ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲಸ್ಟರ್‌ ಬಾಂಬ್‌ ದಾಳಿ : ಜನರಿಂದ ಭರ್ತಿ ತುಂಬಿದ್ದ ಬಸ್‌ ಛಿದ್ರ

By Staff
|
Google Oneindia Kannada News

ಕಾಬೂಲ್‌ : ಒಂದೆಡೆ ಅಮೆರಿಕಾದ ಯುದ್ಧ ವಿಮಾನಗಳು ಹರಿಸುತ್ತಿರುವ ಬಾಂಬ್‌ ದಾಳಿ. ಮತ್ತೊಂದೆಡೆ ಖುದ್ದು ತಾಲಿಬಾನ್‌ ಸರ್ಕಾರ ತನ್ನ ಜನರನ್ನೇ ವಿಷ ದಾಳಿಯಿಂದ ಕೊಲ್ಲುತ್ತಿದೆ ಎಂಬ ಪುಕಾರು. ಅಮೆರಿಕಾ- ಆಫ್ಘಾನಿಸ್ತಾನದ ಈ ಟಂಗಾಟುಂಗಿಯಲ್ಲಿ ಜೀವ ಕಳಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಲೆಕ್ಕಕ್ಕೇ ಸಿಕ್ಕುತ್ತಿಲ್ಲ. ಜಗತ್ತಿನ ಒಬ್ಬಾತ ದಸರೆಯ ಹಬ್ಬದೂಟ ಉಂಡು- ತೇಗುತ್ತಿದ್ದರೆ, ಆಫ್ಘನ್ನಿನ ಮತ್ತೊಬ್ಬ ಬೆಂಕಿ ಪೊಟ್ಟಣ ತರುವುದಕ್ಕೂ ಹೊರಗೆ ಹೋಗಲು ಸಿದ್ಧನಿಲ್ಲ. ಶುಕ್ರವಾರದ ಯುದ್ಧ ಬೆಳವಣಿಯ ತುಣುಕುಗಳು...

  • ಕಾಂದಹಾರ್‌ನಲ್ಲಿ ಜನರಿಂದ ಖಚಾಖಚಿ ತುಂಬಿದ್ದ ಬಸ್‌ ಒಂದರ ಮೇಲೆ ಅಮೆರಿಕಾ ಬಾಂಬ್‌ ಹಾಕಿದ್ದು, ಅದು ಛಿದ್ರ ಛಿದ್ರವಾಯಿತು. ಚೆಲ್ಲಿದ ಕಳೇಬರಗಳ ಸಂಖ್ಯೆ ಎಷ್ಟೆಂಬುದು ಇನ್ನೂ ಗೊತ್ತಾಗಿಲ್ಲ- ತಾಲಿಬಾನ್‌ನ ವಾರ್ತಾ ಸಚಿವ ಅಬ್ದುಲ್‌ ಹೆನನ್‌ ಹೇಮತ್‌.
  • ಒಸಾಮನ ಶಿಬಿರ ಎಂದು ತಪ್ಪಾಗಿ ಭಾವಿಸಿ ಎಷ್ಟೋ ಅಮಾಯಕ ಹಳ್ಳಿಗರನ್ನು ಕೊಲ್ಲಲಾಗಿದೆ- ತಾಲಿಬಾನ್‌ ಆಡಳಿತ.
  • ಅಮೆರಿಕಾ ತನ್ನ ದಾಳಿಯ ವರಸೆಗಳನ್ನು ಬದಲಿಸುತ್ತಾ, ತೀವ್ರಗೊಳಿಸುತ್ತಿದೆ. ಕಳೆದ ರಾತ್ರಿ ಅಮೆರಿಕಾ ಯುದ್ಧ ವಿಮಾನಗಳು ಗೊಂಚಲು ಗೊಂಚಲು (ಕ್ಲಸ್ಟರ್‌) ಬಾಂಬ್‌ಗಳನ್ನು ಸಿಡಿಸಿದ್ದು, ಸಾಕಷ್ಟು ಹಾನಿಗಳಾಗಿವೆ- ಹೇಮತ್‌.
  • ತಾಲಿಬಾನ್‌ನ ಮಿಲಿಟರಿ ಪಡೆಗಳು ವಿಷ ದಾಳಿಯಿಂದ ತಮ್ಮ ಜನರನ್ನು ತಾವೇ ಕೊಂದು, ಅದರ ಹೊಣೆಯನ್ನು ನಮ್ಮ ತಲೆಗೆ ಕಟ್ಟುತ್ತಿದ್ದಾರೆ- ಪೆಂಟಗನ್‌ ಅಧಿಕಾರಿಗಳು.
  • ನಮ್ಮವರನ್ನೇ ಕೊಲ್ಲುವ ಮಟ್ಟಕ್ಕೆ ನಾವು ಇಳಿದಿಲ್ಲ. ಇವೆಲ್ಲಾ ಅಮೆರಿಕಾದ ಕಿರಿಕ್ಕು, ತಂತ್ರ- ತಾಲಿಬಾನ್‌.
(ಎಎಫ್‌ಪಿ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X