ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆವಳುತ್ತಿರುವ ಐಟಿ ಕಂಪನಿಗಳಿಗೆ ಮುಂದಿನ ವರ್ಷವೇ ಶುಕ್ರದೆಶೆ

By Staff
|
Google Oneindia Kannada News

ಬೆಂಗಳೂರು : ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವಿತ್ತ ವರ್ಷದ ಮೂರನೇ ತ್ರೆೃಮಾಸಿಕದ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಮತ್ತೆ ಮೈದಡವಿಕೊಂಡು ಏಳಲಿದೆ ಎಂದು ಟಿಸಿಎಸ್‌, ನಾವೆಲ್‌, ಫಿಲಿಪ್ಸ್‌, ಸಿಸ್ಕೋ ಮೊದಲಾದ ಐಟಿ ಕಂಪನಿಗಳ ಸಿಇಓಗಳು ಒಟ್ಟಭಿಪ್ರಾಯ ಪಟ್ಟಿದ್ದಾರೆ.

ಗುರುವಾರ ಸಂಜೆ ಬೆಂಗಳೂರುಐಟಿ.ಕಾಂನಲ್ಲಿ ನಡೆದ ಸಿಇಓಗಳ ಸಮಾವೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪುನರವಲೋಕನ ನಡೆಯಿತು. ಪ್ರಸಕ್ತ ಸ್ಥಿತಿ-ಗತಿ ಬಗ್ಗೆ ಚರ್ಚೆ, ಮುಂದೆ ಕ್ಷೇತ್ರದ ಪುನರುತ್ಥಾನಕ್ಕೆ ಏನು ಮಾಡಬೇಕೆಂಬ ವಿಚಾರಗಳು ಕೇಳಿಬಂದವು. ಅದರ ಸಂಕ್ಷಿಪ್ತ ಸಾರ ಹೀಗಿದೆ...

  • ಐಟಿ ಹಿನ್ನಡೆಯಿಂದ ಹೆಚ್ಚು ಜಾಗತಿಕ ಒಡಂಬಡಿಕೆ ಮಾತುಗಳು ಕೇಳಿಬರುತ್ತಿವೆ. ಪುನರುತ್ಥಾನವಾದರೆ, ಮೊದಲನೇ ವರ್ಷದಲ್ಲೇ ಜಗತ್ತಿನ 10 ಟಾಪ್‌ ಐಟಿ ಕಂಪನಿಗಳ ಪೈಕಿ ಒಂದಕ್ಕಿಂತ ಹೆಚ್ಚು ಭಾರತೀಯ ಕಂಪನಿಗಳು ಇರುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸದಾಗಿ ಕಂಪನಿ ಪ್ರಾರಂಭಿಸುವವರಿಗೆ ಇದು ಒಳ್ಳೆ ಸಮಯ. ಸ್ಪರ್ಧೆಯ ತುರುಸು ಹೆಚ್ಚಿಲ್ಲ. ಜೊತೆಗೆ ಹಿಂದೆಂದಿಗಿಂತಲೂ ಅಗ್ಗದ ವೇತನಕ್ಕೆ ಪರಿಣತರು ಸಿಗುತ್ತಾರೆ. ಬಂಡವಾಳದಾರರು ಮಾತ್ರ ಚೂಸಿಯಾಗಿದ್ದಾರೆ. ಹೀಗಾಗಿ ಹೊಸದಾಗಿ ಕಂಪನಿ ತೆರೆಯುವವರು ಸೃಜನಶೀಲರಾಗಿರಬೇಕು- ನಂದನ್‌ ನೀಲೇಕನಿ, ಸಿಇಓ, ಇನ್ಫೋಸಿಸ್‌.
  • ಚೀನಾದಂಥ ದೇಶದಲ್ಲಿ ಅಗ್ಗದ ಸಂಬಳಕ್ಕೇ ಜಗಜ್ಜಾಣರು ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲಾ ಕಡೆ ಕಾಣಸಿಗದು. ಕಡಿಮೆ ಬಂಡವಾಳದಲ್ಲೇ ಹೆಚ್ಚು ಲಾಭ ಮಾಡುವ ಅವಕಾಶ ಚೀನಾಗೆ ಉಂಟು. ಹೀಗಾಗಿ ಬೇರೆ ದೇಶಗಳಿಗೆ ಇದೊಂದು ದೊಡ್ಡ ಸವಾಲಾಗಿದೆ- ಬಾಬ್‌ ಹೊೖಸ್ಟ್ರಾ, ಫಿಲಿಪ್ಸ್‌ ಸಾಫ್ಟ್‌ವೇರ್‌ ಸೆಂಟರ್‌.
  • ಬಹುತೇಕ ಭಾರತೀಯ ಕಂಪನಿಗಳು ಗ್ರಾಹಕರಿಗೆ ಒಂದೇ ರೀತಿಯ ಸೇವೆ ನೀಡುತ್ತಿವೆ. ಗ್ರಾಹಕರೊಟ್ಟಿಗೆ ಮಾತಾಡಲು ಬಳಸುತ್ತಿರುವುದೂ ಒಂದೇ ಭಾಷೆ. ಇಲ್ಲಿ ಹೊಸತನ ಕೊಡಬೇಕು. ಸೇವಾ ವೈವಿಧ್ಯತೆಗೆ ಗಮನ ಹರಿಸಬೇಕು. ಆಯಾ ಗ್ರಾಹಕರ ಮನೆಮಾತಲ್ಲೇ ಅವರನ್ನು ತಲುಪುವ ಪ್ರಯತ್ನಗಳಾಗಬೇಕು- ರಮೇಶ್‌ ವೆಂಕಟರಾಮನ್‌, ಮೆಕ್‌ ಕಿನ್ಸೆ .
  • ಸ್ಪರ್ಧೆಯ ಭರಾಟೆ ತಣ್ಣಗಾಗಿದೆ. ದೊಡ್ಡಾತಿದೊಡ್ಡ ಐಟಿ ಕಂಪನಿಗಳು ಉಸಿರಾಡುತ್ತಿವೆ. ಅವುಗಳ ಮಾರುಕಟ್ಟೆಯ ವ್ಯಾಪ್ತಿ ಕೂಡ ಬೆಳೆದಿದೆ. ಆದರೆ ಈ ಬೆಳವಣಿಗೆಯಿಂದ ಚೌಕಾಶಿ ಮಾಡುವ ಗ್ರಾಹಕರೇ ಹೆಚ್ಚು. ಸೇವಾ ಶುಲ್ಕ ಕಡಿಮೆ ಮಾಡಿ, ಒತ್ತಡವನ್ನು ತಡಕೊಂಡು, ತಾಳ್ಮೆಯಿಂದ ವ್ಯವಹರಿಸುವ ಕಂಪನಿಗಳಿಗೆ ಮಾತ್ರ ಇದು ಉಳಿಗಾಲ- ವಿವಿಧ ಕಂಪನಿಗಳ ಸಿಇಓಗಳು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X