‘12000 ಭಾರತೀಯ ವಿದ್ಯಾರ್ಥಿಗಳಿಗೆ ಇಂಗ್ಲೆಂಡಿನಲ್ಲಿ ಓದುವ ಅವಕಾಶ’
ಬೆಂಗಳೂರು : ಇಂಗ್ಲೆಂಡಿಗೆ ಬನ್ನಿ. ಓದಿ. ಕೆಲಸ ಗಿಟ್ಟಿಸಿಕೊಳ್ಳಿ. ಇನ್ನು 5 ವರ್ಷಗಳಲ್ಲಿ 12 ಸಾವಿರ ವಿದ್ಯಾರ್ಥಿಗಳಿಗೆ ನಮ್ಮ ದೇಶದಲ್ಲಿ ಪ್ರತಿಭೆ ಪ್ರದರ್ಶಿಸುವ ಅವಕಾಶ ಮಾಡಿಕೊಡುತ್ತೇವೆ ಎಂದು ಬ್ರಿಟನ್ ಇ- ಕಾಮಸ4ರ್ ಸಚಿವ ಡೌಗ್ಲಾಸ್ ಅಲೆಕ್ಸಾಂಡರ್ ಹೇಳಿದರು.
ಬೆಂಗಳೂರುಐಟಿ ಡಾಟ್ ಕಾಂ ಮೇಳದ ಎರಡನೇ ದಿನವಾದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದ ಅವರು, ಮೊದಲು ಓದಲು ಅವಕಾಶ. ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಡುವ ಇರಾದೆ ಇದೆ ಎಂದರು.
ಪ್ರಸ್ತುತ 11 ಸಾವಿರ ಭಾರತೀಯ ಐಟಿ ಪರಿಣತರು ಬ್ರಿಟನ್ನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ರಿಟನ್ನೇತರ ರಾಷ್ಟ್ರಗಳ ಐಟಿ ಮಾನವ ಸಂಪನ್ಮೂಲದ ಅರ್ಧದಷ್ಟು ಸಂಖ್ಯೆ ಇದಾಗಿದೆ. ಅವಕಾಶಗಳ ಕಣಜವಾಗಿ ಭಾರತ ಹೊಮ್ಮಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರಿಟನ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇದಿನೇ ಅಭಿವೃದ್ಧಿ ಕಾಣುತ್ತಿದೆ. ಆರ್ಥಿಕ ಹಿನ್ನಡೆಯ ಸವಾಲನ್ನು ಸ್ವೀಕರಿಸಿ ಬರುವ ಭಾರತೀಯರಿಗೆ, ಭಾರತೀಯ ಕಂಪನಿಗಳಿಗೆ ಸುಸ್ವಾಗತ ಎಂದು ಆಮಂತ್ರಣ ಕೊಟ್ಟರು.
ಇದೇ ದಿನ ಮೇಳದ ಭರಾಟೆಯಲ್ಲೂ ಬಿಡುವು ಮಾಡಿಕೊಂಡ ಡೌಗ್ಲಾಸ್ ಹಾಗೂ ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ರಾಬ್ ಯಂಗ್ ವಿಪ್ರೋ ಕಂಪನಿಗೆ ಭೇಟಿ ಕೊಟ್ಟರು. ಇವರೊಟ್ಟಿಗೆ ಬ್ರಿಟನ್ನಿನ ಅಧಿಕಾರಿಗಳ ನಿಯೋಗವೂ ಇತ್ತು. ಇಲೆಕ್ಟ್ರಾನಿಕ್ ನಗರಿಯ ಎರಡನೇ ಹಂತದಲ್ಲಿರುವ ವಿಪ್ರೋ ಕಲಿಕಾ ಕೇಂದ್ರ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ವಲಯಗಳಲ್ಲಿನ ಕೆಲಸವನ್ನು ನಿಯೋಗ ನೋಡಿ, ತಿಳಿಯಿತು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications