ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್‌ ನಡುವೆ ಶಾಂತಿ ಮೊಳೆಯುವ ಕುರಿತು ಚೀನಾ ಆಶಯ

By Super
|
Google Oneindia Kannada News

ಬೀಜಿಂಗ್‌: ನೆರೆಯ ರಾಷ್ಟ್ರಗಳ ವಿದ್ಯಮಾನದ ಬಗ್ಗೆ ಅಷ್ಟಾಗಿ ಬಹಿರಂಗ ಪ್ರತಿಕ್ರಿಯೆ ವ್ಯಕ್ತಪಡಿಸದ ಏಷ್ಯಾದ ದೊಡ್ಡಣ್ಣ ಚೀನಾ, ಏಷ್ಯಾ ಉಪಖಂಡದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಭಾರತ ಹಾಗೂ ಪಾಕಿಸ್ತಾನ ಸಹಕಾರ ಮನೋಭಾವದಿಂದ ವರ್ತಿಸುತ್ತದೆನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ದಕ್ಷಿಣ ಏಷ್ಯಾದಲ್ಲಿ ನೆರೆಯ ದೇಶವಾಗಿದ್ದುಕೊಂಡು, ಪಾಕಿಸ್ತಾನ ಹಾಗೂ ಭಾರತ ಸರ್ಕಾರಗಳು ಸ್ನೇಹಭಾವದಿಂದ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತವೆಂದು ಚೀನಾ ಸರ್ಕಾರ ವಿಶ್ವಾಸ ವ್ಯಕ್ತಪಡಿಸುತ್ತದೆಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಸನ್‌ ಯುಕ್ಸಿ ಪಿಟಿಐಗೆ ತಿಳಿಸಿದ್ದಾರೆ.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಕಾಲಿನ್‌ ಪೊವೆಲ್‌ ಇತ್ತೀಚಿನ ಕೈಗೊಂಡ ಭಾರತ ಹಾಗೂ ಪಾಕ್‌ ಭೇಟಿಯನ್ನು ಚೀನಾ ಎಚ್ಚರಿಕೆಯಿಂದ ಗಮನಿಸಿದ್ದು , ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗುತ್ತದೆಂದು ಭಾವಿಸಿದೆ. ಪೊವೆಲ್‌ರ ಭೇಟಿ ದಕ್ಷಿಣ ಏಷ್ಯಾ ಅಭಿವೃದ್ಧಿಗೂ ಪೂರಕವಾಗುತ್ತದೆಂದು ಚೀನಾ ಭಾವಿಸಿದೆ ಎಂದು ಯುಕ್ಸಿ ಹೇಳಿದ್ದಾರೆ.

ಸೆಪ್ಟಂಬರ್‌ 11 ರಂದು ಅಮೆರಿಕಾ ಮೇಲೆ ನಡೆದ ಭಯೋತ್ಪಾದಕರ ದಾಳಿಯಿಂದ ದಕ್ಷಿಣ ಏಷ್ಯಾದ ಮೇಲೆ ಪರಿಣಾಮ ಬೀರಿದೆ ಹಾಗೂ ಈ ದಾಳಿಯಿಂದಾಗಿ ಭಾರತ- ಪಾಕ್‌ಗಳ ನಡುವೆ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸಿದ ಯುಕ್ಸಿ ಅಭಿಪ್ರಾಯಪಟ್ಟರು.(ಪಿಟಿಐ)

English summary
China hopes India and Pakistan would maintain friendly contact so as to preserve regional peace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X