‘ಸಿಮಿ, ಎಲ್ಟಿಟಿಈ, ದೀನ್‌ದಾರ್ ಅಂಜುಮನ್ ಭಯೋತ್ಪಾದಕ ಸಂಘಟನೆಗಳು’
ನವದೆಹಲಿ : ಭಯೋತ್ಪಾದನೆ ಪ್ರತಿಬಂಧನೆಗೆ ಸಂಬಂಧಿಸಿದ ಹೊಸ ಅಧ್ಯಾದೇಶದ ಪ್ರಕಾರ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ), ಎಲ್‌ಟಿಟಿಈ ಮತ್ತು ದೀನ್‌ದಾರ್ ಅಂಜುಮನ್ ಸಂಘಟನೆಗಳನ್ನು ಭಯೋತ್ಪಾದನಾ ಸಂಘಟನೆಗಳು.
ಕಾಶ್ಮೀರ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಲಷ್ಕರ್ ಈ ತೋಯಿಬಾ, ಪಾಸ್ಬನ್ ಈ-ಅಹ್ಲೆ -ಹದಿಸ್, ಜೈಶ್- ಈ -ಮಹ್ಮದ್, ತಹರಿಕ್ -ಈ ಫರಾನ್, ಹರ್ಕತ್ -ಉಲ್ -ಮುಜಾಹಿದ್ದೀನ್, ಹರ್ಕತ್-ಉಲ್ -ಅನ್ಸರ್, ಹರ್ಕತ್- ಉಲ್-ಜೆಹಾದ್ ಇ -ಇಸ್ಲಾಮಿ, ಹಿಜ್‌ಬುಲ್ ಮುಜಾಹಿದ್ದೀನ್, ಪಿರ್ ಪಂಜಾಲ್ ರೆಜಿಮೆಂಟ್, ಅಲ್-ಉಮರ್- ಮುಜಾಹಿದ್ದೀನ್ ಮತ್ತು ಇಸ್ಲಾಮಿಕ್‌ಫ್ರಂಟ್ ಈ ಕಾಯ್ದೆಯಡಿ ಗುರುತಿಸಲ್ಪಡುತ್ತವೆ.
ಭಯೋತ್ಪಾದಕ ಪ್ರತಿಬಂಧಕ ಅಧ್ಯಾದೇಶದ ಮೂರನೇ ಅಧ್ಯಾಯದಲ್ಲಿ ಭಯೋತ್ಪಾದಕ ಸಂಘಟನೆಗಳ ಉಲ್ಲೇಖವಿದೆ. ಅಧ್ಯಾಯದ ಸೆಕ್ಷನ್ 20ರ ಪ್ರಕಾರ, ಭಯೋತ್ಪಾದಕ ಸಂಘಟನೆಗೆ ಸೇರುವ ಮತ್ತು ಸಂಘಟನೆಗೆ ಸೇರಿರುವುದಾಗಿ ಹೇಳಿಕೊಳ್ಳುವುದೂ ಅಪರಾಧವಾಗುತ್ತದೆ. ಅಪರಾಧಿಯು 10 ವರ್ಷಗಳ ಅವಧಿಯ ಜೈಲು ಶಿಕ್ಷೆ, ದಂಡ ಅಥವಾ ಶಿಕ್ಷೆ ಹಾಗೂ ದಂಡ ಎರಡನ್ನೂ ಭರಿಸಬೇಕಾಗುತ್ತದೆ.
ಸೆಕ್ಷನ್ 21ರ ಪ್ರಕಾರ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವುದು, ಸಂಘವನ್ನು ಬೆಂಬಲಿಸಿ ಸಾರ್ವಜನಿಕ ಅಥವಾ ಸಾಮಾನ್ಯ ಸಭೆಗಳನ್ನು ನಡೆಸುವುದು, ಭಯೋತ್ಪಾಕರು ಉದ್ದೇಶಿಸಿ ಮಾತನಾಡುವ ಸಭೆಗಳನ್ನು ಆಯೋಜಿಸುವುದು ಅಪರಾಧವಾಗುತ್ತದೆ. ಸೆಕ್ಷನ್ 22 , ಭಯೋತ್ಪಾದಕ ಸಂಘಟನೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಣ ಅಥವಾ ಸಂಪನ್ಮೂಲಗಳನ್ನು ಒದಗಿಸುವುದು ಅಪರಾಧವೆನ್ನುತ್ತದೆ. ಅಂತಹ ಅಪರಾಧಿಗೆ ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ದೇಶದ ಆಗ್ನೇಯ ಭಾಗದ, ಅಸ್ಸಾಮ್‌ನ ಯುನೈಟೆಡ್ ಲಿಬರೇಷನ್ ಫ್ರಂಟ್, ಕಾಂಗ್ಲೈ ಪಾರ್ಕ್‌ನ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ, ಕಾಂಗ್ಲೈಪಾರ್ಕ್‌ನ ಕಮ್ಯೂನಿಸ್ಟ್ ಪಾರ್ಟಿ, ಮಣಿಪುರ ಪೀಪಲ್ಸ್ ಲಿಬರೇಷನ್ ಫ್ರಂಟ್, ಆಲ್ ತ್ರಿಪುರ ಟೈಗರ್‌ಫೋರ್ಸ್ ಮತ್ತು ತ್ರಿಪುರಾದ ನ್ಯಾಷನಲ್‌ಲಿಬರೇಷನ್ ಫ್ರಂಟ್ ಸೇರಿದಂತೆ ದೇಶದ ಇನ್ನೂ ಹಲವು ಸಂಘಟನೆಗಳ ಹೆಸರು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿದೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications