ಬಲರಾಮನ ಹೆಗಲಲ್ಲಿ ಚಿನ್ನದಂಬಾರಿ: ಮೈಸೂರಲ್ಲಿ ಜಂಬೂ ಸವಾರಿ
ಮೈಸೂರು : ಜಂಬೂಸವಾರಿಯ ಆ ರಸಕ್ಷಣ ಹತ್ತಿರವಾಗಿದೆ. ಶುಕ್ರವಾರ ಮಧ್ಯಾಹ್ನ 3.50ಕ್ಕೆ (ಕುಂಭ ಲಗ್ನ) ವಿದ್ಯುಕ್ತವಾಗಿ ಮೈಸೂರು ದಸರೆಯ ಜಂಬೂ ಸವಾರಿ ಆರಂಭವಾಗಲಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸಪತ್ನೀಕರಾಗಿ ಅರಮನೆ ಆವರಣದಲ್ಲಿ - ಬಲರಾಮ ಹೊತ್ತ ಚಿನ್ನದಂಬಾರಿಯಲ್ಲಿನ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಇದಕ್ಕೆ ಮುನ್ನ ಅರಮನೆಯ ಉತ್ತರ ದ್ವಾರದ ಬಳಿ ಮುಖ್ಯಮಂತ್ರಿಗಳು ನಂದಿಧ್ವಜಕ್ಕೂ ಅವರು, ಪೂಜೆ ಸಲ್ಲಿಸಲಿದ್ದಾರೆ.
ಈ ಹೊತ್ತು ಮೈಸೂರು ಒಡೆಯರ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ವಿಗ್ರಹವುಳ್ಳ 750 ಕೆ.ಜಿ. ತೂಕದ ಚಿನ್ನದಂಬಾರಿಯನ್ನು ಹೊತ್ತು ರಾಜಮಾರ್ಗಗಳಲ್ಲಿ ರಾಜ ಗಾಂಭೀರ್ಯದಿಂದ ಬರುವ ಬಲರಾಮನನ್ನು ಸ್ವಾಗತಿಸಲು ಇಡೀ ಮೈಸೂರೇ ಸಜ್ಜಾಗಿದೆ.
ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಈ ವರ್ಷ 58 ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ಬಲರಾಮನ ಅಕ್ಕ-ಪಕ್ಕ ಕೋಕಿಲಾ, ಕಾಂತಿ ಹೆಜ್ಜೆ ಹಾಕಿದರೆ, ಹಿಂದೆ ಪಟ್ಟದ ಆನೆ, ಒಂಟೆ, ಅಶ್ವಾರೋಹಿಗಳು, ಅರಮನೆಯ ಪುರಾತನ ವರ್ಣರಂಜಿತ ಎತ್ತಿನಗಾಡಿ, ಮೈಸೂರು ಖ್ಯಾತಿಯ ಪೊಲೀಸ್ ಬ್ಯಾಂಡ್, ನಾದಸ್ವರ ತಂಡಗಳು ಸಾಗಲಿವೆ.
ಮುಗಿಲಿನಿಂದ ಪುಷ್ಪವೃಷ್ಟಿ : ಈ ಬಾರಿ ಸಾಂಕೇತಿಕವಾಗಿ ಹಾಗೂ ಸರಳವಾಗಿ ದಸರೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಇರುವುದಿಲ್ಲ. ಆದರೆ, ಬಲರಾಮ ಹೊತ್ತ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಕುಂಭಲಗ್ನದಲ್ಲಿ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಯಾಗಲಿದೆ.
ಬರದ ಕಾರಣ ದಸರೆಯ ಸಂದರ್ಭದಲ್ಲಿ ವಿದ್ಯುತ್‌ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಮೈಸೂರು ಈ ಬಾರಿ ದೀಪಾಲಂಕಾರವಿಲ್ಲದೆ ನಿರಾಭರಣ ಸುಂದರಿಯಾಗಿ ಕಾಣಲಿದೆ. ಮೆರವಣಿಗೆಯು ಚಾಮರಾಜ ಒಡೆಯರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಕೃಷ್ಣರಾಜ ವೃತ್ತ, ಹೈವೇ ವೃತ್ತ ಹಾಗೂ ಕೆ.ಎಸ್.ಆರ್.ಟಿ.ಸಿ. ರಸ್ತೆಯ ಮೂಲಕ ಸಾಗಿ ಬನ್ನಿಮಂಟಪದಲ್ಲಿರುವ ವಿಜಯದಶಮಿ ಉದ್ಯಾನದಲ್ಲಿ ಕೊನೆಗೊಳ್ಳಲಿದೆ. ಜಾಗತಿಕ ವಿಧ್ಯಮಾನದ ಹಿನ್ನೆಲೆಯಲ್ಲಿ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
(ಇನ್‌ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications