Get Updates
Get notified of breaking news, exclusive insights, and must-see stories!

ಕೆನರಾಬ್ಯಾಂಕ್‌: 6 ತಿಂಗಳಲ್ಲಿ 90,500 ಕೋಟಿ ರು. ವಹಿವಾಟು

ಮಂಗಳೂರು : ಪ್ರಸಕ್ತ ವಿತ್ತ ವರ್ಷದ ಸೆಪ್ಟೆಂಬರ್‌ 30ರವರೆಗಿನ ಅವಧಿಯಲ್ಲಿ ಕೆನರಾ ಬ್ಯಾಂಕ್‌ 90, 500 ಕೋಟಿ ರುಪಾಯಿ ವಹಿವಾಟು ನಡೆಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಆರ್‌.ವಿ.ಶಾಸ್ತ್ರಿ ತಿಳಿಸಿದ್ದಾರೆ.

ಈ ಒಟ್ಟಾರೆ ವಹಿವಾಟಿನಲ್ಲಿ 61,900 ಕೋಟಿ ರುಪಾಯಿ ಠೇವಣಿ ಹಣ ಸಂಗ್ರಹವಾಗಿದೆ. ಮುಂಗಡ ಹಣದ ವಹಿವಾಟಿನದು 28,600 ಕೋಟಿ ರುಪಾಯಿ. ಗ್ರಾಹಕರನ್ನು ತನ್ನತ್ತ ಸೆಳೆಯಲು ವಿವಿಧ ಹೊಸ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ ಎಂದು ಶಾಸ್ತ್ರಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

ಮುಂದಿನ ವರ್ಷ ಮಾರ್ಚ್‌ ಹೊತ್ತಿಗೆ ಬ್ಯಾಂಕಿನ 1035 ದೇಶೀ ಶಾಖೆಗಳನ್ನು ಗಣಕೀಕೃತಗೊಳಿಸಲಾಗುವುದು. ಅದೇ ವರ್ಷ ಜೂನ್‌ ಹೊತ್ತಿಗೆ ಮುಂಬಯಿ, ದೆಹಲಿ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು ಹಾಗೂ ಮಂಗಳೂರು ಬ್ಯಾಂಕುಗಳನ್ನು ಕಂಪ್ಯೂಟರ್‌ನ ಒಂದೇ ಜಾಲಕ್ಕೆ ಸಂಪರ್ಕಿಸಲಾಗುವುದು. ವಿಮಾ ಕ್ಷೇತ್ರಕ್ಕೂ ಪ್ರವೇಶಿಸುವ ಬಗ್ಗೆ ಬ್ಯಾಂಕ್‌ ಪರಿಶೀಲಿಸುತ್ತಿದೆ. ಪ್ರಸ್ತುತ ಸಾಗರದಾಚೆ ಲಂಡನ್ನಿನಲ್ಲಿ ಮಾತ್ರ ಬ್ಯಾಂಕಿನ ಒಂದೇ ಒಂದು ಶಾಖೆಯಿದ್ದು, ಮಾಸ್ಕೋದಲ್ಲಿ ಇನ್ನೊಂದು ಶಾಖೆ ತೆರೆಯುತ್ತೇವೆ ಎಂದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+