ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರಿನಲ್ಲಿ ವಿಜಯದಶಮಿಯಂದು ಕಂದಮ್ಮಗಳಿಗೆ ವಿದ್ಯಾರಂಭ

By Staff
|
Google Oneindia Kannada News

ಕೊಲ್ಲೂರು: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ವಿಜಯ ದಶಮಿಯಂದು ನೂರಕ್ಕೂ ಹೆಚ್ಚು ಮಂದಿ ಮಕ್ಕಳಿಗೆ ವಿದ್ಯಾರಂಭ ಮಾಡಲಾಯಿತು.

ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೇ ಮಕ್ಕಳಿಗೆ ದೇವಸ್ಥಾನದ ಸರಸ್ವತೀ ಮಂಟಪದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆರಂಭಿಸಲಾಯಿತು. ‘ಸರಸ್ವತಿ ನಮಸ್ತುಭ್ಯಂ ವರದೆ ಕಾಮರೂಪಿಣಿ । ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್‌ ಭವತು ಮೇ ಸದಾ।’ ಎಂಬ ಘೋಷದೊಂದಿಗೆ ಪುಟ್ಟ ಮಕ್ಕಳ ತೋರು ಬೆರಳಿನಲ್ಲಿ ಅಕ್ಕಿಯಲ್ಲಿ ಓಂಕಾರವನ್ನು ಬರೆಯುವ ಮೂಲಕ ವಿದ್ಯಾರಂಭ ಮಾಡಿದರು.

ದೇವಿಯ ಸಮ್ಮುಖದಲ್ಲಿ ಮಕ್ಕಳಿಗೆ ವಿದ್ಯಾರಂಭದ ಜೊತೆಗೆ ಇನ್ನೂ ಹಲವು ಮಕ್ಕಳಿಗೆ ಭತ್ತದ ಕದಿರು ಪೂಜೆ, ಕಣಜ ಪೂಜೆ, ನವಾನ್ನ ಪ್ರಾಶನ ಮಾಡಲಾಯಿತು. ಊರ ಹಾಗೂ ಪರವೂರ ಭಕ್ತರಿಗೆ ಹೊಸ ಅಕ್ಕಿ ಮತ್ತು ಕದಿರು ಹಂಚುವ ಕಾರ್ಯಕ್ರವನ್ನೂ ದೇವಳದ ದರ್ಮದರ್ಶಿಗಳು ನಡೆಸಿಕೊಟ್ಟರು.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತಿತರ ಪ್ರದೇಶಗಳಿಂದ ಸಾವಿರಾರು ಮಂದಿ ಭಕ್ತರು ಮೂಕಾಂಬಿಕೆ ದರ್ಶನಕ್ಕೆ ಆಗಮಿಸಿದ್ದರು. ನಟಿ ಜಯಭಾರತಿಯೂ ವಿಜಯ ದಶಮಿಯ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X