ಜಂಬೂಸವಾರಿ ನಂತರ, ಅ.29ರಂದು ಕೃಷ್ಣ ಸಂಪುಟ ಪುನರ್ರಚನೆ?
ಬೆಂಗಳೂರು : ದೀರ್ಘಕಾಲದಿಂದ ನೆನಗುದಿಗೆ ಬಿದ್ದಿರುವ ಸಂಪುಟ ಪುನರ್ರಚನೆ ಕಸರತ್ತಿಗೆ ಕೊನೆಗಾಣಿಸಲು ಉದ್ದೇಶಿಸಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಅಕ್ಟೋಬರ್ 29 ರ ಸೋಮವಾರ ಸಂಪುಟ ಪುನರ್ರಚಿಸುವ ಸಂಭವವಿದೆ ಎಂದು ವಿಧಾನಸೌಧ ಮೊಗಸಾಲೆಯ ವರದಿಗಳು ತಿಳಿಸಿವೆ.
ಅಕ್ಟೋಬರ್ 22 ರಂದೇ ಸಂಪುಟ ಪುನರ್ರಚನೆೆ ನಡೆಯಬೇಕಿದ್ದರೂ, ವರಿಷ್ಠರೊಂದಿಗಿನ ಮಾತುಕತೆ ಪೂರ್ಣವಾಗಿಲ್ಲದ ಕಾರಣ ಸಂಪುಟ ಪುನರ್ರಚನೆ ವಾರಕಾಲ ಮುಂದೆಹೋಗಿದೆ. ವಿಜಯದಶಮಿ ನಂತರ ದೆಹಲಿಗೆ ತೆರಳುವ ಕೃಷ್ಣ , ಸಂಪುಟ ಪುನರ್ರಚನೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರೊಂದಿಗೆ ಚರ್ಚಿಸುವರು.
ಮಾಜಿ ಸಚಿವ ಪಾಟೀಲ್ ಸಾಸನೂರ್ ಈ ಬಾರಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಬಿಜಾಪುರ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲ ದಿರುವುದು ಅವರಿಗೆ ವರವಾಗುವ ನಿರೀಕ್ಷೆಯಿದೆ. ಉಳಿದಂತೆ ಹಾವೇರಿಯಿಂದ ಕೋಳಿವಾಡ್, ಬೀದರ್ನಿಂದ ಬಸವರಾಜ ಪಾಟೀಲ್, ಉಡುಪಿಯಿಂದ ವಸಂತ ಸಾಲಿಯಾನ ಸಂಪುಟ ಸೇರುವ ಸಾಧ್ಯತೆಯಿದೆ. ಪರಿಶಿಷ್ಟ ವರ್ಗದಿಂದ ಕರಿಯಣ್ಣ ಹಾಗೂ ಆಂಜನಮೂರ್ತಿ ಸಚಿವರಾದರೆ ಆಶ್ಚರ್ಯವಿಲ್ಲ .
ಗೃಹಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರ ಖಾತೆ ಬದಲಾಗುವ ಸಾಧ್ಯತೆಯೂ ಇದೆ. ಗೃಹ ಖಾತೆ ಬಗೆಗೆ ಬೇಸತ್ತಿರುವ ಖರ್ಗೆ ಕಂದಾಯ ಖಾತೆ ಅಪೇಕ್ಷಿಸಿದ್ದಾರೆಂದು ಸುದ್ದಿ .
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications