• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕೃತಿ ದೇವಿಯ ಕೊಡುಗೆ ದೇವಭಾಗ

By Staff
|

ಯಾಂತ್ರಿಕ ಬದುಕಿದ ಜಂಜಡದಿಂದ ಮನಸ್ಸು ಬೇಸತ್ತಿದೆಯೇ? ಸುಂದರ ಪ್ರಕೃತಿ ಪರಿಸರದಲ್ಲಿ ನೆಮ್ಮದಿಯಿಂದ ನಾಲ್ಕಾರು ದಿನ ವಿಹರಿಸಬೇಕೆಂದು ಈ ಹೊತ್ತು ನಿಮಗನಿಸಿದೆಯೇ? ಹಾಗಿದ್ದರೆ, ನೀವು ಕರ್ನಾಟಕದ ಸುಂದರ ತಾಣಗಳಿಗೇ ಬರಬೇಕು.

ಕರ್ನಾಟಕ ಸುಂದರ ಪ್ರಕೃತಿ ಪರಿಸರದಿಂದ ಶ್ರೀಮಂತವಾದ ಸಂಪದ್ಭರಿತ ನಾಡು. ಶ್ರೀಗಂಧದ ಬೀಡು. ಶಿಲ್ಪಕಲೆಯ ನೆಲೆವೀಡು. ಕಂನಾಡಿನ ಕೆಲವು ರಮಣೀಯ ತಾಣಗಳಂತೂ ಭೂಲೋಕದ ಸ್ವರ್ಗವೇ ಸರಿ. ಕಾಡು ಮೇಡು ಬೆಟ್ಟ ಗುಡ್ಡ, ಮನಸೆಳೆಯುವ ಬೀಚುಗಳು, ನಿತ್ಯಹರಿದ್ವರ್ಣದ ಕಾಡುಗಳು, ಐತಿಹಾಸಿಕ - ಪೌರಾಣಿಕ ಮಹತ್ವದ ಜಾಗೆಗಳು. ಏನಿಲ್ಲ ಈ ಸುಂದರ ನಾಡಿನಲ್ಲಿ....

ಯಾಂತ್ರಿಕ ಬದುಕಿನಿಂದ ದೂರವಾದ ಪ್ರಶಾಂತ ಪ್ರದೇಶದಲ್ಲಿ ನಿಮಗೆ ಸಕಲ ಹನ್ನೊಂದು ಸವಲತ್ತುಗಳನ್ನು ಒದಗಿಸುವ ತಾಣಗಳೂ ಕನ್ನಡ ನಾಡಿನಲ್ಲಿ ಇವೆ. ಇಂಥಹ ಒಂದು ತಾಣ. ಕಾರವಾರದ ಬಳಿ ನಡುಗಡ್ಡೆ - ದೇವಭಾಗ.

ಪ್ರಶಾಂತ ಪರಿಸರ ಕಾಣದೆ ಕಂಗೆಟ್ಟ ನಗರವಾಸಿಗಳಿಗೆ ಇದು ಮರಳುಗಾಡಿನಲ್ಲಿ ಸಿಗುವ ಓಯೆಸಿಸ್‌. ದೇವಭಾಗ - ಬೀಣಗ ಬೀಚಿನ ಪರಿಸರವೇ ಹಾಗೆ. ಕರ್ನಾಟಕಕ್ಕೆ ಪ್ರಕೃತಿ ದೇವಿಯ ಕೊಡುಗೆ ಇದು.

ಕಾಳಿ ನದಿ ಸಮುದ್ರಕ್ಕೆ ಸೇರುವ ಈ ಸುಂದರ ಬೀಚಿನ ಬಂಗಾರವರ್ಣದ ಮರಳ ಮೇಲೆ ಮಲಗಿದರೆ, ಸ್ವರ್ಗಕ್ಕೇ ಮೂರೇ ಗೇಣು. ಕವಿ ರವೀಂದ್ರನಾಥ ಠಾಕೂರರ ಮನವನ್ನೇ ಕದ್ದ ಕಾರವಾರದ ಈ ಕಡಲ ಕಿನಾರೆ ನಿಮ್ಮ ಮನಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.

ರೆಸಾರ್ಟ್‌ : ಈ ಮನಮೋಹಕ ತಾಣದಲ್ಲಿ ಸಕಲ ಸವಲತ್ತುಗಳ ಕಲ್ಪಿಸುವ ಸುಂದರ ರೆಸಾರ್ಟ್‌ ಇದೆ. ಇದು ದೇವಭಾಗ ರೆಸಾರ್ಟ್‌ ಎಂದೇ ವಿಶ್ವವಿಖ್ಯಾತ. ಇಲ್ಲಿ ದೋಣಿ ವಿಹಾರ, ಚಾರಣ, ಬೀಚ್‌ ಕ್ರೀಡೆಯ ಸೌಲಭ್ಯವೂ ಇದೆ. ಖಾಸಗಿಯಾಗಿ ಮೈಕೊಡವಿ ಮರಳಿನ ಮೇಲೆ ಮಲಗಿ ಸೂರ್ಯಸ್ನಾನ ಮಾಡಬೇಕೆನಿಸಿದರೆ ಅದಕ್ಕೂ ಅನುಕೂಲತೆ ಇದೆ.

ಇಲ್ಲಿಗೆ ಹೋಗುವುದು ಹೇಗೆ?

ಕಾರವಾರದಿಂದ ಕೇವಲ 4 ಕಿ.ಮೀಟರ್‌ ದೂರದಲ್ಲಿರುವ ಇಲ್ಲಿಗೆ ಹೋಗುವುದು ಸುಲಭ. ಅದರೆ ಇಲ್ಲಿಗಿರುವ ಏಕೈಕ ದಾರಿ ಜಲಮಾರ್ಗ. ದೋಣಿಯ ಮೂಲಕವೇ ನೀವಿಲ್ಲಿಗೆ ಹೋಗಬೇಕು. ಯಾರದೋ ಮಾತು ಕೇಳಿ ರಸ್ತೆ ಮಾರ್ಗದಲ್ಲಿ ದೇವಭಾಗಕ್ಕೆ ಹೊರಟರೆ, ನೀವು ಭೂಲೋಕದ ಸ್ವರ್ಗ ಕಾಣುವ ಆತುರದಲ್ಲಿ ನರಕ ದರ್ಶನ ಮಾಡಬೇಕಾದೀತು ಎಚ್ಚರ.

ಅಪ್ಪಿ ತಪ್ಪಿ ಬಸ್‌ ಏರಿದರೆ, ರಸ್ತೆ, ಕಡಲುಗಳೆರಡೂ ಅಲ್ಲದ ನಡುವಂತರದ ದುರ್ನಾಥ ಪ್ರದೇಶದಲ್ಲಿ ನಿಮ್ಮ ಕೈಬಿಟ್ಟು ಹೋಗಿಬಿಡುತ್ತಾರೆ. ಸ್ವರ್ಗ ಕಾಣಲು ಹೊರಟ ನೀವು ನರಕಯಾತನೆ ಅನುಭವಿಸಿ, ಸಾಕಪ್ಪ ಸಾಕು ಎನ್ನುತ್ತೀರಿ...

ಅಂದಹಾಗೆ ಈ ಸುಂದರ ತಾಣಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ. ಅಕ್ಟೋಬರ್‌ನಿಂದ ಮೇ ತಿಂಗಳು. ಈ ಸುಂದರ ರೆಸಾರ್ಟ್‌ನಲ್ಲಿ ನಾಲ್ಕು ದಿನ ಕಳೆದು, ಅಲ್ಲಿಂದ ನೀವು ಗೋವಾ, ಮುಂಬಯಿ, ದಾಂಡೇಲಿಗಳಿಗೂ ಹೋಗಿಬರಬಹುದು. ಇಲ್ಲಿಂದ ಗೋವೆಯ ಗಡಿಗೆ 22 ಕಿ.ಮೀ, ಮುಂಬೈಗೆ 500 ಕಿ.ಮೀ ಹಾಗೂ ದಾಂಡೇಲಿಗೆ ಕೇವಲ 112 ಕಿ.ಮೀಟರ್‌.

ಗೋಕರ್ಣ ಇಲ್ಲಿಗೆ ಬಲು ಹತ್ತಿರ, ಅಲ್ಲಿಗೆ ಮೊದಲು ಹೋಗಿ ಆತ್ಮಲಿಂಗ ದರ್ಶನ ಮಾಡಬಹುದು. ಓಂ ಬೀಚ್‌, ಕುಡ್ಲೇ ಬೀಚುಗಳಲ್ಲಿ ಅಡ್ಡಾಡಬಹುದು. ಕುಮಟಾದ ಗುಹೆಗಳನ್ನೂ ನೋಡಬಹುದು. ಹಚ್ಚ ಹಸುರಿನ ಕಾಡುಗಳಿಗೂ ಹೋಗಿಬರಬಹುದು.

ಎಲ್ಲಕ್ಕಿಂತ ಮಿಗಿಲಾಗಿ ತಾಜಾ ತಾಜಾ ಸೀಫುಡ್‌ಗಳನ್ನೂ ಮೆಲ್ಲಬಹುದು. ಈ ರೆಸಾರ್ಟ್‌ನಲ್ಲಿ ಸಸ್ಯಹಾರಿಗಳಿಗೆ ಮಾಂಸಾಹಾರಿಗಳಿಗೆ ಪ್ರತ್ಯೇಕ ಸ್ವಾದಿಷ್ಟ ಆಹಾರ ಲಭ್ಯ. ಉಳಿದುಕೊಳ್ಳಲು ಸುಂದರ ಕೊಠಡಿಗಳು. ಸುತ್ತ ಬೋರ್ಗರೆವ ಸಮುದ್ರ, ಅತ್ತ ಕಣ್ಣು ಹಾಯಿಸಿದರೆ ಹಚ್ಚ ಹಸುರಿನ ವನದೇವಿ, ನಿರ್ಮಲವಾಗಿ ಬೀಸುವ ತಂಗಾಳಿ... ದೇವಭಾಗಕ್ಕೆ ಯಾವಾಗ ಹೋಗುತ್ತೀರಿ? ತಡವೇಕೆ ಇಂದೇ ಗಂಟು ಮೂಟೆ ಕಟ್ಟಿ

Tariff:

Indians and residents of India:
Rs.1250 from 1 0ct to 7 Jun per person, per night on twin sharing bassis.
Rs.1000 From 8 Jun 9 Sep USD$ 30 per night on twin sharing bassis.

Foreign Nationals:
US $40* per person, per night on twin sharing bassis.

Children:
5-12 years, 50% of relevant tariff*

Tariff inclusive of boarding, lodging and all taxes.

ವಾರ್ತಾ ಸಂಚಯ

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more