ಕೃಷ್ಣರಿಗೆ ಪ್ರಾಣ ಬೆದರಿಕೆ; ವಿಧಾನಸೌಧಕ್ಕೆ ಬಂತು ಬಿಳಿಪುಡಿ
ಬೆಂಗಳೂರು : ‘ಅಂಚೆ ಮೂಲಕ ಆಂಥ್ರಾಕ್ಸ್ ’ ಭೀತಿ ಕರ್ನಾಟಕವನ್ನೂ ಬಿಟ್ಟಿಲ್ಲ. ಶನಿವಾರ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಚಿವಾಲಯ ಕಚೇರಿಗೆ ಬಂದಿರುವ ಅಂಚೆ ಕವರ್‌ನಲ್ಲಿ ಬಿಳಿ ಪುಡಿ ಹಾಗೂ ಬೆದರಿಕೆ ಪತ್ರ ಇದ್ದು, ಆಂಥ್ರಾಕ್ಸ್ ಭೀತಿ ಹುಟ್ಟಿಸಿದೆ.
ಬಿಳಿಪುಡಿಯಾಂದಿಗೆ ಇರುವ ಬೆದರಿಕೆ ಪತ್ರ, ಇಂಗ್ಲಿಷ್ ಲಿಪಿಯ ಉರ್ದು ಭಾಷೆಯಲ್ಲಿದೆ. ಆಫ್ಘನ್ ವಿರುದ್ಧ ಯುದ್ಧಸಾರಿರುವ ಅಮೆರಿಕಕ್ಕೆ - ಕರ್ನಾಟಕ ಬೆಂಬಲ ನೀಡಿದರೆ, ಮುಖ್ಯಮಂತ್ರಿ ಕೃಷ್ಣ ಅವರನ್ನು ಕೊಲ್ಲುವುದಾಗಿ ಬೆದರಿಸಲಾಗಿದೆ. ಇದೊಂದು ಹುಸಿ ಬೆದರಿಕೆ ಪತ್ರ ಎಂದು ಪೊಲೀಸರು ಭಾವಿಸಿದ್ದಾರಾದರೂ, ಪುಡಿಯು ಆಂಥ್ರಾಕ್ಸ್ ಸೋಂಕಿನ ಅಂಶ ಹೊಂದಿರುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗೆ ಕಳಿಸಲಾಗಿದೆ.
ಮುಖ್ಯಮಂತ್ರಿ ಕೃಷ್ಣ ಅವರ ಕಚೇರಿಗೆ ನಿತ್ಯ ಬರುವ ಪತ್ರಗಳ ಕಟ್ಟಿನಲ್ಲೇ ಈ ಪತ್ರವೂ ಬಂದಿದೆ. ಭದ್ರತಾ ಸಿಬ್ಬಂದಿ - ಪೊಲೀಸ್ ಅಧಿಕಾರಿಗಳು ಹಾಗೂ ತಜ್ಞರು ಈ ಬೆದರಿಕೆ ಪತ್ರ ಹಾಗೂ ಅದರಲ್ಲಿರುವ ಬಿಳಿಪುಡಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.
ಆ ಅಂಚೆ ಪತ್ರದ ಮೇಲೆ ಬಿನ್ ಲಾಡೆನ್ ಸೈನಿಕ ಎಂಬ ಸಹಿ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಮಡಿಯಾಳ್ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕೇಂದ್ರಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರ ಕಚೇರಿಗೂ ಬಿಳಿ ಪುಡಿಯ ಅಂಚೆ ಪತ್ರ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮೂಲಗಳ ಪ್ರಕಾರ ಈ ಪತ್ರ ಬೆಳಗಾವಿ ಜಿಲ್ಲೆಯ ಇಂದವಾಡಿ ಗ್ರಾಮದಿಂದ ಬಂದಿದೆ. ಬೆದರಿಕೆ ಪತ್ರದಲ್ಲಿ ಆಫ್ಘಾನಿಸ್ತಾನದ ಹೆಸರೂ ಇದ್ದು, ಶುಕ್ರವಾರ ಮೈಸೂರು ದಸರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಕೃಷ್ಣ ಅವರನ್ನು ಕೊಲ್ಲುವುದಾಗಿ ತಿಳಿಸಲಾಗಿತ್ತು.
(ಇನ್‌ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications