ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ತಂತ್ರಾಂಶ ರಫ್ತಿಗೆ ಬ್ರೆಜಿಲ್‌ನಲ್ಲೊಂದುದುಕಾನು: ಇಎಸ್‌ಸಿ

By Staff
|
Google Oneindia Kannada News

ಬೆಂಗಳೂರು : ಭಾರತದಲ್ಲಿ ಕಂಪ್ಯೂಟರ್‌ ತಂತ್ರಾಂಶ ರಫ್ತಿನ ಅಭಿವೃದ್ಧಿಗೆ ನೆರವು ನೀಡಲು ಬ್ರೆಜಿಲ್‌ ಆಸಕ್ತವಾಗಿದೆ ಎಂದು ಇಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ತಂತ್ರಾಂಶ ರಫ್ತು ಉತ್ತೇಜಕ ಸಮಿತಿ (ಇಎಸ್‌ಸಿ) ಬುಧವಾರ ತಿಳಿಸಿದೆ.

25 ಶತಕೋಟಿ ಅಮೆರಿಕನ್‌ ಡಾಲರ್‌ನಷ್ಟು ಗಾತ್ರದ ಮಾರುಕಟ್ಟೆಯನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಂದಿರುವ ಬ್ರೆಜಿಲ್‌, ಲ್ಯಾಟಿನ್‌ ಅಮೆರಿಕಾದ ಐಟಿ ಮಾರುಕಟ್ಟೆಯ ಪ್ರತಿಶತ 40ರಷ್ಟನ್ನು ಆವರಿಸಿಕೊಂಡಿದೆ. ಐಟಿ ಕ್ಷೇತ್ರದಲ್ಲಿ 1991ರಿಂದ ಈವರೆಗೆ ಶೇ.19ರಷ್ಟು ವಾರ್ಷಿಕ ಪ್ರಗತಿ ಸಾಧಿಸಿದೆ ಎಂದು ಇಎಸ್‌ಸಿ ಅಧ್ಯಕ್ಷ ವಿವೇಕ್‌ ಸಿಂಘಾಲ್‌ ಹೇಳಿದರು. ಐಟಿ ರಫ್ತು ಮತ್ತು ಅಭಿವೃದ್ಧಿ ಹೊಂದಿದ ಹೊಸ ಮಾರುಕಟ್ಟೆಗಳು ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತಾಡುತ್ತಿದ್ದರು.

ಬ್ರೆಜಿಲ್‌ನಲ್ಲಿ ಇಎಸ್‌ಸಿ ಕಚೇರಿ :ಬ್ರೆಜಿಲ್‌ನಲ್ಲಿ ಭಾರತದ ತಂತ್ರಾಂಶ ರಫ್ತಿಗೆ ಅನುವು ಮಾಡಿಕೊಡುವ ಸಲುವಾಗಿ ಸಾಂತಾ ಕ್ಯಾಟರಿನಾದಲ್ಲಿ ಸದ್ಯದಲ್ಲೇ ಇಎಸ್‌ಸಿ ಒಂದು ಕಚೇರಿ ತೆರೆಯಲಿದೆ. ಭಾರತದ ಸಣ್ಣ ಮತ್ತು ಮಧ್ಯಮ ಸಾಫ್ಟ್‌ವೇರ್‌ ಕಂಪನಿಗಳ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯಾಪ್ತಿ ಹೆಚ್ಚಿಸುವ ಉಮೇದಿ ಇಎಸ್‌ಸಿಯದು. ಅಮೆರಿಕಾ ಆರ್ಥಿಕ ಹಿನ್ನಡೆಯಿಂದ ಅಳುಕು ಬೇಡ. ಕೆನಡಾ, ಪಶ್ಚಿಮ ಯೂರೋಪು, ಪೂರ್ವ ಏಷ್ಯಾ ಹಾಗೂ ಮಧ್ಯ ಪ್ರಾಚ್ಯಗಳಲ್ಲಿ ತಂತ್ರಾಂಶ ಮಾರುಕಟ್ಟೆಯನ್ನು ಕಂಡುಕೊಳ್ಳುವ ಗುರಿಯನ್ನು ಭಾರತ ಇಟ್ಟುಕೊಳ್ಳಬೇಕಿದೆ ಎಂದರು.

ದೆಹಲಿಯಲ್ಲಿ ‘ಇಂಡಿಯಾಸಾಫ್ಟ್‌ 2002’ : ಮುಂದಿನ ವರ್ಷ ಫೆಬ್ರವರಿ 20ರಿಂದ 22ರವರೆಗೆ ದೆಹಲಿಯಲ್ಲಿ ಇಂಡಿಯಾಸಾಫ್ಟ್‌ 2002 ಎಂಬ ಪ್ರಥಮ ಜಾಗತಿಕ ಜಾಲ ಕಾರ್ಯಕ್ರಮವನ್ನು ಇಎಸ್‌ಸಿ ಆಯೋಜಿಸಿದೆ. ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನದ ಎಲ್ಲಾ ಮಜಲುಗಳ ಬಗ್ಗೆ ಚರ್ಚೆಯಾಗಲಿದೆ. ವಸ್ತು ಪ್ರದರ್ಶನದ ಜೊತೆಗೆ- ತಂತ್ರಾಂಶ ಸೇವೆ, ಮಾಹಿತಿ ತಂತ್ರಜ್ಞಾನ ವಿತ್ತ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರ ವಿನಿಮಯವಾಗಲಿದ್ದು, 30 ದೇಶಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಿಂಘಾಲ್‌ ಹೇಳಿದರು.

ಎಸ್‌ಎಂಇ ಐಟಿ ಕಂಪನಿಗಳಿಗೆ ತೆರಿಗೆ ವಿನಾಯಿತಿ : ಸಂಕಿರಣದಲ್ಲಿ ಮಾತನಾಡಿದ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ.ಚಂದ್ರಶೇಖರ್‌, ಎಸ್‌ಎಂಇ ವಿಭಾಗಕ್ಕೆ ಸೇರಿದ ಐಟಿ ಕಂಪನಿಗಳಿಗೆ ತೆರಿಗೆಯಲ್ಲಿ ಕೆಲವು ವಿನಾಯಿತಿ ಕಲ್ಪಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎಂದರು. ರಾಜ್ಯದಲ್ಲಿ ಕಂಪ್ಯೂಟರ್‌ ಹಾರ್ಡ್‌ವೇರ್‌ ಉದ್ದಿಮೆಗೂ ಚಾಲನೆ ನೀಡುವ ಅವಶ್ಯಕತೆಯಿದೆ ಎಂದ ಅವರು, ಬೆಂಗಳೂರು ಐಟಿ ಡಾಟ್‌ಕಾಂ- 2001 ಇದಕ್ಕೆ ಪೂರಕ ವೇದಿಕೆಯಾಗಿದೆ ಎಂದು ಹೇಳಿದರು.

ಮೇಳದಲ್ಲಿ ಇದೇ ಮೊದಲ ಬಾರಿಗೆ ಯೂರೋಪಿನ 90 ದೇಶಗಳು ಭಾಗವಹಿಸುತ್ತಿವೆ. ಬ್ರಿಟನ್ನಿನ 20 ದೊಡ್ಡ ಕಂಪನಿಗಳೂ ಮೇಳಕ್ಕೆ ಬರುತ್ತಿರುವುದು ವಿಶೇಷವಾಗಿದೆ ಎಂದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X