Get Updates
Get notified of breaking news, exclusive insights, and must-see stories!

ಡಾ. ಹನುಮಯ್ಯ ಮಂಗಳೂರು ವಿ.ವಿ. ಹೊಸ ಉಪಕುಲಪತಿ

ಬೆಂಗಳೂರು : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ, ಡಾ. ಬಿ. ಹನುಮಯ್ಯ ಅವರನ್ನು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳನ್ನಾಗಿ ನೇಮಕ ಮಾಡಿ, ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು, ಸರಕಾರದ ಸಲಹೆಯ ಮೇರೆಗೆ ಡಾ. ಹನುಮಯ್ಯ ಅವರನ್ನು ಮಂಗಳೂರು ವಿ.ವಿ. ಉಪಕುಲಪತಿಗಳನ್ನಾಗಿ ನೇಮಕ ಮಾಡಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಪ್ರಕಟಿಸಿದ್ದಾರೆ.

ಪ್ರಸ್ತುತ ಮಂಗಳೂರು ವಿ.ವಿ.ಯ ಉಪಕುಲಪತಿಗಳಾಗಿರುವ ಪ್ರೊ. ಎಸ್‌. ಗೋಪಾಲ್‌ ಅವರ ಅಧಿಕಾರಾವಧಿ ಅ.27ಕ್ಕೇ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಡಾ.ಹನುಮಯ್ಯ ಅವರು ಅ.28ರಿಂದ ನಾಲ್ಕು ವರ್ಷದ ಅವಧಿಗೆ ಉಪಕುಲಪತಿಗಳಾಗಿ ನೇಮಕಗೊಂಡಿದ್ದಾರೆ. ನಾಲ್ಕು ವರ್ಷ ಅಥವಾ ಅವರಿಗೆ 65 ವರ್ಷ ಯಾವುದು ಮೊದಲು ತುಂಬುತ್ತದೆಯೋ ಅಲ್ಲಿಯವರೆಗೆ ಹನುಮಯ್ಯ ಅವರು ಉಪಕುಲಪತಿಗಳಾಗಿರುತ್ತಾರೆ ಎಂದೂ ಸಚಿವರು ತಿಳಿಸಿದ್ದಾರೆ.

(ಪಿ.ಟಿ.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+