ಕಟೀಲು ದೇಗುಲದಿ ಗಿಡಿಗೆರೆ ರಾಮಕ್ಕನಿಗೆ ಪಾಡ್ದನ ಕೋಗಿಲೆ ಬಿರುದು
ಕಟೀಲು: ತುಳು ಪಾಡ್ದನಗಳನ್ನು ಸಂಗ್ರಹಿಸುವುದಲ್ಲದೆ, ರಚನಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಗಿಡಿಗೆರೆ ರಾಮಕ್ಕ ಮುಗೇರ್ತಿ ಅವರಿಗೆ ಪಾಡ್ದನ ಕೋಗಿಲೆ ಬಿರುದನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ರಾಮಕ್ಕರಂತಹ ಹಲವಾರು ಮಹಿಳೆಯರು ನಮ್ಮ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅಂತಹ ಪ್ರತಿಭೆಗಳನ್ನು ದೇವಸ್ಥಾನಗಳು ಗುರುತಿಸುತ್ತಿರುವುದು ಶ್ಲಾಘನೀಯ. ಇತರ ದೇವಸ್ಥಾನಗಳು ಇಂತಹ ಕಾರ್ಯವನ್ನು ತೀವ್ರಗತಿಯಲ್ಲಿ ನಡೆಸಬೇಕು ಎಂದು ಅಭಿನಂದನಾ ಭಾಷಣ ಮಾಡಿದ ಆಳ್ವಾಸ್ ಫೌಂಡೇಷನ್‌ನ ಡಾ. ಮೋಹನ್ ಆಳ್ವ ಅಭಿಪ್ರಾಯ ಪಟ್ಟರು.
ಸಿಂಡಿಕೇಟ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಡಿ.ಟಿ. ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಿಡಿಗೆರೆ ರಾಮಕ್ಕ ಸಮಾರಂಭದಲ್ಲಿ ಪಾಡ್ದನ ಹಾಡಿದರು.
(ಇನ್ಫೋ ವಾರ್ತೆ)












Click it and Unblock the Notifications