ಐ ಟಿ ಕ್ವಿಜ್ : ವಿಜಾಪುರ ಸೈನಿಕ ಶಾಲೆಗೆ ಸಮಗ್ರ ಪ್ರಶಸ್ತಿ
ಬೆಂಗಳೂರು : ಬೆಂಗಳೂರು ಐಟಿ.ಕಾಂ ಮೇಳದ ಅಂಗವಾಗಿ ನಡೆದ ಗ್ರಾಮಾಂತರ ಐ.ಟಿ.ಕ್ವಿಜ್ ಫೈನಲ್ಸ್‌ನಲ್ಲಿ ವಿಜಾಪುರದ ಸೈನಿಕ ಶಾಲೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶುಕ್ರವಾರ ನಡೆದ ಮೌಕಿಕ, ದೃಶ್ಯ ಹಾಗೂ ಸ್ಪೀಡ್‌ರೌಂಡ್ ಸೇರಿದಂತೆ ಅಂತಿಮ ಸುತ್ತಿನ ಎಲ್ಲ ವಿಭಾಗಗಳಲ್ಲೂ ಸೈನಿಕಶಾಲೆ ಪ್ರಥಮ ಸ್ಥಾನ ಪಡೆದಿದೆ.
ಎಲ್ಲ ವಿಭಾಗಗಳಲ್ಲೂ ತೀವ್ರ ಸ್ಪರ್ಧೆ ನೀಡಿದ ವಿಜಾಪುರದ ಸೈನಿಕ ಶಾಲೆಯ ಮನು ಪಿ ಕುಲಕರ್ಣಿ ಮತ್ತು ಜೆ. ಭರತ್ ಅಂತಿಮವಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಗುಲ್ಬರ್ಗಾ, ಬಳ್ಳಾರಿ, ಧಾರವಾಡ, ಮಂಗಳೂರು, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ವಲಯದ 6ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್ ಸಂಯುಕ್ತವಾಗಿ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ಸ್‌ಅಪ್ ಸ್ಥಾನ ಹರಿಹರದ ಎಂಕೆಇಟಿ ಪದವಿಪೂರ್ವ ಕಾಲೇಜಿನ ವಾಸೀಮ್ ಮತ್ತು ಯಾಸೀನ್ ಪಾಲಾದರೆ, ಹಾಸನದ ವೆಂಕಟೇಶ್ವರ ಕಾಲೇಜ್‌ನ ಸುಮಂತ್ ಮತ್ತು ವಿಕಾಸ್ ದ್ವಿತೀಯ ರನ್ನರ್ಸ್‌ಅಪ್ ಎನಿಸಿಕೊಂಡರು.
ಅಂತಿಮ ಸುತ್ತಿನ ಸ್ಪರ್ಧೆಗೆ 6ತಂಡಗಳನ್ನು ಆಯ್ಕೆ ಮಾಡುವ ಸಲುವಾಗಿ ಈ ಮುನ್ನ ಜಿಲ್ಲಾ ಮಟ್ಟ ವಲಯ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಶಾಲೆ ಕಾಲೇಜುಗಳ 42 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲಿ ವಿಜಯಿಗಳಾದ ಸೈನಿಕ ಶಾಲೆಯ ವಿದ್ಯಾರ್ಥಿಗಳು ಟಿಸಿಎಸ್‌ನ 50ಸಾವಿರ ರುಪಾಯಿ ವಿದ್ಯಾರ್ಥಿ ವೇತನ ಪಡೆದರೆ, ಪ್ರಥಮ ರನ್ನರ್ಸ್ ಅಪ್ ತಂಡ 30 ಸಾವಿರ ಹಾಗೂ ದ್ವಿತೀಯ ರನ್ನರ್ಸ್ ಅಪ್ ತಂಡ 20 ಸಾವಿರ ರುಪಾಯಿ ವಿದ್ಯಾರ್ಥಿವೇತನ ಪ್ರಶಸ್ತಿ ಗಳಿಸಿತು.
ಇಂಡಿಯಾಇನ್‌ಫೋ.ಕಾಂ ಬಳಗದ ಕ್ವಿಜ್‌ಬ್ರೆೃನ್.ಕಾಂನ ಗಿರಿ ಬಾಲಸುಬ್ರಹ್ಮಣ್ಯಂ ಅವರು ಕ್ವಿಜ್ ಮಾಸ್ಟರ್ ಆಗಿ ಎಲ್ಲ ಹಂತದ ಸ್ಪರ್ಧೆಯನ್ನೂ ಯಶಸ್ವಿಯಾಗಿ ನಡೆಸಿ ಪ್ರಶಂಸೆಗೆ ಪಾತ್ರರಾದರು.
(ಇನ್‌ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications