ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಯುದ್ಧ ತುಕಡಿ ಸೇರಲಿದೆ ಆಸ್ಟ್ರೇಲಿಯಾದ 1500 ಯೋಧರ ಪಡೆ

By Staff
|
Google Oneindia Kannada News

ಸಿಡ್ನಿ : ಭಯೋತ್ಪಾದನೆ ವಿರುದ್ಧ ಅಮೆರಿಕಾ ನಡೆಸುತ್ತಿರುವ ಯುದ್ಧವನ್ನು ಆಸ್ಟ್ರೇಲಿಯಾ ಬೆಂಬಲಿಸುತ್ತಿದ್ದು, ನವೆಂಬರ್‌ ತಿಂಗಳ ಮಧ್ಯದಲ್ಲಿ ತನ್ನ 1550 ಯೋಧರ ಮಿಲಿಟರಿ ಪಡೆಯನ್ನು ಅಮೆರಿಕಾ ಪಡೆಯಾಂದಿಗೆ ಸೇರಿಸಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಜಾನ್‌ ಹಾವರ್ಡ್‌ ಬುಧವಾರ ತಿಳಿಸಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆಗೆ ತಾಲೀಬಾನ್‌ ಜೊತೆ ಹೋರಾಟಕ್ಕೆ ಇಳಿದಿರುವ ಅಮೆರಿಕಾ ಪಡೆಯನ್ನು ಸೇರಲು ನಮ್ಮ ತುಕಡಿಗಳು ಒಂದೆರಡು ವಾರಗಳಲ್ಲೇ ಪಯಣ ಪ್ರಾರಂಭಿಸಲಿವೆ. ಒಟ್ಟಾರೆಯಾಗಿ ರಣರಂಗಕ್ಕೆ ಎಂದು ಕಾಲಿಡಲಿವೆ ಎಂಬ ದಿನಾಂಕ ಇನ್ನೂ ಗೊತ್ತುಪಡಿಸಿಲ್ಲ. 150 ಯೋಧರ ವಿಶೇಷ ವಾಯು ಸೇವಾ ದಳ (ಸಿಎಎಸ್‌) ಯುದ್ಧಭೂಮಿಯ ಆಯಕಟ್ಟಿನ ಜಾಗೆಗಳಲ್ಲಿ ಬೀಡುಬಿಡಲಿದ್ದು, ತಾಲಿಬಾನಿಗೆ ಈ ಪಡೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂದು ಹಾವರ್ಡ್‌ ಹೇಳಿದರು.

ಮಂಗಳವಾರ ರಾತ್ರಿ ಜಾರ್ಜ್‌ ಡಬ್ಲ್ಯು ಬುಷ್‌ ಕೊಟ್ಟ ಕರೆಗೆ ಹಾವರ್ಡ್‌ ಕೊಟ್ಟಿರುವ ಪ್ರತಿಕ್ರಿಯೆ ಇದು. ನಾಲ್ಕು ಎಫ್‌/ಎ 18 ಜೆಟ್‌ ಸ್ಟ್ರೈಕ್‌ ಫೈಟರ್‌ಗಳು, ಎರಡು ಪಿ 3 ಗುಪ್ತಾಚಾರಿ ವಿಮಾನಗಳು ಹಾಗೂ ಇಂಧನವನ್ನು ಮರು ತುಂಬಿಸಿಕೊಳ್ಳಬಲ್ಲ ಎರಡು 707 ವಿಮಾನಗಳನ್ನು ಹೋರಾಟದ ಕಣಕ್ಕೆ ಇಳಿಸಲಿದ್ದೇವೆ ಎಂದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X