ಅಮೆರಿಕೆಗೆ ಆ್ಯಂಥ್ರಾಕ್ಸ್ ದಾಳಿಯ ಬೆನ್ನಲ್ಲೇ ಸೈಬರ್ ಯುದ್ಧದ ಭಯ
ವಾಷಿಂಗ್ಟನ್ : ಆ್ಯಂಥ್ರಾಕ್ಸ್ ದಾಳಿ ಮಟ್ಟ ಹಾಕಲು ಶತಾಯಗತಾಯ ಯತ್ನಿಸುತ್ತಿರುವ ಅಮೆರಿಕೆಗೆ ಅದರ ಬೆನ್ನಲ್ಲೇ ಮತ್ತೊಂದು ಆಪತ್ತು ಧುತ್ತೆಂದು ಎರಗಿದರೆ ಎಂಬ ಭಯ ಅಟಕಾಯಿಸಿಕೊಳ್ಳುತ್ತಿದೆ. ಜೈವಿಕ ದಾಳಿಯ ನಂತರ ಉಗ್ರರು ಕುಂತಲ್ಲೇ ಅಮೆರಿಕ ವ್ಯವಸ್ಥೆಯ ಕೀಲಿಗಳಂತಿರುವ ಕಂಪ್ಯೂಟರ್‌ಗಳಿಗೆ ವೈರಾಸುರರನ್ನು ಬಿಟ್ಟರೆ?!
ಎಫ್‌ಬಿಐನ ಸೈಬರ್ ಅಪರಾಧಿ ವಿಭಾಗದ ಪರಿಣತ ಮೈಕೆಲ್ ವಾಟಿಸ್ ಪ್ರಕಾರ- ‘ಅಮೆರಿಕಾ ಇದೀಗ ಮೈಯೆಲ್ಲಾ ಕಣ್ಣಾಗಿರಬೇಕು. ಕಂಪ್ಯೂಟರ್ ಜಾಲದ ಮೇಲೆ ಸೈಬರ್ ದಾಳಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ನಿಮಗೆ ಗೊತ್ತೋ ಇಲ್ಲವೋ, ಭಾರತ- ಪಾಕಿಸ್ತಾನ, ಇಸ್ರೇಲ್- ಪ್ಯಾಲೆಸ್ಟೀನ್ ನಡುವಣ ರಾಜಕೀಯ ತಿಕ್ಕಾಟಗಳೂ ಸೈಬರ್ ಸ್ಪೇಸ್ ಮಟ್ಟದಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಉಗ್ರರ ಬಗ್ಗೆ ಅಯ್ಯೋ ಪಾಪ ಎನ್ನುವವರು, ಅಮೆರಿಕಾ ಮಿಲಿಟರಿ ಪಡೆಗಳಿಂದ ಬೇಸತ್ತಿರುವವರೂ ಸೈಬರ್ ಯುದ್ಧ ನಡೆಸುವ ಸಾಧ್ಯತೆ ಇಲ್ಲದಿಲ್ಲ’.
ಅಂದಹಾಗೆ, ಈಗಾಗಲೇ ಕೆಲವು ಕಂಪ್ಯೂಟರ್ ಜಾಲಗಳು ವೈರಸ್ ದಾಳಿಯಿಂದ ಹಾಳಾಗಿ, ಆರ್ಥಿಕವಾಗಿ ಅಮೆರಿಕಕ್ಕೆ ಸುಮಾರಾದ ಪೆಟ್ಟು ಬಿದ್ದಿದೆ. ಆದರೆ ಇದು ಎಚ್ಚರಿಕೆಯ ಗಂಟೆಯಿದ್ದಂತೆ. ಮೌಲಭೂತ ಸೌಕರ್ಯಗಳ ನಿಯಂತ್ರಣ, ವಿತ್ತ ವ್ಯವಸ್ಥೆ, ಜನಾವಶ್ಯಕ ಸಂಸ್ಥೆಗಳು, ಸೇನಾ ಜಾಲಗಳಂತಹ ಆಯಕಟ್ಟಿನ ಕಂಪ್ಯೂಟರ್ ಜಾಲಗಳಲ್ಲೇ ಹಾಳುಗೆಡವಿದರೆ? ಆ್ಯಂಥ್ರಾಕ್ಸ್ ರಾಕ್ಷಸನ ಆರ್ಭಟ ಇನ್ನೂ ಹಸಿಯಾಗಿರುವಾಗಲೇ ಅಮೆರಿಕಾಗೆ ಮತ್ತೊಂದು ಭೀತಿ ಕಾಡುತ್ತಿರುವುದಂತೂ ಸ್ಪಷ್ಟ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications