Get Updates
Get notified of breaking news, exclusive insights, and must-see stories!

ಅಮೆರಿಕ ಸೋಲುತ್ತದೆ, ಸಹನೆ ಕಳೆದುಕೊಳ್ಳಬೇಡಿ- ಒಮರ್‌

ಇಸ್ಲಮಾಬಾದ್‌ : ಅಕ್ಟೋಬರ್‌ 13 ರ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿರುವ ತಾಲಿಬಾನ್‌ನ ಮುಖ್ಯಸ್ಥ ಮುಲ್ಲಾ ಮೊಹ್ಮದ್‌ ಒಮರ್‌, ಸಹನೆಯಿಂದಿದ್ದು ಅಮೆರಿಕ ಸೋಲುವುದನ್ನು ನಿರೀಕ್ಷಿಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾನೆ. ಒಮರ್‌ನ ಈ ಹೇಳಿಕೆ ತಾಲಿಬಾನ್‌ನ ನಿಸ್ತಂತು ಆಂತರಿಕ ಜಾಲದಲ್ಲಿ ಪ್ರಸಾರವಾಗಿದೆ ಎಂದು ಎಐಪಿ ತಿಳಿಸಿದೆ.

ಪ್ರತಿಯಾಬ್ಬರೂ ಒಂದಲ್ಲಾ ದಿನ ಸಾಯುತ್ತಾರೆ. ನಾವು ಸಾವಿಗೆ ಅಂಜುವುದಿಲ್ಲ ಹಾಗೂ ಮುಸ್ಲಿಂ ಆಗಿಯೇ ಸಾಯಲು ಬಯಸುತ್ತೇವೆ ಎಂದು ಹೇಳುವ ಮೂಲಕ ಒಮರ್‌ ತನ್ನ ಬೆಂಬಲಿಗರನ್ನು ಉತ್ತೇಜಿಸಿದ್ದಾನೆ.

ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ ನಿಮ್ಮನ್ನು ಒತ್ತಾಯಿಸುತ್ತೇನೆ. ನಾವು ಈಗಾಗಲೇ ರಷ್ಯಾ ವಿರುದ್ಧ ಹೋರಾಡಿದ್ದೇವೆ. ಇದು ಇನ್ನೊಂದು ಜಿಹಾದ್‌. ಇದು ನಮಗೊಂದು ಪರೀಕ್ಷೆ . ಜನತೆ ನೋವಿನಲ್ಲಿದ್ದಾರೆ, ಆದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ. ನಮ್ಮ ಶತ್ರುಗಳು ಯಾವುದೇ ಮುಸ್ಲಿಂನನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಒಮರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಕಳೆದ ಅಕ್ಟೋಬರ್‌ 13 ರಂದು, ಲ್ಯಾಡೆನ್‌ ಒಪ್ಪಿಸಲು ಅಮೆರಿಕ ನೀಡಿದ ಎರಡನೇ ಅವಕಾಶವನ್ನು ತಿರಸ್ಕರಿಸಿದ್ದು ಒಮರ್‌ನ ಕೊನೆಯ ಹೇಳಿಕೆಯಾಗಿತ್ತು .

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+