಗು ಕೈಗಾರಿಕೆ ಎದುರಿಸುತ್ತಿದೆ. ಅಲ್ಲದೆ ಬೆಳೆಗೆ ರೋಗಗಳೂ ಬಾಧಿಸಿ ರೈತರನ್ನು ಸಂಕಷ್ಟಕ್ಕೀಡುಮಾಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವೆ ಸಹಕಾರ ಅಗತ್ಯ. ವಿಶ್ವ ವ್ಯಾಪಾರ ಒಕ್ಕೂಟದ ದೃಷ್ಠಿಯಿಂದ ಉದ್ಯಮ ತಂತ್ರಗಳನ್ನು ಬದಲಾಯಿಸುವ ಅಗತ್ಯವೂ ಇದೆ ಎಂದು ಎಪಿಸಿಸಿ ಅಧ್ಯಕ್ಷ ಮತ್ತು ಭಾರತೀಯ ತೋಟಗಾರಿಕಾ ಆಯುಕ್ತ ಎಚ್. ಪಿ. ಸಿಂಗ್ ಹೇಳಿದರು.
ತೆಂಗು ಮಾರುಕಟ್ಟೆಗೆ ಕಾಯಕಲ್ಪ- ಅಜಿತ್‌ಸಿಂಗ್
ವಿಶ್ವ ವ್ಯಾಪಾರ ಒಕ್ಕೂಟದಡಿ, ತೆಂಗು ಬೆಳೆ ನಿರ್ವಹಣೆಯಲ್ಲಿ ತಂತ್ರಗಳನ್ನು ಬದಲಾಯಿಸುವ ಜರೂರತ್ತಿದೆ. ಇದರಿಂದ ಕಡಿಮೆ ಬಂಡವಾಳದಿಂದ ಹೆಚ್ಚು ಉತ್ಪನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಕೃಷಿ ಮಂತ್ರಿ ಅಜಿತ್‌ಸಿಂಗ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ತೆಂಗಿನ ಎಣ್ಣೆ ದೇಶದ ಎಲ್ಲೆಡೆಯೂ ಬಳಸುವಂತಹ ಎಣ್ಣೆಯಾಗಿದೆ. ತೆಂಗು ಉದ್ಯಮದ ಆರ್ಥಿಕತೆ, ಉತ್ಪಾದನಾ ವಿಕೇಂದ್ರೀಕರಣ ಮತ್ತು ಸಹ ಉತ್ಪನ್ನಗಳ ಬಳಕೆಯನ್ನು ನಿರ್ವಹಿಸುವತ್ತ ಗಮನ ಕೊಡಬೇಕಾಗಿದೆ. ತೆಂಗಿನ ಕ್ರೀಮ್, ಎಳೆನೀರು ಪ್ಯಾಕೆಟ್‌ಗಳು, ತೆಂಗಿನ ಹಾಲಿನಿಂದ ತಯಾರಿಸಿದ ಪೌಡರುಗಳನ್ನು ಉತ್ಪಾದಿಸಲು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗಿದ್ದು, ಇವನ್ನು ತೆಂಗು ಮಾರುಕಟ್ಟೆಯಲ್ಲಿ ಗುಣಾತ್ಮಕವಾಗಿ ಬಳಸಿಕೊಳ್ಳಬೇಕು ಎಂದೂ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications