ಕಳೆದ 3 ತಿಂಗಳಲ್ಲಿ ಕಂಪ್ಯೂಟರ್ ಮಾರಾಟ ಸಖತ್ತಾಗಿದೆ- ಇಂಟೆಲ್
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಸದ್ದಡುಗುತ್ತಿದೆ ಎಂಬ ಸೊಲ್ಲುಗಳ ನಡುವೆಯೇ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯೂಟರ್ ಭರಾಟೆ ಜೋರೋ ಜೋರಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಂಪ್ಯೂಟರ್‌ಗಳು ಮಾರುಕಟ್ಟೆ ಬಜಾರುಗಳ ತುಂಬಿವೆ ಎನ್ನುತ್ತಾರೆ ಇಂಟೆಲ್‌ನ ಹಿರಿಯ ಅಧಿಕಾರಿ.
ಈ ಹಿಂದಿನ ಯಾವುದೇ ತ್ರೆೃಮಾಸಿಕಕ್ಕಿಂತ ಕಳೆದ ಮೂರು ತಿಂಗಳಲ್ಲಿ ಕಡಿಮೆಯೆಂದರೂ 10 ಲಕ್ಷ ಹೆಚ್ಚು ಕಂಪ್ಯೂಟರ್‌ಗಳು ಭಾರತೀಯ ಬಜಾರಿನ ದುಕಾನುಗಳ ತುಂಬಿವೆ ಎಂದು ಚಿಪ್ ಉತ್ಪಾದಕ ಕಂಪನಿ ಇಂಟೆಲ್‌ನ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಅವ್ತಾರ್ ಸೈನಿ ಶುಕ್ರವಾರ ಹೇಳಿದರು.
ಭಾರತದಲ್ಲಿ ಕಂಪನಿ ಆಯೋಜಿಸಿರುವ ಪ್ರಥಮ ಅಭಿವೃದ್ಧಿ ಫೋರಂನಲ್ಲಿ ಸೈನಿ ಮಾತಾಡುತ್ತಿದ್ದರು. 500ಕ್ಕೂ ಹೆಚ್ಚು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಭಾಗವಹಿಸಿದ್ದ ಫೋರಂನಲ್ಲಿ ಸೈನಿ ಐಟಿ ಇನ್ನೂ ಜೀವಂತಿಕೆಯಾಗಿದೆ ಎಂಬುದನ್ನು ಪುಂಖಾನುಪುಂಖ ಬಿಚ್ಚಿಡುತ್ತಿದ್ದರು. ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಶುರುವಾದ ಇಂಟೆಲ್ ಅಭಿವೃದ್ಧಿ ಕೇಂದ್ರದಲ್ಲಿ ಪ್ರಸ್ತುತ 600 ಸಿಬ್ಬಂದಿಯಿದ್ದು, ಇನ್ನೂ 100 ಸಾಫ್ಟ್‌ವೇರ್ ಎಂಜಿನಿಯರುಗಳನ್ನು ನೇಮಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ ಎಂದರು.
ತದ ನಂತರ ಮಾತಾಡಿದ ಇಂಟೆಲ್ ಕಾರ್ಪೊರೇಷನ್‌ನ ಉಪಾಧ್ಯಕ್ಷ ಡ್ಯಾನ್ ರಸೆಲ್, ಜನರಿಗೆ ಏನು ಬೇಕೋ ಅದನ್ನು ಕೊಡಬೇಕು. ಮಾರುಕಟ್ಟೆಯ ಪ್ರಸಕ್ತ ಗ್ರಾಹಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಉತ್ಪನ್ನಗಳನ್ನು ಕೊಟ್ಟರೆ ಯಾವುದೇ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಕಳೆದ ತ್ರೆೃಮಾಸಿಕದಲ್ಲಿ ಇಂಟೆಲ್ ಯೂರೋಪಿನಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆಸಿದೆ. ಆದರೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಕೊಂಚ ಇಳಿಮುಖವಾಗಿದೆ ಎನ್ನುವುದು ನಿಜ. ಪೆಂಟಿಯಂ 4 ಹಾಗೂ ಇಂಟಾನಿಯಮ್ ಪ್ರೊಸೆಸಸರ್‌ಗಳು ಗ್ರಾಹಕರಿಗೆ ಮೆಚ್ಚಾಗಲಿದ್ದು, ಮುಂದಿನ 6 ತಿಂಗಳಲ್ಲಿ ನಾವು ಅಂದುಕೊಂಡಿರುವುದನ್ನು ಸಾಧಿಸಿಯೇ ತೀರುತ್ತೇವೆ ಎಂದು ಹೇಳಿದರು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications