ನಂದಗಡ ಬಳಿ ಬಸ್‌ನಲ್ಲಿ ಹಠಾತ್ ಬೆಂಕಿ : 8 ಮಂದಿ ಸುಟ್ಟು ಕರಕಲು
ಬೆಳಗಾವಿ : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡ ಪರಿಣಾಮ ಮಕ್ಕಳೂ ಸೇರಿದಂತೆ 8 ಮಂದಿ ಸತ್ತಿದ್ದು, 13 ಮಂದಿಗೆ ಗಾಯಗಳಾಗಿವೆ. ಬಸ್‌ನಲ್ಲಿದ್ದ ಅನೇಕ ಪ್ರಯಾಣಿಕರು ಕಕ್ಕೇರಿಯ ಬಿಷ್ಠಮ್ಮ ದೇವಿ ಜಾತ್ರೆಗೆ ಹೊರಟಿದ್ದರು.
ಬುಧವಾರ ಮಧ್ಯಾಹ್ನ 1.40ರ ಸುಮಾರಿನಲ್ಲಿ ಖಾನಾಪುರ- ಯಲ್ಲಾಪುರ ರಸ್ತೆಯ ನಂದಗಡ ಸಮೀಪ ಈ ದುರಂತ ಸಂಭವಿಸಿದೆ. ಸತ್ತವರ ಪೈಕಿ ನಾಲ್ವರನ್ನು ಸಿದ್ದವ್ವ ಬಾಳಪ್ಪ ನಾಯಕ್(50), ಬೋರಾಜೆ ಯಲ್ಲಪ್ಪ ರಾಮನಕಟ್ಟೆ (11), ಶೃತಿ ಪರಶುರಾಮ ಸಿಂಧೆ(8) ಹಾಗೂ ಶುಭ ಪರಶುರಾಮ ಸಿಂಧೆ (5) ಎಂದು ಗುರುತಿಸಲಾಗಿದೆ. ಉಳಿದ ನಾಲ್ವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬೆಳಗಾವಿಯಿಂದ ಶಿರಸಿಗೆ ಹೊರಟಿದ್ದ ಬಸ್‌ನಲ್ಲಿ 96 ಮಂದಿ ಪ್ರಯಾಣಿಕರಿದ್ದರು. ಇದ್ದಕ್ಕಿದ್ದಂತೆ ಭಗ್ಗನೆ ಬೆಂಕಿ ಹೊತ್ತಿಕೊಂಡಿತು. ಚಾಲಕ ಬಸ್ ನಿಲ್ಲಿಸಿ, ಗಾಜನ್ನು ಒಡೆದು, 30 ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸಿದ. ವ್ಯಾಪಕವಾಗಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನರ ನೂಕುನುಗ್ಗಲಿನ ನಡುವೆ ಅನೇಕರಿಗೆ ಗಾಯಗಳಾದವು. ಸತ್ತಿರುವ ಎಲ್ಲರ ದೇಹಗಳೂ ಸುಟ್ಟು ಕರಕಲಾಗಿವೆ. ಬಸ್‌ನಲ್ಲಿ ಯಾವುದೋ ಸ್ಫೋಟಕ ಅಥವಾ ಸೀಮೆಎಣ್ಣೆಯಂತಹ ವಸ್ತು ಇದ್ದದ್ದೇ ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 15 ಸಾವಿರ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 5 ಸಾವಿರ ರುಪಾಯಿ ನೆರವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ತಕ್ಷಣವೇ ವಿತರಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications