ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್‌ನೆಟ್‌ನಲ್ಲೊಬ್ಬ ಅಂಚೆಯ ಅಣ್ಣ , ಪಿಸಿ ಬಾಗಿಲಿಗೆ ತಂದಿಹನಣ್ಣ

By Staff
|
Google Oneindia Kannada News

ಬೆಂಗಳೂರು : ಕಾಲ ಬದಲಾಗಿದೆ ಸ್ವಾಮಿ. ಇಂಟರ್‌ನೆಟ್‌ ಬಂದಮೇಲಂತೂ ವಿಶ್ವದ ವ್ಯಾಪಾರ ಎಲ್ಲ, ಕೀಬೋರ್ಡ್‌ನಲ್ಲಿ ಮೌಸಲ್ಲೇ ನಡೆಯತ್ತೆ. ಮನೇಲೇ ಇಂಟರ್‌ನೆಟ್‌ ಮುಂದೆ ಕೂತು ಆರ್ಡರ್‌ ಪ್ಲೇಸ್‌ ಮಾಡಿ ಮನೆಗೆ ಅಡಿಗೆ ಸಾಮಾನಿಂದ ಹಿಡಿದು ಆನೆ ಮರಿತನಕ ಏನು ಬೇಕಾದರೂ ತರಿಸಬಹುದು. ಆದರೆ ಕೈಯಲ್ಲಿ ದುಡ್ಡಿರಬೇಕು ಅಷ್ಟೇ.

ಈಗ ನೆಟ್‌ನಲ್ಲಿ ಹೊಸದೊಂದು ಸೇವೆ ಆರಂಭ ಆಗಿದೆ. ಅಂದ್ರೆ ನಿಮ್ಮ ಮನೆಗೇ ಪೋಸ್ಟ್‌ ಆಫೀಸ್‌ ಬಂದಿದೆ. ಸೈಬರ್‌ ವಿಶ್ವದಲ್ಲಿ ಟಿಎನ್‌ಟಿ.ಕಾಂ ಒಂದು ವಾಸ್ತವ ಅಂಚೆ ಕಚೇರಿ ಆಗಿ ಹೊರಹೊಮ್ಮಿದೆ. ಈಗ ನೀವು ಈ ಸೌಲಭ್ಯದ ನೆರವು ಪಡೆದು ನಿಮ್ಮ ಪಾರ್ಸಲ್‌ಗಳನ್ನು ಕಳಿಸಬಹುದು. ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಈ ವಿನಿಮಯದ ಹಾದಿಯಲ್ಲಿ ನಿಮ್ಮ ಪಾರ್ಸಲ್‌ ಎಲ್ಲಿದೆ? ಹೇಗಿದೆ? ಅದರ ಸ್ಥಿತಿಗತಿ ಏನು? ಎಂಬುದನ್ನೂ ತಿಳ್ಕೋಬಹುದು.

ಇದಕ್ಕೆ ನೀವು ಮಾಡಬೇಕಿರೋದು ಇಷ್ಟೇ www.tnt.com ಹೋಗಿ, ಕೀಲಿಮಣೆ (ಕೀಬೋರ್ಡ್‌) ಸಹಾಯ ಪಡೆದ್ರೆ, ನಿಮಗೆ ಎಷ್ಟೊತ್ತಿಗೆ, ಎಲ್ಲಿ, ಯಾವಾಗ ನಿಮ್ಮ ಪಾರ್ಸಲ್‌ ಬರತ್ತೆ, ಅದರ ಅಂದಾಜು ತೂಕ ಎಷ್ಟು ಇತ್ಯಾದಿ ವಿವರ ಸಿಗತ್ತೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಈ ಸೇವೆ ದಿನದ 24ಗಂಟೆಯೂ ಲಭ್ಯ.

ಈ ವ್ಯವಸ್ಥೆಯಲ್ಲಿ ಗ್ರಾಹಕನಿಗೆ ತನ್ನ ಪಾರ್ಸಲ್‌ನ ಮಾಹಿತಿಗಳ ಮೇಲೆ ನಿಗಾ ಇಡಲು ಹಾಗೂ ತಾನೇ ಸ್ವತಃ ದರ ಲೆಕ್ಕಹಾಕಿ ಸಾಗಣೆಯ ಇತಿಹಾಸವನ್ನು ಅರಿಯಲು ಅವಕಾಶ ಇದೆ.

ಟಿ.ಎನ್‌.ಟಿ ಪ್ರಕಾರ ಇಂತಹ ಸೌಲಭ್ಯಗಳ ಸೇವೆಯನ್ನು ಮತ್ತಾವ ಕಂಪನಿಯೂ ಗ್ರಾಹಕರಿಗೆ ಒದಗಿಸಿಲ್ಲ. ಇದೇ ಸಂಸ್ಥೆ ಒದಗಿಸಿರುವ ಮತ್ತೊಂದು ‘ಕ್ವಿಕ್‌ ಷಿಪ್ಪರ್‌’ ಎಂಬ ಸೇವೆಯಲ್ಲಿ ಗ್ರಾಹಕ ಪಿಕ್‌-ಅಪ್‌ಗೆ ಮನವಿ ಸಲ್ಲಿಸುವುದರ ಜೊತೆಗೆ, ದರವನ್ನು ತಾನೇ ಪರೀಕ್ಷಿಸಿ, ತಾನು ಕಳಿಸಬೇಕಿರುವ ವಸ್ತುವಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒಂದೇ ಬಾರಿಗೆ ಸರಳ ಆನ್‌ಲೈನ್‌ ಪ್ರಕ್ರಿಯೆಯಲ್ಲಿ ಮುಗಿಸಿಬಿಡಬಹುದು. ಇದು ಗ್ರಾಹಕನ ಅಮೂಲ್ಯ ಸಮಯವನ್ನು ಉಳಿಸುವಲ್ಲಿ ಸಮರ್ಥವಾಗಿಯಂತೆ.

ಇದಲ್ಲದೆ ಸಂಸ್ಥೆ ಇಮೇಲ್‌ ಟ್ರಾಕಿಂಗ್‌ ಸೌಲಭ್ಯವನ್ನೂ ನೀಡಿದೆ. ಈ ಸೇವೆಯಲ್ಲಿ [email protected] ಗೆ ಕನ್‌ಸೈನ್‌ಮೆಂಟ್‌ ಸಂಖ್ಯೆ, ರೆಫರೆನ್ಸ್‌ ನಂ ಇತ್ಯಾದಿ ವಿವರಗಳನ್ನೊಳಗೊಂಡ ಒಂದು ಇ ಮೇಲ್‌ ಕಳಿಸಿ, ತನ್ನ ಪಾರ್ಸಲ್‌ನ ಸ್ಥಿತಿಗತಿಗಳ ಬಗ್ಗೆ ವಿವರ ಪಡೆಯಬಹುದು. ಈ ಸೌಲಭ್ಯ ಪಡೆದವರು ಟಿಎನ್‌ಟಿಯ ವೆಬ್‌ಸೈಟ್‌ ಸಂದರ್ಶಿಸುವ ಅಗತ್ಯವೇ ಇಲ್ಲ.

ಇದಲ್ಲದೆ ಟಿಎನ್‌ಟಿಯು ಎಂ ಟ್ರಾಕಿಂಗ್‌ ಎಂಬ ಶಾರ್ಟ್‌ ಮೆಸೇಜಿಂಗ್‌ ಸೇವೆಯನ್ನೂ ಗ್ರಾಹಕರಿಗೆ ಒದಗಿಸಿದೆ. ಇದರಲ್ಲಿ ಗ್ರಾಹಕ ಕೇವಲ 1ರುಪಾಯಿ 50 ಪೈಸೆಗೆ ದೇಶ ವಿದೇಶದಲ್ಲಿರುವ ತನ್ನ ಕನ್‌ಸೈನ್‌ಮೆಂಟ್‌ ಬಗ್ಗೆ ತನ್ನ ಮೊಬೈಲ್‌ನಲ್ಲಿ ಮಾಹಿತಿ ಪಡೆಯುವ ಅವಕಾಶ ಇದೆ. ಇದಕ್ಕಾಗಿ ಆರಂಭದಲ್ಲಿ ಒಮ್ಮೆ ಪ್ರತ್ಯೇಕ ವಿಧಿವಿಧಾನಗಳನ್ನು ಗ್ರಾಹಕ ಪೂರೈಸಿಕೊಳ್ಳಬೇಕಷ್ಟೇ. ಹೆಚ್ಚಿನ ವಿವರಗಳು ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X