ಗೃಹ ಸಚಿವ ಎಲ್.ಕೆ.ಅಡ್ವಾಣಿ ಕಚೇರಿಅಂಗಳದಲ್ಲೂ ಆ್ಯಂಥ್ರಾಕ್ಸ್ ಮಾರಿ?
ನವದೆಹಲಿ: ಅಮೇರಿಕಾದಲ್ಲಿ ಆ್ಯಂಥ್ರಾಕ್ಸ್ ಸೋಂಕಿನಿಂದಾಗಿ ಇಬ್ಬರು ಅಂಚೆ ನೌಕರರ ಸಾವು ಸಂಭವಿಸಿರುವ ವರದಿಗಳ ಬೆನ್ನಿಗೇ ಭಾರತದಲ್ಲೂ ಆ್ಯಂಥ್ರಾಕ್ಸ್ ಭೀತಿ ಹೆಚ್ಚಾಗಿದೆ. ಗೃಹ ಸಚಿವ ಲಾಲ್ಕೃಷ್ಣ ಅಡ್ವಾಣಿ ಅವರ ಕಚೇರಿಯನ್ನೂ ರೋಗಾಣು ಭೀತಿ ಕಾಡುತ್ತಿರುವುದು ವಿಶೇಷ.
ರಾಜಧಾನಿಯ ನಾರ್ತ್ಬ್ಲಾಕ್ನಲ್ಲಿರುವ ಗೃಹಸಚಿವರ ಕಚೇರಿಗೆ ಮಂಗಳವಾರ ತಲುಪಿದ ಬಿಳಿಪುಡಿಯಾಂದನ್ನು ಹೊಂದಿದ್ದ ಅಂಚೆ ಲಕೋಟೆಯಾಂದು, ಕಚೇರಿಯ ಸಿಬ್ಬಂದಿಯಲ್ಲಿ ಗಾಬರಿ ಮೂಡಿಸಿತು. ಈ ಲಕೋಟೆ ಅಡ್ವಾಣಿ ಅವರ ವಿಳಾಸವನ್ನು ಹೊಂದಿತ್ತು . ಬಿಳಿಪುಡಿಯನ್ನು ಆ್ಯಂಥ್ರಾಕ್ಸ್ ಎಂದು ಶಂಕಿಸಿರುವ ಕಚೇರಿಯ ಸಿಬ್ಬಂದಿ ಲಕೋಟೆಯನ್ನು ಒಡೆಯದೆ ಪರೀಕ್ಷೆಗಾಗಿ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ (ಎನ್ಐಸಿಡಿ) ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅಡ್ವಾಣಿ ಅವರ ಕಚೇರಿಗೆ ಬಂದಿರುವಂಥದ್ದೇ ಶಂಕಿತ ಆ್ಯಂಥ್ರಾಕ್ಸ್ ವೈರಾಣು ಪುಡಿಯ ಇನ್ನೊಂದು ಲಕೋಟೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯಾಬ್ಬರಿಗೂ ಬಂದಿದೆ ಎಂದು ವರದಿಗಳು ತಿಳಿಸಿವೆ.
(ಪಿಟಿಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications