Get Updates
Get notified of breaking news, exclusive insights, and must-see stories!

ಬಸವಳಿಯುತ್ತಿರುವ ತಾಲಿಬಾನ್‌, ಕದನವಿರಾಮ ಪ್ರಸ್ತಾವನೆಗೆ ಚಾಲನೆ

ಇಸ್ಲಮಾಬಾದ್‌: ಅಮೆರಿಕ ಹಾಗೂ ತಾಲಿಬಾನ್‌ ಪಡೆಗಳ ನಡುವಣ ಭೂ ಕಾಳಗದ ಕ್ಷಣಗಳು ಒಂದೆಡೆ ಸನ್ನಿಹಿತವಾಗುತ್ತಿದ್ದರೆ, ಇನ್ನೊಂದೆಡೆ ಕದನ ವಿರಾಮದ ಚಟುವಟಿಕೆಗಳೂ ಚುರುಕಾಗುತ್ತಿವೆ. ಪಾಕಿಸ್ತಾನದಲ್ಲಿನ ತಾಲಿಬಾನ್‌ ರಾಯಭಾರಿ ಅಬ್ದುಲ್‌ ಸಲಂ ಝಹೀಫ್‌, ತಾವು ಕದನ ವಿರಾಮ ನೀತಿಯಾಂದನ್ನು ತಾಲಿಬಾನ್‌ ನಾಯಕರಿಂದ ತಂದಿರುವುದಾಗಿ ಪ್ರಕಟಿಸಿದ್ದು ಶುಕ್ರವಾರದ ವಿಶೇಷ.

ಕಾಂದಹಾರ್‌ನಲ್ಲಿ ಇತ್ತೀಚೆಗೆ ತಾಲಿಬಾನ್‌ ಮುಖ್ಯಸ ಮುಲ್ಲಾ ಮೊಹಮದ್‌ ಒಮರ್‌ನನ್ನು ಭೇಟಿಯಾದುದಾಗಿ ತಿಳಿಸಿದ ಅವರು, ಕದನ ವಿರಾಮ ನೀತಿ ಕುರಿತಾಗಿ ಪಾಕಿಸ್ತಾನಿ ನಾಯಕರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಕದನ ವಿರಾಮದ ಬಗ್ಗೆ ತಮ್ಮ ನಾಯಕರೊಂದಿಗೆ ಚರ್ಚಿಸಲು ಕಾಂದಹಾರ್‌ಗೆ ತೆರಳಿದ್ದಾಗಿಯೂ ಅವರು ಹೇಳಿದರು. ಪಾಕ್‌ ನಾಯಕರೊಂದಿಗೆ ಚರ್ಚಿಸಿದ ಬಳಿಕ ಹೆಚ್ಚಿನ ವಿಷಯಗಳನ್ನು ಸುದ್ದಿಗಾರರಿಗೆ ತಿಳಿಸುವುದಾಗಿ ಅವರು ಹೇಳಿದರು.

ಅಮೆರಿಕ ಆಪ್ಘಾನಿಸ್ತಾನದ ಮೇಲೆ ನಡೆಸಿರುವ ಬಾಂಬ್‌ ದಾಳಿಯಲ್ಲಿ ಕನಿಷ್ಠ 500 ನಾಗರಿಕರು ಮೃತರಾಗಿದ್ದಾರೆ ಎಂದು ಹೇಳಿದ ಝಹೀಫ್‌, ತಾಲಿಬಾನ್‌ ಉನ್ನತ ನಾಯಕರ ನಡುವೆ ಒಡಕುಂಟಾಗಿದೆ ಎನ್ನುವ ಸುದ್ದಿಗಳನ್ನು ನಿರಾಕರಿಸಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+