‘ತುಂಬಿಬರಲಿರುವ ನಾಳೆ’ ಬೆಂಗಳೂರು ಐಟಿ.ಕಾಂನಧ್ಯೇಯ ವಾಕ್ಯ
ನವದೆಹಲಿ : "Theres more to the future" ‘ತುಂಬಿಬರಲಿರುವ ನಾಳೆಗಳು’ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬೆಂಗಳೂರು ಐಟಿ.ಕಾಂ ನ ಧ್ಯೇಯ ವಾಕ್ಯವಿದು. ಭಾರತದ ಸಿಲಿಕಾನ್ ಕಣಿವೆ ಬೆಂಗಳೂರಿನಲ್ಲಿ ನಡೆಯಲಿರುವ ಮಾಹಿತಿ ತಂತ್ರಜ್ಞಾನ ಮೇಳ, ಈ ಧೈಯ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಐ.ಟಿ. ಮತ್ತು ಟೆಲಿಕಾಂ ಭವಿಷ್ಯದ ಮೇಲೆ ಬೆಳಕು ಚೆಲ್ಲಲಿದೆ.
ಈ ಬೃಹತ್ ಸಮಾವೇಶದಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ. ಈ ಪೈಕಿ
- ನವೆಂಬರ್ 1ರ ಸಂಜೆ ನಡೆಯಲಿರುವ ಸಿಇಓ (ಚೀಫ್ ಎಕ್ಸಿಕ್ಯೂಟಿವ್ ಆಫೀಸರ್) ಗಳ ಸಭೆಯಲ್ಲಿ (ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು) ಅಂತಾರಾಷ್ಟ್ರೀಯ ವಿದ್ಯಮಾನಗಳ ಹಾಗೂ ವಿಶ್ವ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಐ.ಟಿ. ಉದ್ದಿಮೆಯ ಸ್ಥಿತಿಗತಿಗಳೇನು ಎಂಬ ಬಗ್ಗೆ ಅರ್ಥಪೂರ್ಣ ವಿಚಾರ ವಿನಿಮಯ ನಡೆಯಲಿದೆ.
- ಶ್ರೀಸಾಮಾನ್ಯನಿಗೆ ಮಾಹಿತಿ - ತಂತ್ರಜ್ಞಾನ, ಬಂಡವಾಳ ಹೂಡಿಕೆದಾರರಿಗೆ ಮಾಹಿತಿ ತಂತ್ರಜ್ಞಾನ, ತಾಂತ್ರಿಕ ವೇದಿಕೆಗಳಲ್ಲಿ ಮಾಹಿತಿ ತಂತ್ರಜ್ಞಾನ, ಸಾಫ್ಟ್‌ವೇರ್ ಎಂಜಿನಿಯರುಗಳಿಗೆ ... ಹೀಗೆ ವಿವಿಧ ವಿಸ್ತಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.
- ಇಲ್ಲಿ ನಡೆಯಲಿರುವ ಜಾಗತಿಕ ಕೊಡು-ಕೊಳ್ಳುವ ಸಮಾವೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಆಯಾಮವನ್ನೇ ಕಲ್ಪಿಸಲಿದೆ. ಈ ಮೇಳಕ್ಕೆ ಆಸಕ್ತ ಗ್ರಾಹಕರು, ಮಾರಾಟಗಾರರು ಆಗಮಿಸುವ ಕಾರಣ ವಿಶ್ವ ವಾಣಿಜ್ಯ ವ್ಯವಹಾರಕ್ಕೆ ಇದು ಸೂಕ್ತ ವೇದಿಕೆಯನ್ನು ಕಲ್ಪಿಸಲಿದೆ.
- ಈ ಮೇಳದಲ್ಲಿ ವಿಶ್ವದ ಹನ್ನೆರಡಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಈ ದೇಶಗಳು ಭಾರತೀಯ ಉದ್ದಿಮೆಗಳೊಂದಿಗೆ ಬಂಡವಾಳ ಹೂಡಿಕೆ, ಆಮದು, ತಂತ್ರಜ್ಞಾನ ವರ್ಗಾವಣೆ, ಹಾಲಿ ವ್ಯವಹಾರದ ಅಭಿವೃದ್ಧಿಯ ಬಗ್ಗೆ ಪರಾಮರ್ಶಿಸಲಿವೆ.
- ಬೆಂಗಳೂರು ಐಟಿ.ಕಾಂನ ಮತ್ತೊಂದು ಮಹತ್ವದ ಅಂಶವೆಂದರೆ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿರುವ ವಾಣಿಜ್ಯ ಪ್ರದರ್ಶನ. ಈ ಪ್ರದರ್ಶನದಲ್ಲಿ 220 ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಈ ಮೇಳದಲ್ಲಿ 12 ದೇಶಗಳ ಕಂಪನಿಗಳಲ್ಲದೆ ರಾಜ್ಯ ಹಾಗೂ ಕೇಂದ್ರ ಸರಕಾರದ ಸಂಸ್ಥೆಗಳೂ ಭಾಗವಹಿಸುತ್ತಿವೆ.
- ಮಾರಿಷಸ್, ಯುನೈಟೆಡ್ ಕಿಂಗ್‌ಡಮ್, ಜಪಾನ್, ಜರ್ಮನಿ, ದುಬೈ, ಶಾರ್ಜಾ, ಥೈವಾನ್, ಹಾಂಗ್‌ಕಾಂಗ್, ಸಿಂಗಪೂರ್, ಚೀನಾ ಹಾಗೂ ಬೆಲ್ಜಿಯಂ ಬೆಂಗಳೂರು ಐಟಿ.ಕಾಂನಲ್ಲಿ ಭಾಗವಹಿಸುತ್ತಿರುವ ರಾಷ್ಟ್ರಗಳು.
- ಮೈಕ್ರೋಸಾಫ್ಟ್, ಇನ್‌ಟೆಲ್, ಸಿಸ್ಕೋ, ವಿಎಸ್‌ಎನ್‌ಎಲ್, ಇನ್‌ಫೋಸಿಸ್, ಜಿಇ ಇನ್‌ಫರ್‌ಮೇಷನ್ ಟೆಕ್ನಾಲಜಿ, ವಿಪ್ರೋ, ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್, ಸಿಮನ್ಸ್ ಲಿಮಿಟೆಡ್, ಟಾಟಾ ಟೆಲಿಕಾಂ, ಸಿಟ್ರೆಕ್ಸ್, ಸಿಎಂಸಿ, ಐಟಿಸಿ ಇನ್‌ಫೋಟೆಕ್, ಕ್ಯಾನನ್, ಎಚ್‌ಸಿಎಲ್ ಹಾಗೂ ಇಸ್ರೋ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕಂಪನಿಗಳಾಗಿವೆ.
- ಈ ಎಲ್ಲ ಕಾರ್ಯಕ್ರಮಗಳಿಗೂ ಕಳಶಪ್ರಾಯವಾಗಿ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಗ್ರಾಮಾಂತರ ಐ.ಟಿ. ಕ್ವಿಜ್ ಏರ್ಪಡಿಸಲಾಗಿದೆ. ಇಂಡಿಯಾಇನ್‌ಫೋ.ಕಾಂಗೆ ಸೇರಿದ ಕ್ವಿಜ್‌ಬ್ರೆೃನ್.ಕಾಂನ ಗಿರಿ ಬಾಲಸುಬ್ರಹ್ಮಣ್ಯಂ ಗ್ರಾಮೀಣ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದ್ದಾರೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications