Get Updates
Get notified of breaking news, exclusive insights, and must-see stories!

ರಾಜ್‌ ಅಪಹರಣದಲ್ಲಿ ವೀರಪ್ಪನ್‌ಗೆ ನೆರವು ನೀಡಿದ ಇಬ್ಬರ ಬಂಧನ

ಕೊಯಮತ್ತೂರು : ವರನಟ ಡಾ.ರಾಜ್‌ಕುಮಾರ್‌ ಅಪಹರಣದಲ್ಲಿ ಕಾಡುಗಳ್ಳ ವೀರಪ್ಪನ್‌ಗೆ ನೆರವು ನೀಡಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನು ಈರೋಡು ಜಿಲ್ಲೆಯ ದೊಡ್ಡಗಾಜನೂರು ಸಮೀಪ ಬುಧವಾರ ಪೊಲೀಸರು ಬಂಧಿಸಿದ್ದಾರೆ.

ತಾಳವಾಡಿ ಗ್ರಾಮದ ಬಸವಣ್ಣ (40) ಎಂಬ ವ್ಯಕ್ತಿ ಗ್ರಾಮಾಡಳಿತ ಅಧಿಕಾರಿಯ ಎದುರು ತಾನೇ ತಾನಾಗಿ ಶರಣಾಗಿದ್ದರೆ, ಬಸವಣ್ಣ ನೀಡಿದ ಮಾಹಿತಿ ಆಧಾರದ ಮೇಲೆ ನಾಗರಾಜ(40) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೂ ಮೂವರಿಗಾಗಿ ಪೊಲೀಸರು ಶೋಧ ನಡೆಸಿದ್ದು , ಬಂಧಿತರನ್ನು ಸತ್ಯಮಂಗಲ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

ಬಂಧಿತರಿಂದ ಎರಡು ನಾಡ ಬಂದೂಕು ಮತ್ತು 20 ಜಿಲೆಟಿನ್‌ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್‌ ಅಪಹರಣದಲ್ಲಿ ಒಟ್ಟು 22 ಮಂದಿ ಭಾಗಿಯಾಗಿದ್ದಾರೆ ಎಂದು ಅಂದಾಜು ಮಾಡಲಾಗಿದ್ದು , ವೀರಪ್ಪನ್‌ ಸಹಿತ 7 ಮಂದಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+