ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ಗೆ ಗುಳೇ ಹೊರಟವರಲ್ಲಿ ಸತ್ತವರು 20, ಇವರಲ್ಲಿ 9 ಮಕ್ಕಳು.

By Staff
|
Google Oneindia Kannada News

ಕ್ವೆತ್ತಾ : ಅಮೆರಿಕಾ ಬಾಂಬ್‌ ಸಿಡಿಸುತ್ತಿದ್ದ ಪ್ರದೇಶದಿಂದ ಪಾಕಿಸ್ತಾನಕ್ಕೆ ಗುಳೇ ಹೊರಡುವಾಗ 9 ಮಕ್ಕಳು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನಕ್ಕೆ ತಲುಕಿರುವ ಆಫ್ಘನ್‌ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಕ್ಷಿಣ ಆಫ್ಘಾನಿಸ್ತಾನದ ಟಿರಿನ್‌ ಕೋಟ್‌ ಬಳಿ ಭಾನುವಾರ ಗುಳೇ ಹೊರಟಾಗ ಈ ದುರಂತ ಸಂಭವಿಸಿತು ಎಂದು ಮಂಗಳವಾರ ಪಾಕಿಸ್ತಾನಕ್ಕೆ ತಲುಪಿದ ಬದುಕುಳಿದವರು ಹೇಳಿದ್ದಾರೆ. ಈ ಪ್ರತ್ಯಕ್ಷದರ್ಶಿಗಳು ತಾವು ಅನುಭವಿಸಿದ್ದನ್ನು ಬಿಡಿಸಿ ಹೇಳಿದ್ದು ಹೀಗೆ....

ಪಾಕಿಸ್ತಾನ ಸೇರಿಕೊಳ್ಳಲು ಟ್ರ್ಯಾಕ್ಟರ್‌ ಟ್ರಕ್‌ನಲ್ಲಿ ಹೊರಟಿದ್ದ ನಮ್ಮ ತಲೆ ಮೇಲೆ ಸರಬರನೆ ವಿಮಾನಗಳು ಹಾರಿದವು. ಬಾಂಬ್‌ಗಳು ಒಂದರ ಹಿಂದೊಂದರಂತೆ ಸಿಡಿದವು. 9 ಮಕ್ಕಳು, ಉಳಿದವರು ದೊಡ್ಡವರು. ಬಾಂಬ್‌ ದಾಳಿಯಿಂದ ಚೀರಿದರು. ಅದು ಐದು ನಿಮಿಷ ಮಾತ್ರ. ಇನ್ನು ಕೆಲವರು ಗಾಯಗಳಿಂದ ಬೇಯುತ್ತಿದ್ದರು. ದುರಂತವೆಂದರೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆಯಿರಲಿಲ್ಲ. ಕಾಂದಹಾರ್‌ಗೆ 6 ತಾಸಿನ ಪಯಣ. ಸಣ್ಣ ಪುಟ್ಟ ಗಾಯಗಳಾದವರು ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು. ಒಬ್ಬಾಕೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತನ್ನ 4 ಮಕ್ಕಳನ್ನು ಕಳೆದುಕೊಂಡ ಪೆಟ್ಟು ಅದಕ್ಕಿಂತ ದೊಡ್ಡದು. ಆಸ್ಪತ್ರೆಯಲ್ಲಿ ಆಕೆಯೂ ಕೊನೆಯುಸಿರೆಳೆದಳು.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X