ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾಶ್ಮೀರ ಉಗ್ರರ ತರಪೇತಿಗೆ ಅಲ್‌- ಕ್ವೆದಾ ಶಿಬಿರಗಳ ಐಎಸ್‌ಐ ಬಳಸಿತ್ತು’

By Staff
|
Google Oneindia Kannada News

ನ್ಯೂಯಾರ್ಕ್‌ : ಒಸಾಮನ ಅಲ್‌-ಕ್ವೆದಾ ಜಾಲದೊಂದಿಗೆ ಪಾಕಿಸ್ತಾನದ ಐಎಸ್‌ಐ ಬಹುದಿನಗಳಿಂದ ಪರೋಕ್ಷ ಸಂಬಂಧ ಹೊಂದಿದೆ. ಕಾಶ್ಮೀರ ಕಣಿವೆಯಲ್ಲಿ ಭಯ ಹುಟ್ಟುಹಾಕಲು ಉಗ್ರರಿಗೆ ತರಪೇತಿ ನೀಡಲು ಆಫ್ಘನ್ನಿನ ಅಲ್‌-ಕ್ವೆದಾ ಶಿಬಿರಗಳನ್ನೂ ಬಳಸಿಕೊಳ್ಳಲಾಗಿದೆ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಒಸಾಮ ಹಾಗೂ ತಾಲಿಬಾನ್‌ ನಡುವೆ ಕೊಡುಕೊಳ್ಳುವಿಕೆ ಸಂಬಂಧ ವರ್ಷಗಳಿಂದ ಬೆಳೆಯುತ್ತಿದ್ದರೂ ಐಎಸ್‌ಐ ಕಂಡೂ ಕಾಣದಂತಿತ್ತು. ಆದರೆ ಸೆಪ್ಟೆಂಬರ್‌ 11ರಂದು ನಮ್ಮ ಮೇಲೆ ಉಗ್ರರ ದಾಳಿ ನಡೆದಾಗಿನಿಂದ ಪಾಕಿಸ್ತಾನದ ಮಿಲಿಟರಿ ಆಡಳಿತ ಅಲ್‌-ಕ್ವೆದಾ ಹಾಗೂ ತನ್ನಲ್ಲಿನ ಭಯೋತ್ಪಾದಕರಿಗೆ ಯಾವುದೇ ಬೆಂಬಲ ಕೊಡುತ್ತಿಲ್ಲ. ಕಳೆದ ವರ್ಷ ಕಾಶ್ಮೀರಿ ಉಗ್ರಗಾಮಿಗಳ ಹಾಗೂ ತಾಲಿಬಾನ್‌ ಆಡಳಿತದೊಟ್ಟಿಗೆ ಬೇಹುಗಾರಿಕಾ ದಳಗಳು ಮಾಡಿಕೊಂಡಿರುವ ಒಪ್ಪಂದಗಳು ಮೈ ಝುಮ್ಮೆನ್ನಿಸುತ್ತವೆ. ಅಮೆರಿಕಾ ಗುಪ್ತ ದಳ ಈ ಬಗ್ಗೆ ಮಾಹಿತಿ ಕಲೆಹಾಕಿ, ನಿಗದಿಯಾಗಿದ್ದ ಆಗಿನ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಪಾಕ್‌ ಪ್ರವಾಸವನ್ನು ರದ್ದು ಪಡಿಸುವಂತೆ ಒತ್ತಡ ತಂದಿತ್ತು ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಆಗ ಪಾಕಿಸ್ತಾನದ ಭದ್ರತಾ ದಳದೊಳಗೆ ಉಗ್ರರೂ ನುಸುಳಿದ್ದರು. ಬಿಲ್‌ ಕ್ಲಿಂಟನ್‌ ಪ್ರಯಾಣ ಮಾಡಬೇಕಿದ್ದ ವಿಮಾನವನ್ನು ಹೊಡೆದುರುಳಿಸುವ ಹುನ್ನಾರವನ್ನೂ ಮಾಡಲಾಗಿತ್ತು . ಈ ಕಾರಣಕ್ಕಾಗೇ ಮೊದಲು ಮಾನವ ರಹಿತ ವಿಮಾನವೊಂದನ್ನು ಹಾರಿಬಿಟ್ಟು, ನಂತರ ಪುಟ್ಟ ವಿಮಾನವೊಂದರಲ್ಲಿ ಕ್ಲಿಂಟನ್‌ ಪಾಕಿಸ್ತಾನಕ್ಕೆ ಹೋಗಿದ್ದರು. ಭದ್ರತಾ ವ್ಯವಸ್ಥೆಯ ಬಗೆಗೂ ವಿಶೇಷ ನಿಗಾ ವಹಿಸಲಾಗಿತ್ತು. ಐಎಸ್‌ಐ ಹಾಗೂ ಅಲ್‌-ಕ್ವೆದಾ ನಡುವೆ ಕೊಡುಕೊಳ್ಳುವಿಕೆ ಇದೆಯೆಂಬುದು 1998ರಲ್ಲೇ ಬೆಳಕಿಗೆ ಬಂದಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿ ಪಾತಕಿ ಶಿಬಿರಗಳ ಧ್ವಂಸ ಮಾಡಿ : ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತ ನಿಲ್ಲಿಸಬೇಕಾದರೆ ಪಾಕಿಸ್ತಾನದಲ್ಲಿರುವ ಎಲ್ಲಾ ಉಗ್ರರ ತರಪೇತಿ ಶಿಬಿರಗಳನ್ನು ಧ್ವಂಸ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್‌ ಅಬ್ದುಲ್ಲಾ ಆಗ್ರಹಿಸಿದ್ದಾರೆ. ಭಯೋತ್ಪಾದನೆಗೆ ಪೂರ್ಣವಿರಾಮ ಹಾಕಲು ಇದು ಬಿಟ್ಟು ಅನ್ಯ ಮಾರ್ಗವಿಲ್ಲ ಎಂದು ಜಮ್ಮುವಿನಲ್ಲಿ ಅಖಿಲ ಭಾರತ 50ನೇ ಪೊಲೀಸ್‌ ಹಾಕಿ ಚಾಂಪಿಯನ್‌ಷಿಪ್‌ ಉದ್ಘಾಟಿಸಿದ ನಂತರ ಅವರು ಹೇಳಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X