ದಸರೆಯಲ್ಲೊಂದು ಸುತ್ತು
(ಇನ್ಫೋ ಇನ್‌ಸೈಟ್)
ಮೈಸೂರು :
ದಸರಾ ಉತ್ಸವದ ಮಾಸಿದ ವೈಭವದ ನಡುವೆ ಮೆರೆಯಲು ಇದೋ ಮತ್ತೆ ಬಂದಿದೆ ರಾಜ್‌ಕಮಲ್ ಸರ್ಕಸ್.
ಜಿನಿವಾದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರ ಎತ್ತಿಗ ಚೌಹಾನ್, ಸೈಕಲ್ಲಿನಲ್ಲೇ ಚಕಮಕ್ಕು ತೋರುವ ಸುಲೇಮಾನ್ ಕೊಲ್ಹಾಪುರೆ, ಸೈಕಲ್ ತುಳಿಯುತ್ತಲೇ ಉರಿಯುವ ಕಡ್ಡಿಗಳೊಡನೆ ತರಾವರಿ ಆಟ ತೋರುವ ಸುಮನ್ (ಪ್ಯಾರಿಸ್‌ನ ಅಂತರರಾಷ್ಟ್ರೀಯ ಸೈಕಲ್ ಸ್ಪರ್ಧೆಯಲ್ಲಿ ಈಕೆಗೆ ಚಿನ್ನದ ಪದಕ ಸಿಕ್ಕಿದೆ) ಸರ್ಕಸ್ಸಿನ ಪ್ರಮುಖ ಆಕರ್ಷಣೆಗಳು.
ಚೆನ್ನಾದ ಕೆಂಪು ಕೆನ್ನೆಯ ಹುಡುಗಿ ಆಕಾಶದ ಮೇಲೆ ನಡೆಯುತ್ತಿದ್ದಾಳೆ; ಕುಂತ ಭೂಮಿಯಿಂದ 40- 50 ಅಡಿ ಎತ್ತರದಲ್ಲಿ. ಹಾರುವುದಿಲ್ಲ. ಅವಕಾಶದ ಮೇಲೆಯೇ ಆಕೆಯ ನಡಿಗೆ. ಇದು ಜಾದೂ ಅಲ್ಲ. ಬರಿಗಣ್ಣಿಗೆ ಸಲೀಸಾಗಿ ಕಾಣದಂಥ ಚಿಕ್ಕಾತಿಚಿಕ್ಕ ದಾರದ ಮೇಲೆ ಆಕೆಯ ಪುಟ್ಟ ಪುಟ್ಟ ಹೆಜ್ಜೆ. ತಾಳ ತಪ್ಪಿದರೆ ಚೆಲ್ಲಾಪಿಲ್ಲಿಯಾದೀತು ಗೆಜ್ಜೆ.
ಆಫ್ರಿಕದ ಬೆಂಕಿ ಕುಣಿತ. ಅದರ ಬೆನ್ನಲ್ಲೇ ಗಿಳಿಗಳ ಸೈಕಲ್ ಸವಾರಿ. ಬಾಗಿಲು ಹಾಕಿದ ಪಂಜರದಲ್ಲಿ ಮೂವರ ಮೂಟಾರ್ ಸೈಕಲ್ ಸವಾರಿ. ಇದೇನೂ ಹೊಸದಲ್ಲ ಅನ್ನುವಿರೇ? ಕೊಂಚ ತಾಳಿ, ಬೈಕ್ ಸವಾರರೆಲ್ಲಾ ಹುಡುಗಿಯರು !
ಚಕಮಕಿಗಳೆಲ್ಲದರ ಮಜಾ ಕಣ್ಣಲ್ಲಿ ಮನೆ ಮಾಡಿರುವಾಗಲೇ ಜಂಬೋ ಕ್ರಿಕೆಟ್ಟು. ಒಂದು ಚೆಂಡು ಎಸೆದರೆ, ಬ್ಯಾಟ್ ಹಿಡಿದ ಮತ್ತೊಂದು ಆನೆ ಅದನ್ನು ಹೊಡೆಯುತ್ತದೆ.
ಅಂದಹಾಗೆ, ದಸರಾ ಉತ್ಸವಕ್ಕೆ ಹೋಗುವವರು ಖಂಡಿತಾ ಈ ಅಪರೂಪದ ಮಜಾ ನೋಡಿಬನ್ನಿ. ಪ್ರತಿದಿನ 3 ಪ್ರದರ್ಶನ- ಮಧ್ಯಾಹ್ನ 1, 4 ಗಂಟೆ ಹಾಗೂ ರಾತ್ರಿ 7 ಗಂಟೆಗೆ.
ದಸರಾ ಆನೆಗಳಿಗೆ ಕುಡಿಯಲು ಸಾಕಷ್ಟು ನೀರಿಲ್ಲ : ವಿಜಯ ದಶಮಿಯಂದು ಚಿನ್ನದ ಅಂಬಾರಿ ಹೊರುವ ಬಲರಾಮ, ಇವನ ಬಾಲಂಗೋಚಿ ಭರತ, ನಂತರದ ಅರ್ಜುನ ಎಲ್ಲರಿಗೂ ನೀರಡಿಕೆ ಆರುತ್ತಿಲ್ಲ. ಒಂದೆಡೆ ಸರ್ಕಸ್ಸಿನಲ್ಲಿ ಕ್ರಿಕೆಟ್ ತೋರಿ ತೋರಿ ಆನೆಗಳು ಉಸ್ಸಪ್ಪಾ ಅನ್ನುತ್ತಿದ್ದರೆ, ಈ ಕರಿವದನರು ಪುಟ್ಟ ನಲ್ಲಿಯಿಂದ ಸರಬರಾಜಾಗುವ ನೀರಲ್ಲಿ ಸ್ನಾನ ಮಾಡಬೇಕು !
ದಸರಾ ಅಂದರೆ ಆನೆಗಳಿಗೆ ಮಜವೋ ಮಜ. ಪಂಪ್ ಹೊರಹಾಕುವ ನೀರಿನಲ್ಲಿ ಗಜಗಜಾಯಿಸುವ ಮದಗಜಗಳೆಷ್ಟು ಚೆನ್ನ. ಈ ಬಾರಿ ದಸರೆಗೆ ಕತ್ತಲು ಕವಿದಿದೆ. ಮಿರಿ ಮಿರಿ ದೀಪಗಳ ‘ಕರಿ’ಗಳು ಕಣ್ಣತುಂಬಿಸಿಕೊಳ್ಳುತ್ತಿರುವಾಗಲೇ ಇದ್ದಕ್ಕಿದ್ದಂತೆ ಕರೆಂಟು ಕೈಕೊಡುತ್ತದೆ. ನೀರು ಸರಾಬರ ಬಂದರೇನೆ ಆನೆಗಳಿಗೆ ಸಂಪೂರ್ಣ ಸ್ನಾನ. ಮನದಣಿಯೆ ನೀರು. ಆದರೆ ಕರೆಂಟು ಕೈಕೊಟ್ಟರೆ ಅರಮನೆ ಆವರಣದ ಜನರೇಟರ್ ಈಗ ಸದ್ದು ಮಾಡೋದೇ ಇಲ್ಲ. ಅದು ಕೆಟ್ಟು 15 ದಿನಗಳಾಗಿವೆ. ಅಧಿಕಾರಿಗಳ ಪ್ರಕಾರ ಸರಿ ಮಾಡಿಸಲು ಕಾಸಿಲ್ಲ.
ಇದೆಂಥಾ ದಸರಾ, ಆನೆಗಳೂ ದೂರು ಕೊಡುವಂತಾಯಿತೆ ಎಂದು ದೂರದೂರಿಂದ ಬಂದ ಜನ ದೂರುತ್ತಿರುವುದು ಕರ್ನಾಟಕದ ಸಂಸ್ಕೃತಿಗೇ ಕಪ್ಪು ಚುಕ್ಕೆ. ಆನೆಗಳಿಗೆ ದಾಹ ತಣಿಯೆ ನೀರು ಬೇಕು ಅನ್ನೋದಷ್ಟೇ ಗೊತ್ತೇ ಹೊರತು ಜನರೇಟರ್ ಸರಿಪಡಿಸಲು ಕಾಸಿಲ್ಲ ಅನ್ನುವುದು ಗೊತ್ತಾಗುವುದಿಲ್ಲವಲ್ಲ. ಗೊತ್ತಿದ್ದರೆ ಚೆನ್ನಾಗಿತ್ತು ಅಲ್ಲವೇ?
ಮೈಸೂರು ದಸರಾ - 2001
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications