ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾನತೆ ಮತ್ತು ಸ್ವಾತಂತ್ರ್ಯದತ್ತ ಒಂದು ಮಿಲಿಯನ್‌ ದಲಿತರು

By Staff
|
Google Oneindia Kannada News

ಬೆಂಗಳೂರು : ನವೆಂಬರ್‌ 4ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಒಂದು ಮಿಲಿಯನ್‌ ದಲಿತರು ಬೌದ್ಧ ಧರ್ಮ ಕ್ಕೆ ಸೇರ್ಪಡೆಯಾಗಲಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಖಿಲಭಾರತ ಒಕ್ಕೂಟ ಮತ್ತು ಲಾರ್ಡ್‌ ಬುದ್ಧ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಈ ಮತಾಂತರ ಕಾರ್ಯಕ್ರಮ ನಡೆಯಲಿದೆ. ಹಿಂದು ಧರ್ಮ ಶತಮಾನಗಳಿಂದ ದಲಿತರನ್ನು ಶೋಷಣೆಗೀಡು ಮಾಡಿದೆ. ಈ ಧರ್ಮದಿಂದ ಹೊರ ಬರುವ ಮೂಲಕ ನಾವು ಮಾನವೀಯ ಗೌರವವನ್ನು ಪಡೆಯಲು ನಾವು ಯತ್ನಿಸುತ್ತಿದ್ದೇವೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ರಾಮ್‌ ರಾಜ್‌ ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಾಮೂಹಿಕ ಮತಾಂತರ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ಮತ್ತು ಸಮಾನತೆಯತ್ತ ತೆರಳುವ ದಾರಿ ಎಂದು ರಾಮ್‌ರಾಜ್‌ ಬಣ್ಣಿಸಿದ್ದಾರೆ. ಬೌದ್ಧ ಧರ್ಮವನ್ನು ಅವಲಂಬಿಸುವ ಮೂಲಕ ದಲಿತರ ಮಾನಸಿಕ ಚಿಂತನೆಗಳು ಬದಲಾಗಬಹುದು. ಐವತ್ತು ವರ್ಷಗಳ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ದೊರತಿದ್ದರೂ 250 ಮಿಲಿಯನ್‌ ದಲಿತರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಿಲ್ಲ ಎಂದು ವಿಷಾದಿಸಿದ ರಾಮ್‌ರಾಜ್‌, ದಲಿತರ ಉದ್ಧಾರಕ್ಕಾಗಿ ರಾಜ್ಯ ಮತ್ತು ರಾಷ್ಟ್ರೀಯ ನೀತಿ ರೂಪಿಸಲು ಅಂಬೇಡ್ಕರ್‌ ಹೋರಾಟ ನಡೆಸಿದ್ದರು. ಆದರೆ ಆ ಎಲ್ಲ ಪ್ರಯತ್ನಗಳನ್ನು ಮೂಲೆಗೆ ತಳ್ಳಲಾಗಿದೆ ಎಂದರು.

ಬಾಲಂಗೋಚಿ: ಇದು ಬೌದ್ಧಧರ್ಮದ ಸುಗ್ಗಿಕಾಲವೇ ಇರಬೇಕು! ದೆಹಲಿಗೆ ಬೌದ್ಧರ ರಂಗೇರುವ ಮುನ್ನವೇ ಬೆಂಗಳೂರಿನಲ್ಲೂ ಅನೇಕರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಸಂಖ್ಯೆ ದೊಡ್ಡದಲ್ಲದಿದ್ದರೂ, ಮತಾಂತರ ಹೊಂದಿವರ ಹೆಸರುಗಳು ದೊಡ್ಡವು. ಅವರ ಉದ್ದೇಶ ಸ್ವಾತಂತ್ರ್ಯ ಮತ್ತು ಸಮಾನತೆಯಲ್ಲ ; ನಗರಪಾಲಿಕೆ ಚುನಾವಣೆಗಳ ಮೀಸಲು ಸ್ಥಾನವನ್ನು ಹಿಂಬಾಗಿಲಿನಿಂದ ಪ್ರವೇಶಿಸುವುದು. ಅವಕಾಶವಾದಿ ಮತಾಂತರ ಎಂದರೆ ಇದುವೇನಾ?

(ಇನ್ಫೋ ವಾರ್ತೆ)

What do you feel?

ಮತಾಂತರದ ಬಗ್ಗೆ ಎಸ್‌.ಎಲ್‌.ಭೈರಪ್ಪನವರು ಏನು ಹೇಳುತ್ತಾರೆಂದರೆ...

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X