Get Updates
Get notified of breaking news, exclusive insights, and must-see stories!

ಅಟಲ್‌-ಬುಷ್‌ ಚರ್ಚೆ: ಭಯೋತ್ಪಾದನೆ ವಿರೋಧಿ ಬಣದ ಮಾತುಕತೆ

ವಾಷಿಂಗ್ಟನ್‌ : ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರ ಜೊತೆ ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಭೇಟಿ, ಭಯೋತ್ಪಾದನೆ ವಿರುದ್ಧ ದನಿ ಎತ್ತಿರುವ ರಾಷ್ಟ್ರಗಳ ಒಕ್ಕೂಟದೊಂದಿಗೆ ಅಮೆರಿಕ ನಡೆಸಲಿರುವ ಮಾತುಕತೆಯ ಭಾಗವಾಗಿರುತ್ತದೆ ಎಂದು ಅಮೆರಿಕಾದ ಅಧಿಕಾರಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಉಗ್ರರ ಜಾಲಗಳ ಬುಡ ಸಮೇತ ಕಿತ್ತೊಗೆಯಲು ಕೈಜೋಡಿಸಿರುವ ಜಗತ್ತಿನ ರಾಷ್ಟ್ರಗಳು ಈಗೇನು ಮಾಡಬೇಕು, ಇದರಲ್ಲಿ ಜಗತ್ತಿನ ಮುಖ್ಯ ನಾಯಕರ ಪಾತ್ರವೇನು, ಈವರೆಗಿನ ಯುದ್ಧದ ಫಲಶೃತಿ ಎಂಥದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧ್ಯಕ್ಷ ಬುಷ್‌ ಮಾತನಾಡುವರು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಕಾಂಡೋಲೀಜಾ ರೈಸ್‌ ಹೇಳಿದ್ದಾರೆ.

ಸೆಪ್ಟೆಂಬರ್‌ 11ರ ದಾಳಿಯಲ್ಲಿ ಮೃತಪಟ್ಟವರ ಪೈಕಿ ಅನೇಕ ಭಾರತೀಯರೂ ಇದ್ದಾರೆ. ಉಗ್ರರ ಮಟ್ಟ ಹಾಕಲು ನಮಗೆ ಭಾರತ ಬೆಂಬಲವನ್ನೂ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ನಾವು ಇನ್ನಷ್ಟು ಒಟ್ಟು ಹೆಜ್ಜೆ ಇಡಲು ವಾಜಪೇಯಿ ಅವರೊಟ್ಟಿಗಿನ ಭೇಟಿ ಒಂದು ವೇದಿಕೆ. ಬೇಹುಗಾರಿಕೆ ವಿನಿಮಯ, ಕಾನೂನು ಜಾರಿಯಲ್ಲಿ ಸಹಕಾರ ಮತ್ತು ರಾಜತಾಂತ್ರಿಕ ಸಂಬಂಧಗಳ ವರ್ಧನೆಗೆ ಇದು ಸಕಾಲ ಎನ್ನುತ್ತಾರೆ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಉಪ ವಕ್ತಾರ ಫಿಲ್‌ ರೀಕರ್‌.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+