ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸಕ್ಕೆ ಮುನ್ನ ಕಾಕತಿಯಲ್ಲಿ ಕಿತ್ತೂರು ರಾಣಿಯ ವಿಗ್ರಹ

By Staff
|
Google Oneindia Kannada News

ಬೆಳಗಾವಿ : ಕಿತ್ತೂರು ರಾಣಿಯ ಹುಟ್ಟೂರಾದ ಕಾಕತಿಯಲ್ಲಿ ರಾಣಿ ಚೆನ್ನಮ್ಮ ವಿಗ್ರಹ ಸ್ಥಾಪನೆಗಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಜಿಲ್ಲೆಯ ಆಡಳಿತ ಅಧಿಕಾರಿಗಳ ಭರವಸೆಯಾಂದಿಗೆ ಬುಧವಾರ ಅಂತ್ಯಗೊಂಡಿದೆ.

ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಮುನ್ನ ಕಾಕತಿ ಗ್ರಾಮದಲ್ಲಿ ರಾಣಿ ಚೆನ್ನಮ್ಮಳ ವಿಗ್ರಹ ಸ್ಥಾಪಿಸುವುದಾಗಿ ಜಿಲ್ಲಾಧಿಕಾರಿ ಅತುಲ್‌ ಕುಮಾರ್‌ ತಿವಾರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನಿಲ್‌ ಪೊಟ್ದರ್‌ ಬುಧವಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ನಿಲ್ಲಿಸಲಾಗಿದೆ.

ಅಖಿಲ ಭಾರತೀಯ ವೀರಶೈವ ಮಹಾಸಭಾ, ಜಿಲ್ಲೆಯ ವಿವಿಧ ಕನ್ನಡ ಸಂಘಟನೆಗಳು, ಎಐಎಸ್‌ಎಫ್‌ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾಕತಿಯಲ್ಲಿ ರಾಣಿ ಚೆನ್ನಮ್ಮಳ ವಿಗ್ರಹ ಸ್ಥಾಪಿಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದವು. ರಾಣಿ ಚೆನ್ಮಮ್ಮ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿ, ಮುಂದಿನ ವಾರದೊಳಗಾಗಿ ಸಮಿತಿಯಾಂದನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಬುಧವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಣಿ ಚೆನ್ಮಮ್ಮಳ ತಂದೆ ದುಳಪ್ಪ ದೇಸಾಯಿ ಸಮಾಧಿಯ ಜೀರ್ಣೋದ್ಧಾರ, ಕಾಕತಿ ಕೈಗಾರಿಕಾ ಪ್ರದೇಶಕ್ಕೆ ರಾಣಿ ಚೆನ್ನಮ್ಮ ಕೈಗಾರಿಕಾ ಪ್ರದೇಶ ಎಂದು ಮರುನಾಮಕರಣ, ರಾಣಿ ಚೆನ್ನಮ್ಮಳ ಕೋಟೆಯ ಅಭಿವೃದ್ಧಿ, ಕಾಕತಿ ಗ್ರಾಮವನ್ನು ಪ್ರವಾಸೋದ್ಯಮ ಗ್ರಾಮವೆಂದು ಘೋಷಿಸಬೇಕೆಂಬ ಸ್ಥಳೀಯರ ಬೇಡಿಕೆ ಪ್ರಸ್ತುತ ಸರಕಾರದ ಮುಂದಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X