ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಾಸ್ಸಿ- ಸ್ಟೆಫಿ ಮದುವೆ!ಮದುವೆ ಮಂಟಪದಿ ಕೂತ ಪ್ರಣಯದ ಪಕ್ಷಿಗಳು

By Staff
|
Google Oneindia Kannada News

ಲಾಸ್‌ ವೆಗಾಸ್‌ : ಟೆನ್ನಿಸ್‌ ಗೌರಿಶಂಕರ ಜೋಡಿಯ ಪ್ರೇಮಕ್ಕೆ ನಾಗರಿಕ ಸಮಾಜದ ಮದುವೆಯೆಂಬ ಶಾಸ್ತ್ರದ ಪರ್ಮಿಟ್ಟು ಸಿಕ್ಕಿದೆ. 31 ವರ್ಷ ವಯಸ್ಸಿನ ಆ್ಯಂಡ್ರೆ ಅಗಾಸ್ಸಿ ಹಾಗೂ ಅವರಿಗಿಂತ ಒಂದು ವರ್ಷ ಹಿರಿಯರಾದ ಸ್ಟೆಫಿ ಗ್ರಾಫ್‌ ಅವರ ಮದುವೆ ಸೋಮವಾರ(ಅ.22) ನಡೆಯಿತು ಎಂದು ಅಗಾಸ್ಸಿ ವಕ್ತಾರರು ಹೇಳಿದ್ದಾರೆ.

ಇದೊಂದು ಪುಟ್ಟದಾದ ಖಾಸಗಿ ಸಮಾರಂಭ. ಕೌಟುಂಬಿಕ ಕಾರ್ಯಕ್ರಮ ಎಂದರೂ ಸರಿಯೇ. ಲಾಸ್‌ ವೆಗಾಸ್‌ನ ನ್ಯಾಯಾಧೀಶರ ಹಾಜರಿಯಲ್ಲಿ ದೀರ್ಘ ಕಾಲದ ಜೋಡಿ ಅಗಾಸ್ಸಿ ಹಾಗೂ ಸ್ಟೆಫಿ ಮದುವೆಯಾದರು ಎಂದು ಆ್ಯಂಡ್ರೆ ಅಗಾಸ್ಸಿ ಚಾರಿಟಬಲ್‌ ಫೌಂಡೇಶನ್‌ನ ಜ್ಯೂಲಿ ರೊಸೆಟ್ಟಿ ತಿಳಿಸಿದ್ದಾರೆ.

ಮದುವೆಯಾಗಿರುವುದು ಖುಷಿ ತಂದಿದೆ, ನಾವು ಹೊಸ ಜೀವನ ಆರಂಭಿಸುತ್ತಿದ್ದೇವೆ ಎಂದು ನೂತನ ದಂಪತಿಗಳು ಹೇಳಿಕೆಯಾಂದರಲ್ಲಿ ತಿಳಿಸಿದ್ದಾರೆ. ಅಂದಹಾಗೆ, ಬರುವ ಡಿಸೆಂಬರ್‌ನಲ್ಲಿ ಸ್ಟೆಫಿ ತಾಯಿಯಾಗುವ ನಿರೀಕ್ಷೆಯಿದೆ.

(ಏಜೆನ್ಸೀಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X