Get Updates
Get notified of breaking news, exclusive insights, and must-see stories!

ದಸರೆಯನ್ನು ಸರಳೀಕರಣಗೊಳಿಸುವುದು ತರವಲ್ಲ :ಬಿ. ಸರೋಜಾದೇವಿ

ಮೈಸೂರು : ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕನ್ನಡಿಗರ ನಾಡಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ, ಆದರೆ, ವಿಶ್ವವಿಖ್ಯಾತ ದಸರೆಯನ್ನು ಸರಳೀಕರಣ ಮಾಡುವುದು ತರಯಲ್ಲ ಎಂದು ಖ್ಯಾತ ಚಿತ್ರನಟಿ ಹಾಗೂ ರಾಜ್ಯ ಸೆನ್ಸಾರ್‌ ಮಂಡಳಿ ಅಧ್ಯಕ್ಷೆ ಸರೋಜಾದೇವಿ ಶ್ರೀಹರ್ಷ ಹೇಳಿದ್ದಾರೆ.

ಬುಧವಾರ ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ಮೈಸೂರು ಒಡೆಯರ ಅಧಿದೇವತೆ ಬೆಟ್ಟದತಾಯಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ 10 ದಿನಗಳ ದಸರಾ ಮಹೋತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ಅವರು, ದುಷ್ಟ ಶಿಕ್ಷಣೆ - ಶಿಷ್ಠ ರಕ್ಷಣೆಯ ಸಂಕೇತವಾದ ದಸರೆಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಅವರು ದಸರೆಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂಬ ಸರೋಜಾದೇವಿ ಅವರ ಸಲಹೆಯನ್ನು ಸರಕಾರ ಪರಿಗಣಿಸುತ್ತದೆ ಎಂದು ಭರವಸೆ ನೀಡಿದರು.

ಜಂಬೂಸವಾರಿ : 26ರಂದು ವಿಶ್ವವಿಖ್ಯಾತ ಜಂಬೂಸವಾರಿಯನ್ನು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಲಿದ್ದಾರೆ ಎಂದ ಅವರು, ಮೈಸೂರನ್ನು ಅತ್ಯುತ್ತಮ ಪ್ರವಾಸಿ ತಾಣವಾಗಿ ಪರಿವರ್ತಿಸಲು 25 ಕೋಟಿ ರುಪಾಯಿಗಳ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ಸಚಿವೆ ಸುಮಾ ವಂಸತ್‌, ಮಂಜುನಾಥ ಪ್ರಸಾದ್‌, ಗುರುಸ್ವಾಮಿ, ಭಾರತೀಶಂಕರ್‌ ಮೊದಲಾದವರು ಪಾಲ್ಗೊಂಡಿದ್ದರು.

(ಇನ್‌ಫೋ ವಾರ್ತೆ)

ಮೈಸೂರು ದಸರಾ - 2001
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+