ಭೂದಾಳಿ ಆರಂಭ, ನ್ಯಾಯ ಸಿಗುವ ತನಕ ಹೋರಾಟ - ಬುಷ್
ಇಸ್ಲಾಮಾಬಾದ್ : ಅಮೆರಿಕದ ಯೋಧರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೀಡಾಗಿ, ಇಬ್ಬರು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಪಾಕಿಸ್ತಾನದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ತಾಂತ್ರಿಕ ದೋಷದಿಂದ ಈ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು ಎಂದು ಅಮೆರಿಕಾ ಹೇಳಿದ್ದರೆ, ತಾನೇ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದಾಗಿ ತಾಲಿಬಾನ್ ಘೋಷಿಸಿದೆ. ತಾಲಿಬಾನ್‌ನ ಈ ಹೇಳಿಕೆಯನ್ನು ತಳ್ಳಿಹಾಕಿರುವ ಪೆಂಟಗಾನ್, ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿಯೂ ಹೇಳಿದೆ.
ಈ ಮಧ್ಯೆ ಅಮೆರಿಕ ಯೋಧರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥ ಆಗದು ಎಂದು ಶಾಂಘೖನಲ್ಲಿ ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಘೋಷಿಸಿದ್ದಾರೆ. ಭಯೋತ್ಪಾದನೆಯ ಮೂಲೋತ್ಪಾಟನೆ ಆಗುವವರೆಗೆ ಹಾಗೂ ನಮಗೆ ನ್ಯಾಯ ಸಿಗುವ ತನಕ ಸಮರ ಕಾರ್ಯಾಚರಣೆ ನಿಲ್ಲದು ಎಂದೂ ಅವರು ಹೇಳಿದ್ದಾರೆ.
- ಅಮೆರಿಕ ವಿಶೇಷ ಭೂಸೇನಾ ಪಡೆ, ಆಫ್ಘನ್ ನೆಲದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ ಹಾಗೂ ವಿಶೇಷ ತರಬೇತಿ ಪಡೆದ ಈ ಪಡೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ವರದಿಗಳು ಹೇಳಿವೆ.
- ತಾಲಿಬಾನ್ ತಾನೂ ಕೂಡ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮಿತ್ರಪಡೆಗಳಿಗೆ ಹಿನ್ನಡೆ ಉಂಟಾಗಿದೆ ಎಂದಿದೆ. ಈ ಹೇಳಿಕೆಯನ್ನು ಅಮೆರಿಕಾ ತಳ್ಳಿಹಾಕಿದೆ.
- ಶನಿವಾರವೂ ಅಮೆರಿಕ ಯುದ್ಧ ವಿಮಾನಗಳು ಆಫ್ಘಾನಿಸ್ತಾನದ ಆಲ್‌ಖೈದಾ ನೆಲೆಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿವೆ.
- ಅಮೆರಿಕದ ಬಾಂಬ್ ದಾಳಿಯಿಂದ 600 ನಾಗರಿಕರು ಸಾವನ್ನಪ್ಪಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
- ಈ ಮಧ್ಯೆ ಯುದ್ಧಾನಂತರ ಅಸ್ತಿತ್ವಕ್ಕೆ ಬರುವ ವಿಸ್ತಾರ ತಳಹದಿಯ ಸರಕಾರಕ್ಕೆ 500 ಕೋಟಿ ರುಪಾಯಿ ಸಾಲ ನೀಡುವುದಾಗಿ ಭಾರತ ಪ್ರಕಟಿಸಿದೆ. ಆಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕೆ ನೆರವು ನೀಡುವುದು ಭಾರತದ ಉದ್ದೇಶವಾಗಿದೆ.
- ಬಾಂಬ್ ದಾಳಿಯಿಂದ ನಲುಗುತ್ತಿದ್ದರೂ ಕೂಡ ಆಫ್ಘಾನಿಸ್ತಾನ ಲಾಡೆನ್‌ನನ್ನು ಹಸ್ತಾಂತರಿಸಲು ಸಿದ್ಧವಿಲ್ಲ ಎಂದು ಪಾಕಿಸ್ತಾನದ ಆಫ್ಘನ್ ರಾಯಭಾರಿ ಅಬ್ದುಲ್ ಸಲಾಂ ಜಯೀಫ್ ಪುನರುಚ್ಚರಿಸಿದ್ದಾರೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications