ಶಿಡ್ಲಘಟ್ಟದ ವ್ಯಕ್ತಿಗೆ ಈ ಪರಿಯ ಆಂಥ್ರಾಕ್ಸ್ : ಸಚಿವರ ಹೇಳಿಕೆ
ಬೆಂಗಳೂರು : ವಿಶ್ವವನ್ನೇ ನಡುಗಿಸುತ್ತಿರುವ ಆಂಥ್ರಾಕ್ಸ್ , ಕರ್ನಾಟಕದಲ್ಲೂ ಪತ್ತೆಯಾಗಿದೆ. ಪರೀಕ್ಷೆಯ ನಂತರ ಶಿಡ್ಲಘಟ್ಟದ ತಾಲೂಕಿನ ಹಳ್ಳಿಯಾಂದರ ಮತ್ತೊಬ್ಬ ವ್ಯಕ್ತಿಗೆ ಆಂಥ್ರಾಕ್ಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಬುಧವಾರ ತಿಳಿಸಿದ್ದಾರೆ.
ಆಂಥ್ರಾಕ್ಸ್ ಸೋಂಕು ತಗುಲಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಏಕಪ್ರಕಾರವಾಗಿ ಬರುವ ಈ ಸೋಂಕು ಕರ್ನಾಟಕಕ್ಕೆ ಹೊಸದೇನೂ ಅಲ್ಲ. 1983ರಲ್ಲೇ ಹೆಗ್ಗಡದೇವನಕೋಟೆಯಲ್ಲಿ ವರದಿಯಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಕೋಲಾರ ಜಿಲ್ಲೆಯ ಅಲಗುರ್ಕಿ ಗ್ರಾಮದಲ್ಲಿ ಇಬ್ಬರು ಆಂಥ್ರಾಕ್ಸ್‌ಗೆ ಬಲಿಯಾಗಿದ್ದಾರೆ ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಸಿಡಿ) ವರದಿ ದೃಢಪಡಿಸಿವೆ. ಇಲ್ಲಿ 20 ಕುರಿ, ಒಂದು ಎತ್ತು ಮತ್ತು ಎರಡು ಹಸುಗಳೂ ಸಾವನ್ನಪ್ಪಿವೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಎನ್‌ಐಸಿಡಿಯು ಆಂಥ್ರಾಕ್ಸ್‌ನ 8 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ 1999ರ ಜುಲೈನಲ್ಲಿ ಮೈಸೂರಿಗೆ 80 ಕಿ.ಮೀಟರ್ ದೂರದ ಕೊಪ್ಪಲೊಂದರಲ್ಲಿ (ಸಣ್ಣಹಳ್ಳಿ) ಐವರು ಮೃತಪಟ್ಟಿದ್ದಾರೆ. ಈಗ ರಾಜ್ಯ ಸರಕಾರವು ಆಂಥ್ರಾಕ್ಸ್ ನಿಯಂತ್ರಿಸಲು ಮತ್ತು ರೋಗ ಗುಣಪಡಿಸಲು ಔಷಧ ಸಂಗ್ರಹಿಸಿದೆ ಎಂದು ಸಚಿವರು ತಿಳಿಸಿದರು.
ಆಂಥ್ರಾಕ್ಸ್ ಕರ್ನಾಟಕದ ಕೆಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ. ಕೋಲಾರ, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ ಹಾಗೂ ಬೀದರ್‌ಗಳ ಕುರಿ ಮತ್ತು ಜಾನುವಾರುಗಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಉಗ್ರಗಾಮಿಗಳು ಒಂದು ವೇಳೆ ಜೈವಿಕ ಸಮರಕ್ಕೆ ಮುಂದಾದರೆ, ರಾಜ್ಯದ ಆರೋಗ್ಯ ಸಚಿವಾಲಯವು ಈ ಮಹಾಮಾರಿಯನ್ನು ನಿಯಂತ್ರಿಸಲು ಸಜ್ಜಾಗಿದೆ ಮತ್ತು ಸಮರ್ಥವಾಗಿದೆ. ಜೈವಿಕ ಸಮರ ಭೀತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿರುವಂತೆ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ಉಗ್ರರ ವಾಯುದಾಳಿಯ ಬಳಿಕ ಅಮೆರಿಕ ಸೇರಿದಂತೆ ವಿಶ್ವದೆಲ್ಲೆಡೆ ಆಂಥ್ರಾಕ್ಸ್ ಭೀತಿ ಇದೆ. ಕೇಂದ್ರ ಸರಕಾರ ಕೂಡ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳಿಸಿ, ಜೈವಿಕ ಭಯೋತ್ಪಾದನೆಗೆ ಬಳಸುವ 60 ಬಗೆಯ ಬ್ಯಾಕ್ಟೀರಿಯಾಗಳ ಪಟ್ಟಿ ನೀಡಿದೆ. ನಿಯಂತ್ರಣಕ್ಕೆ ಸಕಲ ಸಜ್ಜಾಗಿರುವಂತೆ ತಿಳಿಸಿದೆ ಎಂದೂ ಅವರು ಹೇಳಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications